ಬೆಂಗಳೂರು: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್ 26ರಂದು (ಮಂಗಳವಾರ) ಕರೆ ನೀಡಲಾಗಿರುವ ಸ ಬೆಂಗಳೂರು ಬಂದ್‌ಗೆ (Bangalore bandh on September 26) ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala Samrakshana Samiti) ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ (Cauvery Protest) ಬಂದ್ ಬಗ್ಗೆ ತೀರ್ಮಾನ ತೆಗೆದುಕೊಂಡ ಬೆನ್ನಿಗೇ ನಾನಾ ಸಂಘಟನೆಗಳು ತಮ್ಮ ಬೆಂಬಲವನ್ನು ಘೋಷಣೆ ಮಾಡಿವೆ.
ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ಪ್ರಮುಖ ಅಪಾರ್ಟ್ ಮೆಂಟ್ ಅಸೋಸಿಯೇಷನ್, ಲೇಔಟ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಐಟಿ ಕಂಪನಿಗಳು ಭಾಗಿಯಾಗಿದ್ದವು. ಬಂದ್ ಘೋಷಣೆಯಾದ ಬಳಿಕ ಹಲವು ಸಂಘಟನೆಗಳು ತಾವು ನಿಮ್ಮ ಜತೆಗಿರುತ್ತೇವೆ ಎಂದು ಪ್ರಕಟಿಸಿವೆ. ಹೀಗಾಗಿ ಬಂದ್ ಯಶಸ್ವಿಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ.
ಏನಿರುತ್ತೆ?: ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಾಲಿನ ಬೂತ್, ಅಗತ್ಯ ವಸ್ತುಗಳು, ಮೆಟ್ರೋ, ಆಂಬುಲೆನ್ಸ್
ಏನಿರಲ್ಲ: ಆಟೋ, ಕ್ಯಾಬ್, ಗೂಡ್ಸ್ ವಾಹನಗಳು, ಖಾಸಗಿ ಬಸ್‌ಗಳು, ಥಿಯೇಟರ್, ಸೂಪರ್ ಮಾರ್ಕೆಟ್, ಪೆಟ್ರೋಲ್ ಬಂಕ್, ಶಾಲಾ -ಕಾಲೇಜ್‌ಗಳು, ಅಂಗಡಿಗಳು, ಬೀದಿಬದಿ ಅಂಗಡಿಗಳು, ಜ್ಯುವೆಲ್ಲರಿ ಶಾಪ್‌ಗಳು, ಕೈಗಾರಿಕೆಗಳು ಹೋಟೆಲ್‌ಗಳು, ಮಾಲ್‌ಗಳು
ಬಂದ್‌ಗೆ ಬೆಂಬಲ ನೀಡಿರುವ ಸಂಘಟನೆಗಳು
- ಅಖಿಲ ಕರ್ನಾಟಕ ಯುವ ಕನ್ನಡಿಗರ ವೇದಿಕೆ
- ಕರ್ನಾಟಕ ಚಾಲಕರ ವೇದಿಕೆ
- ಕರ್ನಾಟಕ ಕನ್ನಡಿಗರ ವೇದಿಕೆ
- ಕರ್ನಾಟಕ ಯುವ ರಕ್ಷಣಾ ವೇದಿಕೆ
- ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ
- ಕಾವೇರಿ ಕನ್ನಡಿಗರ ವೇದಿಕೆ
- ಅಖಿಲ ಭಾರತ ಕಾರ್ಮಿಕರ ಹಿತರಕ್ಷಣಾ ವೇದಿಕೆ
- ಜೈ ಭಾರತ ರಕ್ಷಣಾ ವೇದಿಕೆ
- ಕಾರ್ಮಿಕರ ಪಡೆ
- ಕರವೇ ಕನ್ನಡಿಗರ ಸಾರಥ್ಯ
- ಕರವೇ ಕನ್ನಡ ಸೇನೆ
- ನಮ್ಮ ನಾಡ ರಕ್ಷಣಾ ವೇದಿಕೆ
- ಕರ್ನಾಟಕ ಸಿಂಹ ಘರ್ಜನೆ ವೇದಿಕೆ
- ಕರುನಾಡ ಕಾವಲು ಪಡೆ
- ಜೈ ಕರ್ನಾಟಕ
- ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ವೇದಿಕೆ
