Site icon Vistara News

Chetan Ahimsa : ಯಶಸ್ಸಿನ ಕೀರ್ತಿ ಯಾರಿಗೆ? ಚಂದ್ರಯಾನ ಸಕ್ಸಸ್‌ ಬಗ್ಗೆ ವಿವಾದಾತ್ಮಕ ಟ್ವೀಟ್‌ ಮಾಡಿದ ಚೇತನ್‌ ಅಹಿಂಸಾ

Chetan Ahimsa

ಬೆಂಗಳೂರು: ಚಂದಿರನ ಅಂಗಳದಲ್ಲಿ ಚಂದ್ರಯಾನ 3 (Chandrayaana 3) ಯಶಸ್ವಿಯಾಗಿ ಇಡೀ ದೇಶವೇ ಸಂಭ್ರಮದಲ್ಲಿ ತೇಲಾಡುತ್ತಿರುವ ಹೊತ್ತಿನಲ್ಲಿ ಚಿತ್ರ ನಟ ಚೇತನ್‌ ಅಹಿಂಸಾ (Actor Chetan Ahimsa) ಅವರು ವಿವಾದಾತ್ಮಕ ಟ್ವೀಟ್‌ (Controversial tweet) ಮಾಡುವ ಸುದ್ದಿ ಮಾಡಿದ್ದಾರೆ.

ʻʻಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ—ಈ ಯಶಸ್ಸಿನ ಕೀರ್ತಿ/ಗುರುತು ಯಾರಿಗೆ ಸಲ್ಲುತ್ತದೆ: ನಮ್ಮ ವಿಜ್ಞಾನಿಗಳಿಗೆ ಅಥವಾ ‘ಲಾರ್ಡ್’ ತಿರುಪತಿಗೆ?ʼʼ ಎಂದು ಚೇತನ್‌ ಅಹಿಂಸಾ ಅವರು ಪ್ರಶ್ನೆ ಮಾಡಿದ್ದಾರೆ.

ಚಂದ್ರಯಾನ 3 ಉಡಾವಣೆಗೆ ಮುನ್ನ ಅದರ ಪ್ರತಿಕೃತಿಯನ್ನು ತಿರುಪತಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿದ್ದನ್ನು ಚೇತನ್‌ ಆಕ್ಷೇಪಿಸಿದ್ದರು. ಇದು ತುಂಬಾ ಅಸಂಬದ್ಧ ಮತ್ತು ಬೂಟಾಟಿಕೆ ಎಂದಿದ್ದರು.
ಕನ್ವಿಕ್ಷನ್‌ ಮೂಲಕ ವೈಜ್ಞಾನಿಕ ಮನೋಧರ್ಮ ಹೊಂದಿರುವವರು ಪದವಿಗಳಿಂದ ಕೂಡಿರುವ ವಿಜ್ಞಾನಿಗಳ ಮಧ್ಯೆ ನಡುವೆ ತುಂಬಾ ವ್ಯತ್ಯಾಸದ ಸಾಗರವಿದೆ. ಮೊದಲ ಗುಂಪು ನಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಎರಡನೇ ಗುಂಪು ನಮ್ಮನ್ನು ಹಿಂದಕ್ಕೆ ಎಳೆಯುತ್ತದೆ- ಎಂದು ಅವರು ಹೇಳಿದ್ದರು.

ಇದೀಗ ಚಂದ್ರಯಾನ ಯಶಸ್ಸಿನ ನಂತರ ಪ್ರತಿಕ್ರಿಯೆ ನೀಡಿರುವ ಚೇತನ್‌ ಇದರ ಶ್ರೇಯಸ್ಸು ಸಲ್ಲಬೇಕಾದ್ದು ಯಾರಿಗೆ ವಿಜ್ಞಾನಿಗಳಿಗೋ/ ದೇವರಿಗೋ ಎಂದು ಕೇಳಿದ್ದಾರೆ. ಅವರ ಟ್ವೀಟ್‌ಗೆ ಪರ ಮತ್ತು ವಿರುದ್ಧ ಅಭಿಪ್ರಾಯಗಳು ಕೇಳಿಬಂದಿವೆ.

ಇದನ್ನೂ ಓದಿ: Chandrayaan 3: ತಿರುಪತಿ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದ ಚಂದ್ರಯಾನ 3 ಲ್ಯಾಂಡರ್!

ಪ್ರಕಾಶ್‌ ರಾಜ್‌ ಕೂಡಾ ವಿವಾದ ಸೃಷ್ಟಿಸಿದ್ದರು

ಚೇತನ್‌ ಅಹಿಂಸಾ ಅವರಿಗಿಂತ ಮೊದಲು ನಟ ಪ್ರಕಾಶ್‌ ರಾಜ್‌ ಅವರು ಚಂದ್ರಯಾನ 3 (Chandrayaan 3) ಬಗ್ಗೆ ವಿವಾದಾತ್ಮಕ ಟ್ವೀಟ್‌ ಮಾಡಿದ್ದರು. ಚಂದ್ರಯಾನ ಕಳುಹಿಸಿದ ಫೋಟೊ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್‌ (K Sivan) ಅವರನ್ನು ಅಣಕ ಮಾಡುವ ರೀತಿಯಲ್ಲಿ ಫೋಟೊ ಹಂಚಿಕೊಂಡಿದ್ದರು.

ಇದನ್ನೂ ಓದಿ :Pramod Mutalik : ಪ್ರಕಾಶ್‌ರಾಜ್ ಭಾರತದಲ್ಲಿ ಹುಟ್ಟಿದ್ದೇ ಕಳಂಕ, ಅವರಿಗೆ ಚೀನಾ ಬೆಸ್ಟ್‌ ಎಂದ ಮುತಾಲಿಕ್‌

ಪ್ರಕಾಶ್‌ ರಾಜ್‌ ಹಂಚಿಕೊಂಡ ಚಿತ್ರದಲ್ಲಿ ಚಾಯ್‌ವಾಲಾ ಎಂಬುದಾಗಿ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ವ್ಯಂಗ್ಯ ಮಾಡಿದಂತಿದೆ. “ತಾಜಾ ಸುದ್ದಿ; ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ” ಎಂದು ಅವರು ಬರೆದುಕೊಂಡಿದ್ದಾರೆ. ಚಂದ್ರಯಾನ 3 ಮಿಷನ್‌ ಯಶಸ್ಸಿಗೆ ದೇಶವೇ ಪ್ರಾರ್ಥಿಸುವ ಹೊತ್ತಿನಲ್ಲಿ ಪ್ರಕಾಶ್‌ ರಾಜ್‌ ಅವರು ಇಂತಹ ಫೋಟೊ ಶೇರ್‌ ಮಾಡಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕಾಶ್‌ ರಾಜ್‌ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ನಾನು ಆ ಅರ್ಥದಲ್ಲಿ ಹೇಳಿದ್ದಲ್ಲ ಎಂದು ಬಳಿಕ ಪ್ರಕಾಶ್‌ ರೈ ಸಮಜಾಯಿಷಿ ನೀಡಿದ್ದರು.

Exit mobile version