Site icon Vistara News

Dead Body: ತಾಯಿಯ ಶವದೊಂದಿಗೆ ಎರಡು ದಿನ ಕಳೆದ ಬಾಲಕ, ರಾಜಧಾನಿಯಲ್ಲೊಂದು ಮನ ಕಲಕುವ ಘಟನೆ

dead body

ಬೆಂಗಳೂರು: ರಾಜಧಾನಿಯ ಆರ್‌ಟಿ ನಗರದಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು, ತಾಯಿಯ‌ ಶವದೊಂದಿಗೆ 14 ವರ್ಷದ ಬಾಲಕನೊಬ್ಬ ಎರಡು ದಿನ ಕಳೆದಿದ್ದಾನೆ.

ಆರ್.ಟಿ.ನಗರ ಠಾಣೆ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಗಂಗಮ್ಮ ದೇವಸ್ಥಾನ ಬಳಿ ಘಟನೆ ನಡೆದಿದೆ. ಅಣ್ಣಮ್ಮ (44) ಮೃತ ದುರ್ದೈವಿ ಮಹಿಳೆ. ಲೋ ಬಿಪಿ ಮತ್ತು ಶುಗರ್‌ನಿಂದಾಗಿ ಇವರು ಸಾವಿಗೀಡಾಗಿದ್ದಾರೆ. ಫೆಬ್ರವರಿ 26ರಂದು ಮನೆಯಲ್ಲಿ ಮಲಗಿದ್ದಾಗಲೇ ಇವರು ಸಾವಿಗೀಡಾಗಿದ್ದರು.

ಫೆಬ್ರವರಿ‌ 28ರವರೆಗೆ ಬಾಲಕ ತಾಯಿ ಶವದ ಜೊತೆಗೆ ಇದ್ದ. ಹಸಿವಾದಾಗ ಹೊರಗೆ ಬಂದು ಊಟ, ತಿಂಡಿ‌ ತೆಗೆದುಕೊಂಡು‌ ಮನೆ ಸೇರಿಕೊಳ್ಳುತ್ತಿದ್ದ. ರಾತ್ರಿಯೆಲ್ಲಾ ತಾಯಿಯ ಜೊತೆಯಲ್ಲೇ ಮಲಗಿ ಕಾಲ‌ ಕಳೆಯುತ್ತಿದ್ದರೂ ಈತ ಸುತ್ತಮುತ್ತಲಿನವರಿಗೆ ತಾಯಿಯ ಸಾವಿನ ಬಗ್ಗೆ ಹೇಳಿರಲೇ ಇಲ್ಲ. ನಂತರ ತಂದೆಯ ಸ್ನೇಹಿತರಿಗೆ ತಾಯಿ ಮಾತನಾಡುತ್ತಿಲ್ಲ ಎಂದು ಹೇಳಿದ್ದ. ಅವರು ಬಂದು‌ ನೋಡಿದಾಗ ಸಾವಿನ ವಿಚಾರ ಗೊತ್ತಾಗಿದೆ.

ಬಾಲಕನ ತಂದೆ, ಅಣ್ಣಮ್ಮ ಅವರ ಪತಿ ಇಳಂಗೋವನ್ ಒಂದು ವರ್ಷದ ಹಿಂದೆಯಷ್ಟೇ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದರು. ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿ ವಾಸವಿದ್ದರು.

ಇದನ್ನೂ ಓದಿ: Dead body in plastic | ಶವ ಸಂಸ್ಕಾರಕ್ಕೆ ಹಣವಿಲ್ಲದೆ ಪತ್ನಿ ಶವವನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಊರಿಗೆ ಸಾಗಿಸಿದ ಗಂಡ

Exit mobile version