Site icon Vistara News

ಚಾಮರಾಜಪೇಟೆ ಮೈದಾನ ಉಳಿಸಿಕೊಳ್ಳಲು ಇಂದು ಬೆಳಗ್ಗೆ 8ರಿಂದ ‌ ಸಂಜೆ 5 ಗಂಟೆ ತನಕ ಬಂದ್

chamarajpet band

ಬೆಂಗಳೂರು: ಬಿಬಿಎಂಪಿ ಆಟದ ಮೈದಾನವಾಗಿ ಚಾಮರಾಜಪೇಟೆ ಮೈದಾನವನ್ನು ಉಳಿಸಿಕೊಳ್ಳಲು ಇಂದು ಚಾಮರಾಜಪೇಟೆ ಬಂದ್ ನಡೆಯಲಿದೆ.

ಚಾಮರಾಜಪೇಟೆ ನಾಗರಿಕರ ಒಕ್ಕೂಟವು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದೆ. ಬಡಾವಣೆಯ 7 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಬಂದ್ ನಡೆಸಲು ನಾಗರೀಕರ ಒಕ್ಕೂಟದ ವೇದಿಕೆ ಕರೆ ಕೊಟ್ಟಿದೆ.

ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಬಂದ್ ನಡೆಯಲಿದ್ದು, ಅಂಗಡಿಗಳು, ವ್ಯಾಪಾರದ ಮಳಿಗೆಗಳು, ಬ್ಯಾಂಕ್, ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಒಕ್ಕೂಟ ಮನವಿ ಮಾಡಿದೆ. ಕರಪತ್ರ ಹಂಚಿಕೆ ಮಾಡುವ ಮೂಲಕ ಬಂದ್ ಬೆಂಬಲಕ್ಕೆ ಸಹಕರಿಸುವಂತೆ ಮನವಿ ಮಾಡಿದೆ.

ಚಾಮರಾಜಪೇಟೆ ಬಂದ್‌ಗೆ ಹಿಂದೂಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ 50ಕ್ಕೂ ಅಧಿಕ ಸಂಘ, ಸಂಸ್ಥೆಗಳು ಬೆಂಬಲ ಸೂಚಿಸಿವೆ. ಶಾಂತಿಯುತ ಬಂದ್ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ. ಬಂದ್ ಬಳಿಕ ಸರ್ಕಾರದ ನಡೆ ಗಮನಿಸಿ ಮುಂದಿನ ಹೆಜ್ಜೆ ಇಡಲು ಒಕ್ಕೂಟ ನಿರ್ಧರಿಸಿದೆ.

ಅನೇಕ ದಿನಗಳಿಂದ ಗೊಂದಲಕ್ಕೆ ಕಾರಣವಾಗಿರುವ ಚಾಮರಾಜಪೇಟೆ ಮೈದಾನ ಹಕ್ಕನ್ನು ಸಂಪೂರ್ಣವಾಗಿ ಬಿಬಿಎಂಪಿ ಸುಪರ್ದಿಗೆ ಪಡೆಯಬೇಕು ಎಂಬ ಕಾರಣಕ್ಕೆ ಚಾಮರಾಜಪೇಟೆ ನಾಗರಿಕರ ಸಮಿತಿ ಮಂಗಳವಾರ ನೀಡಿರುವ ಬಂದ್‌ಗೆ ಅನೇಕ ಕಡೆಗಳನ್ನು ಬೆಂಬಲ ವ್ಯಕ್ತವಾಗುತ್ತಿದೆ.

ಜುಲೈ 12ರಂದು ಬಂದ್‌ ಆಚರಿಸುವುದರ ಮೂಲಕ, ಮೈದಾನವನ್ನು ಈದ್ಗಾ ಮೈದಾನದ ಬದಲಿಗೆ ಎಲ್ಲ ಕಡೆಗಳಲ್ಲಿ ಇರುವಂತೆ ಬಿಬಿಎಂಪಿ ಮೈದಾನ ಎಂಬಂತೆ ನಿರ್ವಹಣೆ ಮಾಡಬೇಕು ಎನ್ನುವುದು, ಬಂದ್‌ಗೆ ಕರೆ ನೀಡಿರುವವರ ಬೇಡಿಕೆ.

ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಬೇಡಿಕೆ ಏನು?

ಇದನ್ನೂ ಓದಿ: ಚಾಮರಾಜಪೇಟೆ ಮೈದಾನ ವಿವಾದ: ಜುಲೈ 12ರ ಬಂದ್‌ಗೆ ʻಬೆಂಬಲʼ ಸೂಚಿಸಿ ಪೋಸ್ಟರ್‌

Exit mobile version