ಬೆಂಗಳೂರು: ವರ್ಷಗಳಿಂದ ನನೆಗುದಿಯಲ್ಲಿದ್ದ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಆ್ಯಪ್ ʼನಮ್ಮ ಬಿಎಂಟಿಸಿ’ (namma BMTC app) ಇದೀಗ ಜನರ ಬಳಕೆಗೆ ಬಿಡುಗಡೆಯಾಗಿದೆ.
ಹಲವು ಬಾರಿ ಗಡುವು ಕೊಟ್ಟು ಕೊಟ್ಟು ಕೊನೆಗೂ ಮೊಬೈಲ್ ಆ್ಯಪ್ ಲಾಂಚ್ ಮಾಡಲಾಗಿದೆ. ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ʼನಮ್ಮ ಬಿಎಂಟಿಸಿʼ ಆ್ಯಪ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ನಮ್ಮ ಬಿಎಂಟಿಸಿ ಆ್ಯಪ್ ವಿಶೇಷತೆಗಳು
- ಬಳಕೆದಾರರಿಗೆ ನೈಜ ಸಮಯದಲ್ಲಿ ಬಿಎಂಟಿಸಿ ಬಸ್ ಟ್ರ್ಯಾಕ್ ಮಾಡಲು ಸಹಾಯವಾಗಲಿದೆ.
- ಪ್ರಯಾಣವನ್ನು ತೊಂದರೆಯಿಂದ ಮುಕ್ತವಾಗಿಸಲು ಇತರ ಆಯ್ಕೆಗಳಿವೆ.
- ಬಸ್ ದರದ ವಿವರಗಳು, ಮಾರ್ಗಗಳು ಮತ್ತು ವೇಳಾಪಟ್ಟಿ ಲಭ್ಯವಿರಲಿವೆ.
- 400 ವೋಲ್ವೋ ಬಸ್‌ಗಳು ಸೇರಿ ದಿನ ಸುಮಾರು 5,600 ಬಸ್‌ಗಳನ್ನು ನಿರ್ವಹಿಸುತ್ತದೆ.
- ಮುಂಬರುವ ತಿಂಗಳುಗಳಲ್ಲಿ ಸ್ಕ್ರ್ಯಾಪ್ ಆಗಲಿರುವ ಬಸ್‌ಗಳಲ್ಲಿ ಲೈವ್ ಟ್ರ್ಯಾಕಿಂಗ್ ಲಭ್ಯವಿರುವುದಿಲ್ಲ.
- ʼನಮ್ಮ ಬಿಎಂಟಿಸಿ’ ಆ್ಯಪ್ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿದೆ.
- ಭಾಷೆ ಬದಲಾಯಿಸಲು ಸರಳವಾದ ಆಯ್ಕೆಯನ್ನೂ ನೀಡಲಾಗಿದೆ
- ಸೈನ್ ಇನ್ ಮಾಡುವ ಮೂಲಕ ಅಥವಾ ಗೆಸ್ಟ್ ಯೂಸರ್ ಆಗಿಯೂ ಬಳಸಬಹುದು
- ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡಲು ಎಸ್ಒಎಸ್ ವೈಶಿಷ್ಟ್ಯ ಎಂಬೆಡ್ ಮಾಡಲಾಗಿದೆ.
- ಬಿಎಂಟಿಸಿ ಸಹಾಯವಾಣಿಗಳಿಗೆ ಸಂಪರ್ಕಿಸಲು ಆ್ಯಪ್ನಲ್ಲಿ ಲಿಂಕ್ ಸಹ ನೀಡಲಾಗಿದೆ
- ವಾಹನ ನಿಲುಗಡೆ, ವಿಶ್ರಾಂತಿ ಕೊಠಡಿ, ಎಟಿಎಂಗಳ ಬಗ್ಗೆಯೂ ಮಾಹಿತಿ ಇದೆ.
- ಕುಡಿಯುವ ನೀರಿನ ಸೌಲಭ್ಯ, ನಿರ್ದಿಷ್ಟವಾಗಿ ಬಸ್ ನಿಲ್ದಾಣಗಳು ಮತ್ತು ಬಿಟಿಎಂಸಿ ಒದಗಿಸುವ ಸೌಲಭ್ಯಗಳ ಮಾಹಿತಿ.
- ʼಶುಲ್ಕ ಕ್ಯಾಲ್ಕುಲೇಟರ್’ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಸೇರಿಸಲಾಗುತ್ತದೆ.