Site icon Vistara News

Child Actor Master OM: ಓದಿಗೂ ಸೈ, ಮಾಡೆಲಿಂಗ್‌ಗೂ ಸೈ ಈ ಸೂಪರ್‌ ಟೀನ್‌ ಮಾಡೆಲ್‌ ಮಾಸ್ಟರ್‌ ಓಂ!

ಬೆಂಗಳೂರು: ಕರ್ನಾಟಕ ಸೂಪರ್‌ ಟೀನ್‌ ಮಾಡೆಲ್‌ ಹಾಗೂ ಬಾಲ ನಟನಾಗಿದ್ದ (Child Actor Master OM) ಮಾಸ್ಟರ್ ಓಂ, ಇದೀಗ 10ನೇ ತರಗತಿ ಬೋರ್ಡ್‌ ಎಕ್ಸಾಂ (ಐಸಿಎಸ್‌ಇ ಸಿಲಬಸ್) ಪರೀಕ್ಷೆಯಲ್ಲಿ 97% ಅಂಕ ಗಳಿಸುವ ಮೂಲಕ ಪ್ರತಿಷ್ಠಿತ ಆಚಾರ್ಯ ಪಾಠಶಾಲೆಯ ಟಾಪರ್ಸ್‌ ಲಿಸ್ಟ್‌ಗೆ ಸೇರಿದ್ದಾನೆ. ಐಸಿಎಸ್‌ಸಿ ಸಿಲಬಸ್‌ನಲ್ಲಿ ಓದುವವರು ಕನ್ನಡವೆಂದರೇ ಕಬ್ಬಿಣದ ಕಡಲೆ ಎಂದು ಭಾವಿಸುತ್ತಾರೆ. ಆದರೆ, ಓಂ ಕನ್ನಡದಲ್ಲಿ 100 ಕ್ಕೆ 97 ಅಂಕಗಳನ್ನು ಗಳಿಸುವ ಮೂಲಕ ಇದನ್ನು ಸಾಧಿಸಿ ತೋರಿಸಿದ್ದಾನೆ. ಗಣಿತ ಹಾಗೂ ಹಿಸ್ಟರಿಯಲ್ಲಿ 100ಕ್ಕೆ 99 ಮಾರ್ಕ್ಸ್‌ ಗಳಿಸಿದ್ದಾನೆ. ಇನ್ನುಳಿದ ಎಲ್ಲಾ ವಿಷಯಗಳಲ್ಲೂ ಕ್ರಮವಾಗಿ 95, 96, 97 ಹೀಗೆ ಅತ್ಯಧಿಕ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. ಇದಕ್ಕೆಲ್ಲಾ ಶಾಲೆಯ ಪ್ರಾಂಶುಪಾಲರು, ಟೀಚರ್ಸ್‌ ಹಾಗೂ ಪೋಷಕರ ಸಹಕಾರವೇ ಕಾರಣ ಎಂದು ಸಂತಸ ಹಂಚಿಕೊಂಡಿದ್ದಾನೆ.

ಓಂ ಸಿನಿಮಾ, ಫ್ಯಾಷನ್‌ ಜರ್ನಿ

ಮದುವೆಯ ಮಮತೆಯ ಕರೆಯೊಲೆ, ಲೀ, ವೇಷಧಾರಿ, ಪ್ರೇಮಂ, ಸಂತೋಷ-ಸಂಗೀತ, ಕಾಳಿದಾಸ ಕನ್ನಡ ಮೇಷ್ಟ್ರು, ಕಾಫಿ(ತಮಿಳು) ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾ, 35ಕ್ಕೂ ಅಧಿಕ ಜಾಹೀರಾತು ಮತ್ತು ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್‌ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿರುವ ಓಂ ಓದಿನಲ್ಲೂ ಮುಂದಿರುವುದು ಸಿನಿಮಾ ಬಾಲ ನಟ-ನಟಿಯರಿಗೆ ಮಾದರಿಯಾಗುವಂತಿದೆ. ಇವೆಲ್ಲದರ ಜೊತೆಗೆ ಶಾಲೆಯ ಕ್ಯಾಪ್ಟನ್‌ಶಿಪ್‌ ಹಾಗೂ ತೇಜಸ್ವಿ ಸೂರ್ಯರ ಸೌತ್‌ ಸ್ಕೂಲ್‌ ಲೀಡರ್ಸ್‌ ಟೀಮ್‌ನ ಸಾಮಾಜಿಕ ಕಾರ್ಯಾಗಾರಗಳಲ್ಲೂ ಶಾಲೆಯ ಪ್ರತಿನಿಧಿಯಾಗಿ ಪಾಲ್ಗೊಂಡ ಹೆಗ್ಗಳಿಕೆ ಓಂನದು.

ಇದನ್ನೂ ಓದಿ | Girls Pleats Skirts Fashion: ಹುಡುಗಿಯರ ಮೆಚ್ಚಿನ ಆಯ್ಕೆ ಕೊರಿಯನ್‌ ಪ್ಲೀಟ್ಸ್‌ ಸ್ಕರ್ಟ್ಸ್‌ಗಳು

ನಟನೆ, ಮಾಡೆಲಿಂಗ್‌ನಂಥ ಪಠ್ಯೇತರ ಚಟುವಟಿಕೆ ತನ್ನ ಓದಿಗೆ ಅಡ್ಡಿಯಾಗಲಿಲ್ಲ ಎನ್ನುವ ಓಂ, ಮುಂದಿನ ತರಗತಿಗಳಲ್ಲೂ ಉತ್ತಮ ಅಂಕ ಗಳಿಸುವ ಗುರಿ ಹೊಂದಿದ್ದಾನೆ. ಹಾಗೆಯೇ, ನಟನೆ-ಮಾಡೆಲಿಂಗ್‌ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಬಯಕೆಯನ್ನೂ ವ್ಯಕ್ತಪಡಿಸಿದ್ದಾನೆ.

Exit mobile version