Site icon Vistara News

CET-NEET: ಸಿಇಟಿ-ನೀಟ್; ಛಾಯ್ಸ್ ದಾಖಲು ಸೆ.4ರ ಮಧ್ಯಾಹ್ನ 12ಗಂಟೆಗೆ ಕೊನೆ

cet exam karnataka exam authority

ಬೆಂಗಳೂರು: ಯುಜಿಸಿಇಟಿ- ನೀಟ್ (CET-NEET) ಕೋರ್ಸ್‌ಗಳಿಗೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಇನ್ನೂ ಸುಮಾರು 15ಸಾವಿರ ಅಭ್ಯರ್ಥಿಗಳು ಯಾವ ಛಾಯ್ಸ್‌ಗಳನ್ನೂ ದಾಖಲು ಮಾಡದ ಕಾರಣ ಅವರಿಗೆ ಅನುಕೂಲ ಆಗಲಿಯೆಂದು ಛಾಯ್ಸ್ ದಾಖಲು ದಿನಾಂಕವನ್ನು ಸೆ.4ರ ಮಧ್ಯಾಹ್ನ 12ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ. ಛಾಯ್ಸ್ ದಾಖಲೆಗೆ ಸೆ.3ರ ರಾತ್ರಿ 12ಗಂಟೆವರೆಗೂ ಅವಕಾಶ ಇತ್ತು. ಅದನ್ನು ವಿಸ್ತರಿಸಲಾಗಿದೆ. ಹಾಗೆಯೇ ಶುಲ್ಕ ಪಾವತಿಗೆ ನಾಳೆ ಸಂಜೆ 4 ಗಂಟೆವರೆಗೆ ಅವಕಾಶ ಇರಲಿದೆ ಎಂದು ಅವರು ವಿವರಿಸಿದ್ದಾರೆ.

ನಿಗದಿತ ಅವಧಿಯೊಳಗೆ ಛಾಯ್ಸ್ ದಾಖಲು ಮಾಡಿಕೊಳ್ಳದಿದ್ದರೆ ಅಂತಹ ಅಭ್ಯರ್ಥಿಗಳ ಸೀಟು ರದ್ದಾಗಲಿದೆ ಎಂದೂ ಅವರು ತಿಳಿಸಿದ್ದಾರೆ. ಅಭ್ಯರ್ಥಿಗಳು ಕೊನೆ ದಿನಾಂಕದವರೆಗೂ ಕಾಯದೆ ಛಾಯ್ಸ್ ದಾಖಲು‌ ಮಾಡಿ, ಅದರ ನಂತರದ ಪ್ರವೇಶ ಪ್ರಕ್ರಿಯೆಯಲ್ಲಿ‌ ಭಾಗವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಶುಲ್ಕ ಪಾವತಿ ನಂತರ ಆದೇಶ ಪತ್ರ‌ ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ. ಇವತ್ತಿನವರೆಗೂ 92 ಸಾವಿರ ಮಂದಿ ತಮ್ಮ ಛಾಯ್ಸ್ ದಾಖಲು ಮಾಡಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.

Exit mobile version