Site icon Vistara News

Cabinet Meeting : ಲೋಕಾಯುಕ್ತ ಕೈಯಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ; ಸಂಪುಟ ಒಪ್ಪಿಗೆ

lokayukta raid on officers

ಬೆಂಗಳೂರು: ಲೋಕಾಯುಕ್ತ ದಾಳಿಯಲ್ಲಿ (Lokayukta raid) ಸಿಕ್ಕಿಬಿದ್ದು ತಪ್ಪಿತಸ್ಥರೆಂದು ಸಾಬೀತಾದ ಅಧಿಕಾರಿಗಳಿಗೆ (Guilty officers) ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿ (Compulsary retirement) ನೀಡುವ ಮಹತ್ವದ ತೀರ್ಮಾನಕ್ಕೆ ಸಂಪುಟ ಒಪ್ಪಿಗೆ (Cabinet Meeting) ನೀಡಿದೆ. ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದೂ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು (Major Cabinet Decision) ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌.ಕೆ ಪಾಟೀಲ್‌ (HK Patil) ತಿಳಿಸಿದರು.

ಕರ್ತವ್ಯದಲ್ಲಿರುವಾಗ ಹಣಕಾಸು ದುರುಪಯೋಗ ಮಾಡಿಕೊಂಡು, ಲಂಚದ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ ಬಿದ್ದು ತಪ್ಪಿತಸ್ಥರೆಂದು ಸಾಬೀತಾದ ಕೆಲವು ಅಧಿಕಾರಿಗಳನ್ನು ಸೇವೆಯಿಂದಲೇ ಶಾಶ್ವತವಾಗಿ ತೆರವುಗೊಳಿಸುವ ವಿಚಾರದಲ್ಲಿ ಸುದೀರ್ಘವಾಗಿ ಚರ್ಚೆ ನಡೆದು ಅಂತಿಮವಾಗಿ ಅವರಿಗೆ ಕಡ್ಡಾಯ ನಿವೃತ್ತಿ ನೀಡುವ ತೀರ್ಮಾನ ಮಾಡಲಾಯಿತು. ಇದು ಈ ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದ ತೀರ್ಮಾನವೇ ಅಥವಾ ಒಟ್ಟಾರೆಯಾಗಿ ತೆಗೆದುಕೊಂಡ ನಿರ್ಧಾರವೇ ಎನ್ನುವುದನ್ನು ಸ್ಪಷ್ಟಪಡಿಸಲಾಗಿಲ್ಲ.

ಈ ಸಂಪುಟ ಸಭೆಯಲ್ಲಿ ಮೂವರು ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೆ ಒಪ್ಪಿಗೆ ನೀಡಲಾಗಿದೆ. ಅವರೆಂದರೆ,

  1. ಹಣಕಾಸು ದುರುಪಯೋಗದ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಎಂ.ಎಚ್‌ ನಾಗೇಶ್ ಅವರಿಗೆ ಸೆಷನ್ಸ್‌ ನ್ಯಾಯಾಲಯ ಐದು ವರ್ಷ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ.
  2. ಲಂಚ ಸ್ವೀಕಾರದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ರಾಮನಗರದ ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಉಷಾ ಕುಂದರಗಿ ಅವರಿಗೆ ಕಡ್ಡಾಯ ನಿವೃತ್ತಿಗೆ ಸೂಚಿಸಲಾಗಿದೆ.
  3. ಇಂದಿರಾನಗರ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಎಸ್‌.ಟಿ. ನಾಗಮಣಿ ಅವರ ವಿರುದ್ಧದ ಪ್ರಕರಣವೂ ಸಾಬೀತಾಗಿದ್ದು, ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿ ಮಾಡಲು ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ.
  4. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಬಿಇಓ ಗದಗ ಜಿಲ್ಲೆಯ ಮುಂಡರಗಿ ಎಸ್ ಎನ್ ಹಳ್ಳಿ ಗುಡಿ ಅವರನ್ನು ಸೇವೆಯಿಂದ ವಜಾಗೊಳಿಸಲು ತೀರ್ಮಾನ ಮಾಡಲಾಗಿದೆ.

ಅಂಗನವಾಡಿಗಳಲ್ಲಿ ಇನ್ನು ಪಾಮೋಯಿಲ್‌ ಬದಲು ಸೂರ್ಯಕಾಂತಿ ಎಣ್ಣೆ

ಪಾಮ್‌ ಆಯಿಲ್‌ ಬಗ್ಗೆ ಆರೋಗ್ಯಕ್ಕೆ ಸಂಬಂಧಿಸಿ ಕೆಲವು ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಅಂಗನವಾಡಿಗಳಲ್ಲಿ ಅದನ್ನು ಬಳಸದಂತೆ ಸರ್ಕಾರ ಸೂಚಿಸಿದೆ. ಪಾಮ್‌ ಆಯಿಲ್‌ ಬದಲಾಗಿ ಮುಂದೆ ಸೂರ್ಯಕಾಂತಿ ಎಣ್ಣೆ ಬಳಕೆಗೆ ಸೂಚಿಸಲಾಗಿದೆ. ಇದು ಸೂರ್ಯಕಾಂತಿ ಎಣ್ಣೆ ಬಳಕೆಗೆ ನೀಡುವ ಉತ್ತೇಜನವೂ ಹೌದು ಎಂದು ಹೇಳಲಾಗಿದೆ. ಸೂರ್ಯಕಾಂತಿ ಎಣ್ಣೆ ಬಳಕೆಗೆ ಉತ್ತೇಜನ 66 ಕೋಟಿ ತೆಗೆದಿಡಲು ತೀರ್ಮಾನ ಮಾಡಲಾಗಿದೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹೆಸರು ಬದಲಾವಣೆ

ಹಾಲಿ ಇರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹೆಸರು ಬದಲಿಸಿ ಕರಾವಳಿ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಬದಲಾವಣೆ ಮಾಡಲು ಸಂಪುಟದಲ್ಲಿ ನಿರ್ಧಾರ ಮಾಡಲಾಗಿದೆ. ಇದುವರೆಗೆ ಕರಾವಳಿಯ ಮೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದ ಇದಕ್ಕೆ ಚಿಕ್ಕಮಗಳೂರು ಜಿಲ್ಲೆಯನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಉತ್ತರ ಕನ್ನಡದ ಎಲ್ಲ ಜಿಲ್ಲೆಗಳ ಸೇರ್ಪಡೆಯಾಗಿದೆ.

ಇದನ್ನೂ ಓದಿ: Cabinet Meeting : ಸಿದ್ದರಾಮಯ್ಯ, ಡಿಕೆಶಿ ಮೇಲಿನ ಕೇಸ್‌ ವಾಪಸ್‌, ಲೋಕಾಯುಕ್ತ ಬಲೆಗೆ ಬಿದ್ದ ಡಾಕ್ಟರ್ಸ್‌ ಸೇವೆಯಿಂದ ಔಟ್‌

Exit mobile version