ಬೆಂಗಳೂರು: ಮಕ್ಕಳಿಗೆ ಒತ್ತಾಯಪೂರ್ವಕ ಬೈಬಲ್ ಬೊಧನೆ ಪ್ರಕರಣದ ಕುರಿತು ಸರ್ಕಾರ ಯಾವುದೇ ಅವಸರದ ನಿರ್ಧಾರ ಕೈಗೊಳ್ಳಬಾರದು ಎಂದು ಕಾರೆನ್ಸ್ ಶಾಲೆ ಪ್ರತಿಕ್ರಿಯೆ ನೀಡಿದೆ. ಒತ್ತಾಯಪೂರ್ವಕವಾಗಿ ಬೈಬಲ್ ಬೋಧನೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಲೆಗೆ ಸರ್ಕಾರ ನೋಟಿಸ್ ನೀಡಿ ಒಂದು ವಾರದೊಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಿತ್ತು. ಇದಕ್ಕೆ ಉತ್ತರ ನೀಡದ ಶಾಲೆ, ʼಶಾಲೆಯ ಮೇಲೆ ಯಾವುದೇ ಅವಸರದ ನಿರ್ಧಾರ ತೆಗುದುಕೊಳ್ಳಬೇಡಿʼ ಎಂದು ಒಂದು ಸಾಳಿನ ಪತ್ರವನ್ನಷ್ಟೆ ಬರೆದು ಮನವಿ ಮಾಡಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಈ ಕುರಿತು ಮಾತನಾಡಿ ʼಒಂದು ವಾರದೊಳಗೆ ಬೈಬಲ್ ಬೋಧನೆಯ ಕುರಿತು ಸ್ಪಷ್ಟನೆ ಕೊಡಲಿ. ಅನಂತರ ಶಿಕ್ಷಣ ಇಲಾಖೆ ನಿರ್ಧಾರ ತೆಗೆದುಕೊಳ್ಳುತ್ತದೆʼ ಎಂದು ಹೇಳಿದ್ದಾರೆ. ಅಲ್ಲದೆ, ಇತರೆ ಕ್ರೈಸ್ತ ಶಾಲೆಯಲ್ಲೂ ಒತ್ತಾಯಪೂರ್ವಕ ಬೈಬಲ್ ಬೋಧನೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಏನಿದು ಪ್ರಕರಣ?
ಕೆಲವು ದಿನಗಳ ಹಿಂದೆ ಕ್ಲಾರೆನ್ಸ್ ಶಾಲೆಯ ವಿದ್ಯಾರ್ಥಿಯ ಪಾಲಕರೊಬ್ಬರು ತಮ್ಮ ಮಗು ಕೈಯ್ಯಲ್ಲಿ ಬೈಬಲ್ ಹಿಡಿದುದ್ದನ್ನು ಕಂಡು ಶಾಲೆಗೆ ಈ ಬಗ್ಗೆ ಪ್ರಶ್ನಿಸಿದ್ದರು. ಅದೇ ವೇಲೆ, ಹಿಂದು ಜನಜಾಗೃತಿ ಸಮಿತಿಯ ಮುಖ್ಯಸ್ಥ ಮೋಹನ ಗೌಡ, ಕ್ಲಾರೆನ್ಸ್ ಶಾಲೆಯಲ್ಲಿ ಹಿಂದೂ ಮಕ್ಕಳಿಗೂ ಒತ್ತಾಯಪೂರ್ವಕವಾಗಿ ಬೈಬಲ್ ಓದುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಕ್ಲಾರೆನ್ಸ್ ಶಾಲೆಯ ಮುಖ್ಯಸ್ಥರು ʼಈ ಶಾಲೆಯಲ್ಲಿ ಬೈಬಲ್ ಆಧಾರಿತ ಶಿಕ್ಷಣ ನೀಡಲಾಗುತ್ತದೆʼ ಎಂದು ಹೇಳಿದರು. ಈ ಶಾಲೆಯ ಬಗ್ಗೆ ಪರಿಶೀಲನೆ ನಡೆಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಸಮಿತಿ ಬೆಂಗಳೂರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಕ್ಲಾರೆನ್ಸ್ ಶಾಲೆ ಒತ್ತಯಪೂರ್ವಕವಾಗಿ ಬೈಬಲ್ ಬೋಧನೆ ನಡೆಸಿದರೆ ಅದು ಭಾರತ ಸಂವಿಧಾನದ 25ನೇ ಪರಿಚ್ಛೇದವನ್ನು ಉಲ್ಲಂಘಿಸಿದಂತೆ, ಹಾಗಾಗಿ ಈ ಬಗ್ಗೆ ಸೂಕ್ತ ವಿಚಾರಣೆ ನಡೆಯಬೇಕು ಎಂದು ಸಮಿತಿ ಕೇಳಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಶಾಲೆಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಪ್ರಕರಣದ ಬಗ್ಗೆ ಏಳು ದಿನಗಲಲ್ಲಿ ಸ್ಪಷ್ಟನೆ ನೀಡುವಂತೆ ಸರ್ಕಾರ ಆದೇಶಿಸತ್ತು.
ಇದನ್ನೂ ಓದಿ: ಪರೀಕ್ಷೆಗಿಂತ ಹಿಜಾಬ್ ಮುಖ್ಯವೆಂದ ವಿದ್ಯಾರ್ಥಿನಿಯರು: ದ್ವಿತೀಯ ಪಿಯು ಪರೀಕ್ಷೆಗೆ ಗೈರು