ಬೆಂಗಳೂರು: ಹಿಂದೂ ಧಾರ್ಮಿಕ ಉತ್ಸವಗಳಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಹಿಂದೂ ಸಂಘಟನೆಗಳ ಒತ್ತಡದ ವಿರುದ್ಧ ಮಾತನಾಡಿದ್ದ ಬಿಜೆಪಿ ಶಾಸಕರ ವಿರುದ್ಧ ಹಿಂದೂ ಸಂಘಟನೆಗಳು ತಿರುಗಿಬಿದ್ದಿವೆ.
ಚಿಕ್ಕಪೇಟೆಯ ಬಿಜೆಪಿ ಶಾಸಕ ಉದಯ ಗರುಡಾಚಾರ್ ಹಾಗೂ ಭಜರಂಗ ದಳದ ನಡುವೆ ಧರ್ಮ ವಾರ್ ಶುರುವಾಗಿದೆ. ನಾಳೆ ಷಷ್ಠಿ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿ ಪುರಂನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ಬೆಳ್ಳಿ ತೇರು ನೇರವೇರಲಿದೆ. ಈ ವೇಳೆ ಹಿಂದೂಗಳನ್ನು ಹೊರತು ಪಡಿಸಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಭಜರಂಗದಳ ಮನವಿ ಮಾಡಿತ್ತು.
ಈ ಬಗ್ಗೆ ಮಾತನಾಡಿದ್ದ ಚಿಕ್ಕಪೇಟೆ ಶಾಸಕ ಉದಯ್ ಗರುಡಚಾರ್, ಎಲ್ಲರಿಗೂ ಅವಕಾಶ ನೀಡಬೇಕು, ನಾವೆಲ್ಲ ಒಂದೇ ಎನ್ನುವ ಹೇಳಿಕೆ ನೀಡಿದ್ದರು. ಶಾಸಕರ ಹೇಳಿಕೆ ಬೆನ್ನಲ್ಲೆ ಹಿಂದೂ ಸಂಘಟನೆಗಳ ಆಕ್ರೋಶ ಸ್ಫೋಟಗೊಂಡಿದೆ. ಮಸೀದಿ ಜಾಗಗಳಲ್ಲಿ ನಿಮಗೆ ತಾಕತ್ತಿದ್ದರೆ ಹಿಂದೂ ವ್ಯಾಪಾರಿಗಳಿಗೆ ಅವಕಾಶ ನೀಡಿ. ಸೆಕ್ಯುಲರಿಸಂ ಅನ್ನೋದು ಹಿಂದೂ ದೇವಾಲಯದ ವಿಚಾರದಲ್ಲಿ ಮಾತ್ರ ಯಾಕೆ? ನಿಮ್ಮದೇ ಕ್ಷೇತ್ರದ ಮಸೀದಿ ಜಾಗಗಳಲ್ಲಿ ಹಿಂದೂ ವ್ಯಾಪಾರಿಗಳಿಗೆ ಅವಕಾಶ ಕೊಡಿಸುವ ಶಕ್ತಿ ಇದೆಯಾ ಎಂದು ಶಾಸಕರಿಗೆ ಹಿಂದೂ ಸಂಘಟನೆಗಳ ಮುಖಂಡರು ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ | ಸಿಲಿಕಾನ್ ಸಿಟಿಗೂ ಕಾಲಿಟ್ಟ ಧರ್ಮ ದಂಗಲ್ | ಅನ್ಯಧರ್ಮೀಯರ ವ್ಯಾಪಾರಕ್ಕೆ ಬ್ರೇಕ್ ಹಾಕಲು ಹಿಂದೂ ಸಂಘಟನೆ ಒತ್ತಾಯ