ಬನ್ನೇರುಘಟ್ಟ : ಬಿಎಂಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಬನ್ನೇರುಘಟ್ಟ ಮುಖ್ಯರಸ್ತೆಯ ಆನಂದ್ ಸಭಾ ಕಲ್ಯಾಣ ಮಂಟಪದ ಬಳಿ ನಡೆದಿದೆ.
ಉತ್ತರಹಳ್ಳಿಯ ಯಾದಲ್ ನಗರದ ನಿವಾಸಿ ಗುಣಶಂಕರ್ ಮೃತ ದುರ್ದೈವಿ. ಬನ್ನೇರುಘಟ್ಟದಿಂದ- ಬೆಂಗಳೂರು ಕಡೆಗೆ ಬಸ್ ಹೊರಟಿತ್ತು. ಹಿಂಬದಿಯಿಂದ ಬಿಎಂಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ | ಡಿಕ್ಕಿ ರಭಸಕ್ಕೆ ಹೊತ್ತಿ ಉರಿದ ಬಸ್, 6 ಪ್ರಯಾಣಿಕರ ಸಜೀವ ದಹನ
ಡಿಕ್ಕಿಯಾಗುತ್ತಿದ್ದಂತೆ ಬೈಕ್ ಸವಾರ ಬಸ್ ಚಕ್ರದ ಕೆಳಗೆ ಸಿಲುಕಿ ಸ್ಳಳದಲ್ಲಿಯೇ ಮೃತಪಟ್ಟಿದ್ದಾರೆ. ಸದ್ಯ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | ಕೆಂಗೇರಿ ಬಳಿ ಮೆಟ್ರೊ ಪಿಲ್ಲರ್ಗೆ ಡಿಕ್ಕಿ ಹೊಡೆದ ಸರಕಾರಿ ಬಸ್, ನಾಲ್ಕು ಮಂದಿಗೆ ಗಾಯ