ಬೆಂಗಳೂರು: ಮಳವಳ್ಳಿಯ ಟಿ.ಕೆ.ಹಳ್ಳಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂದೆಂದೂ ಕಾಣದಷ್ಟು ವ್ಯಾಪಕ ಮಳೆಯಾಗುತ್ತಿದೆ. ನೀರು ಸರಬರಾಜು ಮಾಡುವ ಯಂತ್ರಾಗಾರವು ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದ ಬೆಂಗಳೂರು ನಗರಕ್ಕೆ (BWSSB Helpline) ನೀರು ಸರಬರಾಜು ಮಾಡುವ ಕಾವೇರಿ ನೀರು ಸ್ಥಗಿತಗೊಂಡಿದೆ.
ಯಂತ್ರಗಾರ ದುರಸ್ತಿಗೆ ಸಾಕಷ್ಟು ಸಮಯ ಬೇಕಾಗಿದ್ದು, ಮಂಡಳಿಯು ದುರಸ್ತಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಂಡಿದೆ. ಬೆಂಗಳೂರು ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರ ಸಹಾಯಕ್ಕೆ ವಿಶೇಷ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಟ್ವೀಟ್ ಮೂಲಕ ಜಲಮಂಡಲಿ ಹಂಚಿಕೊಂಡಿದೆ.
ಸೇವಾ ಠಾಣೆಗಳಿಂದ ಟ್ಯಾಂಕರ್ ನೀರು
ಪ್ರಸ್ತುತ ಮನೆಗಳಲ್ಲಿ ಲಭ್ಯವಿರುವ ನೀರನ್ನು ದಿನನಿತ್ಯ ಬಳಕೆಗಳಾದ ಅಡುಗೆ ಹಾಗೂ ಕುಡಿಯಲು ಮಾತ್ರ ಬಳಸಿಕೊಂಡು ಇನ್ನಿತರ ಅವಶ್ಯಕತೆಗಳಿಗೆ ಜನರು ಅನುಕೂಲವಾಗುವ ಇತರೆ ಮೂಲಗಳಿಂದ ನೀರು ಭರಿಸಬೇಕೆಂದು ಜಲಮಂಡಲಿ ಕೋರಿದೆ.
ತುರ್ತು ಸಂದರ್ಭದಲ್ಲಿ ನೀರಿನ ಅವಶ್ಯಕತೆಯನ್ನು ಪೂರೈಸಲು ಮಂಡಳಿಯು ಸಾರ್ವಜನಿಕರಿಗೆ ಸಮೀಪದ ಸೇವಾ ಠಾಣೆಗಳಿ೦ದ ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡಲು ಸರ್ವಸನ್ನದ್ಧವಾಗಿದೆ.ಈ ಹಿನ್ನಲೆಯಲ್ಲಿ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಡಲ್ ಅಧಿಕಾರಿಗಳನ್ನು ಹಾಗೂ ಸಂಬಂಧಪಟ್ಟ ನೀರು ಸರಬರಾಜು ವಲಯದ ಅಧಿಕಾರಿಗಳನ್ನು ಸಂಪರ್ಕಿಸಲು ಮನವಿ ಮಾಡಿದೆ.
ಇದನ್ನೂ ಓದಿ | Cauvery Water | ಮಳೆ ನೀರಲ್ಲಿ ಮುಳುಗಿದ ಯಂತ್ರಾಗಾರಗಳು: ಇನ್ನೆರಡು ದಿನ ಬೆಂಗಳೂರಿಗೆ ಕಾವೇರಿ ನೀರಿಲ್ಲ