ಬೆಂಗಳೂರು: ವಿದ್ಯುತ್ ತಂತಿಯನ್ನು ಬದಲಾಯಿಸುವ ವೇಳೆಯಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಗಂಭಿರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಸ್ಕಾಂನ ಚಿಂತಾಮಣಿ ಗ್ರಾಮೀಣ ವಿಭಾಗದ ಮುತುಕದಹಳ್ಳಿ ಬಳಿ ಈ ದುರ್ಘಟನೆ ಸಂಭವಿಸಿದೆ.
ಈ ಮೂವರು ಗುತ್ತಿಗೆ ಕಾರ್ಮಿಕರಾಗಿದ್ದರು. ಮೃತಪಟ್ಟವರನ್ನು ಹಾವೇರಿಯ ಸಂಜೀವ್ (22) ಮತ್ತು ಸಿದ್ದಪ್ಪ (19) ಎಂದು ಗುರುತಿಸಲಾಗಿದೆ. ಬಿಹಾರದ ಪರ್ವೇಜ್ (22) ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕ್ಸಿತೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | BESCOM HELP LINE: ವಿದ್ಯುತ್ ವ್ಯತ್ಯಯ ದೂರಿಗೆ ಹೊಸ ವ್ಯಾಟ್ಸ್ಆ್ಯಪ್ ಸಹಾಯವಾಣಿ
ಬೆಸ್ಕಾಂನ ಹಳೇ ವಿದ್ಯುತ್ ತಂತಿಗಳನ್ನು ಬದಲಾಯಿಸುವ ಗುತ್ತಿಗೆಯನ್ನು ತುಮಕೂರಿನ ಮೆ.ರಾಜಾ ಎಲೆಕ್ಟ್ರಿಕಲ್ಸ್ ಪಡೆದುಕೊಂಡಿತ್ತು. 11 ಕೆವಿ ವಿದ್ಯುತ್ ಸಾಮರ್ಥ್ಯದ ತಂತಿಯನ್ನು ಬದಲಿಸಲು ಅವಶ್ಯಕತೆಯಿರುವ ಸುರಕ್ಷಾ ಕ್ರಮವನ್ನು ಈ ಸಂಸ್ಥೆ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ. ಈ ವಿದ್ಯುತ್ ಅವಘಡದಲ್ಲಿ ಬೆಸ್ಕಾಂನ ಲೋಪವಿಲ್ಲ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ವೇಳೆ ಚಿಂತಾಮಣಿಯ ಬೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಾದ ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್ ದುರಂತದಿಂದ ಎಚ್ಚೆತ್ತ ಬೆಸ್ಕಾಂ