- ಹೊಯ್ಸಳ ಸೇನೆ
- ಕರವೇ ಗಜಸೇನೆ
- ಜೈ ಕರುನಾಡ ಯುವಸೇನೆ
- ಕರುನಾಡ ಯುವಪಡೆ
- ಕೆಂಪೇಗೌಡ ಸೇನೆ
- ಒಕ್ಕಲಿಗರ ಯುವ ವೇದಿಕೆ
- ನೆರವು ಕಟ್ಟದ ಕಾರ್ಮಿಕರ ಸಂಘ
- ಅಖಿಲ ಕರ್ನಾಟಕ ಯುವ ಸೇನೆ
- ಯುವ ಶಕ್ತಿ ಕರ್ನಾಟಕ
- ದಲಿತ ಸಂರಕ್ಷಣ ಸಮಿತಿ
- ಕರ್ನಾಟಕ ಸಮರ ಸೇನೆ
- ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ
- ದಲಿತ ಜನಸೇನಾ
- ಕರುನಾಡ ಜನ ಬೆಂಬಲ ವೇದಿಕೆ
- ಕರ್ನಾಟಕ ದಲಿತ ಜನಸೇನೆ
- ಜೈ ಭಾರತ ಚಾಲಕರ ಸಂಘ
- ರಾಜ್ಯ ಕರ್ನಾಟಕ ಸೇನೆ
- ಕರವೇ ಜನಸೇನೆ
- ಅಖಂಡ ಕರ್ನಾಟಕ ರಕ್ಷಣಾ ವೇದಿಕೆ
- ಕರುನಾಡ ಸೇನೆ
- ಕರ್ನಾಟಕ ಚಳುವಳಿ ವೇದಿಕೆ
- ಕನ್ನಡ ಸಾಹಿತ್ಯ ಪರಿಷತ್
- ಓಲಾ ಹಾಗೂ ಉಬರ್ ಮಾಲೀಕರ ಸಂಘ
- ರಾಜ್ಯ ಕಬ್ಬು ಬೆಳೆಗಾರರ ಸಂಘ
- ಆಮ್ ಆದ್ಮಿ ಪಕ್ಷ
- ಕನ್ನಡ ಚಳವಳಿ ಕೇಂದ್ರ ಸಮಿತಿ
- ಜಯ ಕರ್ನಾಟಕ ಸಂಘಟನೆ
- ರಾಷ್ಟ್ರೀಯ ಚಾಲಕರ ಒಕ್ಕೂಟ
- ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘ
- ತಮಿಳು ಸಂಘ
- ಕೆಂಪೇಗೌಡ ಸಮಿತಿ
- ರಾಜಸ್ತಾನಿ ಭಾಷಿಕರ ಸಂಘ
- ಕರ್ನಾಟಕ ರಕ್ಷಣಾ ಸೇನೆ
ಮಂಗಳವಾರದ ಬಂದ್ ಹೇಗಿರಲಿದೆ?
1.ಬೆಂಗಳೂರಿನ ಬಹುತೇಕ ಕನ್ನಡ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಸ್ಥಳೀಯವಾಗಿ ಬಂದ್‌ನ್ನು ಯಶಸ್ವಿಗೊಳಿಸುವ ಪ್ರಯತ್ನಗಳನ್ನು ಕಾರ್ಯಕರ್ತರು ನಡೆಸುವ ಸಾಧ್ಯತೆಗಳಿವೆ.
2. ಕರ್ನಾಟಕ ವಿದ್ಯಾರ್ಥಿ ವೇದಿಕೆ ರಾಜ್ಯಾಧ್ಯಕ್ಷರಾದ ಡಾ.ಶಿವಶಂಕರ್ ಅವರು ಶಾಲೆ ಕಾಲೇಜುಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದ್ದಾರೆ. ಕಾವೇರಿ ವಿಚಾರವಾಗಿರುವುದರಿಂದ ಬಂದ್‌ಗೆ ಬೆಂಬಲ ಕೊಡುವ ಸಾಧ್ಯತೆಗಳಿವೆ. ಇನ್ನೂ ಅಧಿಕೃತವಾಗಿ ಶಾಲೆ ಕಾಲೇಜುಗಳ ಬಂದ್ ಘೋಷಣೆಯಾಗಿಲ್ಲ.
3. ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಅವರು ಬಂದ್ ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಅಂದು ಎಲ್ಲಾ ವಾಹನಗಳು ಸಂಚಾರ ನಿಲ್ಲಿಸಲಾಗುತ್ತದೆ ಎಂದಿದ್ದಾರೆ.
4.ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ ನೀಡುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಮಾಹಿತಿ ನೀಡಿದ್ದಾರೆ.
