Site icon Vistara News

Bike Wheeling : ಮಕ್ಕಳ ವ್ಹೀಲಿಂಗ್‌ ಶೋಕಿಗೆ ಪೋಷಕರಿಗೆ ದಂಡ

FIR against parents of children for bike wheeling

ಬೆಂಗಳೂರು: ಮಗನ ವ್ಹೀಲಿಂಗ್‌ ಶೋಕಿಗೆ (Bike Wheeling) ಪೋಷಕರು ಶಿಕ್ಷೆ ಅನುಭವಿಸುವಂತಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹೊರವಲಯದಲ್ಲಿ ಬೈಕ್ ವ್ಹೀಲಿಂಗ್ (Wheeling Stunt) ಮಿತಿ ಮೀರಿದೆ. ಮೀಸೆ ಚಿಗುರದ ಯುವಕರ ಹುಚ್ಚಾಟಕ್ಕೆ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದು ಮಾತ್ರವಲ್ಲ, ಅದೆಷ್ಟೋ ಅಮಾಯಕರು ಪ್ರಾಣಬಿಟ್ಟಿದ್ದಾರೆ.

ನಗರದಲ್ಲಿ ಪುಂಡರ ವ್ಹೀಲಿಂಗ್ ಶೋಕಿ ಇನ್ನೂ ನಿಂತಿಲ್ಲ. ಮುಖ್ಯ ರಸ್ತೆಯಲ್ಲೇ ಯುವಕರು ವ್ಹೀಲಿಂಗ್ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದು ಹೆಚ್ಚಾಗಿದೆ. ವ್ಹೀಲಿಂಗ್‌ ಮಾಡುವ ಸವಾರರ ವಿರುದ್ಧ ಪೊಲೀಸರು ಅದೆಷ್ಟೇ ಕಾರ್ಯಾಚರಣೆ ನಡೆಸಿದರೂ, ಪುಂಡರು ಡೋಂಟ್‌ ಕೇರ್‌ ಅಂತಿದ್ದರು.

ಬೈಕ್ ಜತೆ ಸರ್ಕಸ್ ಮಾಡುತ್ತಾ, ಜನಸಂದಣಿಯಿರುವ ರಸ್ತೆಯಲ್ಲೇ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಟಾರ್ಚರ್ ಕೊಡುತ್ತಿದ್ದರು. ವ್ಹೀಲಿಂಗ್ ಮಾಡುತ್ತಿರುವ ಪುಂಡರ ಹಾವಳಿಗೆ ಸಾರ್ವಜನಿಕರು ಭಯಭೀತರಾಗಿದ್ದರು. ಸದ್ಯ ಬೆಂಗಳೂರಿನ ಬಾಣಸವಾಡಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ವ್ಹೀಲಿಂಗ್‌ ಪುಂಡಾಟ ಮಾಡುತ್ತಿದ್ದವರಿಗೆ ಖಾಕಿ ಶಾಕ್ ಕೊಟ್ಟಿದೆ.

ಇದನ್ನೂ ಓದಿ: Shah Rukh Khan: ಬಟ್ಟೆ ಬಿಚ್ಚಿ ಮಗನ ಬ್ರ್ಯಾಂಡ್ ಪ್ರಚಾರ ಮಾಡಿದ ಶಾರುಖ್‌ ಖಾನ್‌!

ವ್ಹೀಲಿಂಗ್‌ ಮಾಡುತ್ತಿದ್ದ ಕಾರಣಕ್ಕೆ ಮೂರು ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇಬ್ಬರು ಯುವಕರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಬಾಲಕನೊಬ್ಬ ಬೈಕ್‌ ವ್ಹೀಲಿಂಗ್‌ ಮಾಡಿದ್ದು, ಆತ ಅಪ್ರಾಪ್ತನಾಗಿರುವ ಹಿನ್ನೆಲೆಯಲ್ಲಿ ಪೋಷಕರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಮಕ್ಕಳ ತಪ್ಪಿಗೆ ಪೋಷಕರು ಶಿಕ್ಷೆಯನ್ನು ಅನುಭವಿಸುವಂತಾಗಿದೆ.

ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ ಸಿಕ್ಕಸಿಕ್ಕ ರೋಡ್‌ಗಳಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುವ ಚಟ ಹಲವು ಯುವಕರಲ್ಲಿ ಕಂಡುಬರುತ್ತಿದೆ. ರಿಂಗ್ ರೋಡ್, ಹೈವೇ, ಸಿಟಿ ಸೆಂಟರ್ ರೋಡ್‌ಗಳಲ್ಲಿ ಭಯಾನಕ ವ್ಹೀಲಿಂಗ್ ಕಂಡುಬರುತ್ತಿದೆ. ಡ್ರ್ಯಾಗ್ ರೇಸ್, ವ್ಹೀಲಿಂಗ್ ವಿರುದ್ಧ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಯುವಕರಿಬ್ಬರು ಅರೆಸ್ಟ್‌

ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದ ಇಬ್ಬರನ್ನು ಜೆ.ಬಿ ನಗರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಸುರಂಜನ್ ದಾಸ್ ಮುಖ್ಯ ರಸ್ತೆಯಲ್ಲಿ ಅಪಾಯಕಾರಿ ಬೈಕ್ ವ್ಹೀಲಿಂಗ್‌ ಮಾಡುತ್ತಿದ್ದರು. ಇಬ್ಬರು ವಾಹನ ಸವಾರರನ್ನು ಬಂಧಿಸಿ ಬೈಕ್ ಜಪ್ತಿ ಮಾಡಿದ್ದಾರೆ. ಇಬ್ಬರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version