Site icon Vistara News

Chandrayaan 3 : ಸಾಫ್ಟ್‌ ಲ್ಯಾಂಡಿಂಗ್‌ಗೆ ಮುನ್ನ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಇಸ್ರೊ ಅಧ್ಯಕ್ಷ ಸೋಮನಾಥ್

ISRO Somanath

ಬೆಂಗಳೂರು: ಚಂದ್ರಯಾನ 3 (Chandrayaan 3) ಯಶಸ್ಸಿನ ವಿಚಾರದಲ್ಲಿ ಅತಿ ಹೆಚ್ಚು ತಲೆ ಕೆಡಿಸಿಕೊಂಡಿರುವವರು ಎಂದರೆ ಇಸ್ರೊ ಅಧ್ಯಕ್ಷರಾಗಿರುವ (ISRO President) ಎಸ್.‌ ಸೋಮನಾಥ್‌ (S Somanath) ಅವರು. ಅವರು ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ದೇವಾಲಯಕ್ಕೆ ಹೋಗಿ ಪ್ರಾರ್ಥನೆ (Prayer at Temple) ಸಲ್ಲಿಸಿದ್ದಾರೆ. ಮಂಗಳವಾರ ಸಂಜೆ 5.35ಕ್ಕೆ ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪ ಸ್ವಾಮಿ (Jalahalli Ayyappa swami Temple) ದೇವಾಲಯಕ್ಕೆ ಭೇಟಿ ನೀಡಿದ ಇಸ್ರೊ ಅಧ್ಯಕ್ಷರು ಚಂದ್ರಯಾನ ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.

ಜುಲೈ 14ರಂದು ಉಡಾವಣೆಯಾದ ಚಂದ್ರಯಾನ ಆಗಸ್ಟ್‌ 23ರಂದು ಸಂಜೆ 6.04ಕ್ಕೆ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡ್‌ ಆಗುವಲ್ಲಿಗೆ ದೊಡ್ಡ ಯಶಸ್ಸನ್ನು ಕಾಣಲಿದೆ. ಚಂದ್ರಯಾನ 2ರಲ್ಲಿ ಎಲ್ಲ ಹಂತಗಳು ಯಶಸ್ವಿಯಾಗಿದ್ದು ಸಾಫ್ಟ್‌ ಲ್ಯಾಂಡಿಂಗ್‌ ಸಮಯದಲ್ಲಿ ತೊಂದರೆ ಉಂಟಾಗಿತ್ತು. ಈ ಬಾರಿ ಅದನ್ನು ಸರಿಪಡಿಸಿಕೊಂಡು ಯಶಸ್ಸು ಸಾಧಿಸುವ ಗುರಿಯೊಂದಿಗೆ ಇಸ್ರೊ ಎಲ್ಲ ರೀತಿಯಲ್ಲಿ ಸಿದ್ಧತೆ ನಡೆಸಿದೆ. ಇದರ ನಡುವೆ ಇಸ್ರೋ ಅಧ್ಯಕ್ಷರು ದೇವರ ಆಶೀರ್ವಾದವನ್ನೂ ನೆಚ್ಚಿಕೊಂಡಿದ್ದಾರೆ. ನಿಜವೆಂದರೆ ಇಡೀ ದೇಶ ಚಂದ್ರಯಾನ ಯಶಸ್ವಿಯಾಗಲಿ ಎಂದು ಹಾರೈಸಿ ಪ್ರಾರ್ಥನೆ ಮಾಡುತ್ತಿದೆ.

ಯಶಸ್ವಿ ಸಾಫ್ಟ್‌ ಲ್ಯಾಂಡಿಂಗ್‌ಗೆ ಪೇಜಾವರ ಶ್ರೀಗಳ ಪ್ರಾರ್ಥನೆ

ಚಂದ್ರಯಾನ 3 ಯಶಸ್ವಿ ಸಾಫ್ಟ್ ಲ್ಯಾಂಡಿಂಗ್‌ಗೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿಜ್ಞಾನಿಗಳ ಚಂದ್ರಯಾನ ಪ್ರಯತ್ನ ಯಶಸ್ಸು ಸಿಗಲಿ ಎಂದು ಲಕ್ಷ್ಮೀ ನರಸಿಂಹ ದೇವರಲ್ಲಿ ಪ್ರಾರ್ಥನೆ ಮಾಡಿದರು. ಮೈಸೂರಿನಲ್ಲಿ ಚಾತುರ್ಮಾಸ್ಯ ಆಚರಣೆ ನಡೆಸುತ್ತಿರುವ ಅವರು ಅಲ್ಲಿಂದಲೇ ಪ್ರಾರ್ಥನೆ ಮಾಡಿದರು.

ಇದನ್ನೂ ಓದಿ: Chandrayaan 3 : ಚಂದ್ರನ ಮೇಲೆ ಲ್ಯಾಂಡ್​ ಆಗುವ ಕ್ಷಣವನ್ನು ಮಿಸ್ ಮಾಡ್ಬೇಡಿ; ಇಲ್ಲೇ ನೋಡಿ

Exit mobile version