5. ಓಲಾ, ಉಬರ್ ಇರುವುದಿಲ್ಲ: ಬೆಂಗಳೂರಿನಾದ್ಯಂತ ಮಂಗಳವಾರ ಓಲಾ, ಉಬರ್ ಓಡಿಸದಿರಲು ನಿರ್ಧರಿಸಲಾಗಿದೆ ಎಂದು ಓಲಾ, ಉಬರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದ್ದಾರೆ.
6. ಆಟೋ, ಟ್ಯಾಕ್ಸಿಗಳು ಇರುವುದು ಡೌಟ್: ಹಲವಾರು ಆಟೋ ಸಂಘಟನೆಗಳು ಬೆಂಬಲ ಘೋಷಿಸಿವೆ. ಅಂತಿಮವಾಗಿ ಸಮಗ್ರ ಬೆಂಬಲ ದೊರೆಯುವ ನಿರೀಕ್ಷೆ ಇದೆ.
7. ಅಂಗಡಿ ಮುಂಗಟ್ಟುಗಳು ಬಂದ್ ಆಗುವ ಸಾಧ್ಯತೆ ಇದೆ. ಜನರು ಸ್ವಯಂಪ್ರೇರಿತವಾಗಿ ಬಂದ್ ಮಾಡಬಹುದು.
8. ಎಲ್ಲ ರೀತಿಯ ಸಂಚಾರ ವ್ಯವಸ್ಥೆ ಸ್ಥಗಿತವಾಗುವ ಸಾಧ್ಯತೆ ಇದೆ.
9. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್ ಮಾಡುವುದಾಗಿ ಪ್ರಕಟಿಸಲಾಗಿದೆ.
10. ಬಿಬಿಎಂಪಿ ನೌಕರರ ಸಂಘ ಬೆಂಬಲ ನೀಡಿದೆ. ಹೀಗಾಗಿ ಕಾರ್ಮಿಕರು, ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ.
11. ಸರ್ಕಾರಿ ನೌಕರರ ಸಂಘಟನೆ ಇನ್ನೂ ತೀರ್ಮಾನ ಮಾಡಿಲ್ಲ. ಆದರೆ, ಹಾಜರಾತಿ ವಿರಳ ಆಗಬಹುದು.
12. ಸಿನಿಮಾ ರಂಗ ಬಂದ್‌ನ್ನು ಬೆಂಬಲಿಸುವುದರಿಂದ ಸಿನಿಮಾ ಮಂದಿರಗಳು ಬಂದ್ ಇರಲಿವೆ.
ಹಾಗಿದ್ದರೆ ಏನೇನು ಇರಬಹುದು?
– ಹಾಲು, ತರಕಾರಿ, ಪತ್ರಿಕೆ, ಆಸ್ಪತ್ರೆ, ಮೆಡಿಕಲ್ ಸೇರಿದಂತೆ ಅಗತ್ಯ ವಸ್ತುಗಳು ಇರುತ್ತವೆ.
– ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ವಿರಳವಾಗಿ ಸಂಚರಿಸುವ ಸಾಧ್ಯತೆ ಇದೆ.
– ತುರ್ತು ಅಗತ್ಯದ ಸೇವೆಗಳಿಗೆ, ಅದಕ್ಕೆ ಹೋಗುವವರಿಗೆ ಯಾವುದೇ ತೊಂದರೆ ಇರಲಾರದು. ಆದರೆ, ಅಧಿಕೃತ ಗುರುತು ಚೀಟಿ ಬೇಕಾದೀತು.
– ಮೆಟ್ರೋ ಸಂಚಾರ ಇರಬಹುದು.
ಸಮಗ್ರ ಕರ್ನಾಟಕ ಬಂದ್‌ಗೆ ವಾಟಾಳ್ ಚಿಂತನೆ
ಇತ್ತ ಬೆಂಗಳೂರು ಬಂದ್‌ಗೆ ಕರೆ ನೀಡಿದ ಬೆನ್ನಿಗೇ ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ ನಾಗರಾಜ್ ಅವರು ಸಮಗ್ರ ಕರ್ನಾಟಕ ಬಂದ್‌ಗೆ ಕರೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಸೋಮವಾರ ಸಮಗ್ರ ಕರ್ನಾಟಕ ಬಂದ್ ಕರೆಯ ಬಗ್ಗೆ ಚರ್ಚೆ ನಡೆಯಲಿದೆ ವಾಟಾಳ್ ನಾಗರಾಜ್ ಜೊತೆ ಮಾತುಕತೆ ಬಳಿಕ ರೈತ ಮುಂದಾಳು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.