Site icon Vistara News

Ramesh Jarkiholi : ರಮೇಶ್‌ ಜಾರಕಿಹೊಳಿ ವಿರುದ್ಧ ಅವಾಚ್ಯ ಶಬ್ದಗಳಿಂದ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ಎಂಎಲ್‌ಸಿ ರವಿ

congress-mlc-s-ravi-lashes-out-over-ramesh-jarkiholi

#image_title

ಬೆಂಗಳೂರು: ಡಿ.ಕೆ. ಶಿವಕುಮಾರ್‌ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಆಡಿಯೊ ಬಿಡುಗಡೆ ಮಾಡಿರುವ ಬಿಜೆಪಿ ನಾಯಕ ಸತೀಶ್‌ ಜಾರಕಿಹೊಳಿ (Ramesh Jarkiholi) ವಿರುದ್ಧ ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ಅವಾಚ್ಯ ಶಬ್ದಗಳಿಂದ ವಾಗ್ದಾಲಿ ನಡೆಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಸ್‌. ರವಿ, ಯಾರ‍್ರೀ ಅವನು ರಮೇಶ್ ಜಾರಕಿಹೊಳಿ? ಕಚಡಾ ಅವನು. ಜನ ಛೀ ಥೂ ಅಂತ ಅವ್ನಿಗೆ ಉಗೀತಿದಾರೆ. ಚಡ್ಡಿ ಬಿಚ್ಚು, ಪ್ಯಾಂಟ್ ಬಿಚ್ಚು ಅಂತ ಅವ್ನಿಗೆ ಯಾರಾದ್ರೂ ಹೇಳಿದ್ರಾ ?

ಇದನ್ನೂ ಓದಿ : CD Case: ದೆಹಲಿಯತ್ತ ರಮೇಶ್‌ ಜಾರಕಿಹೊಳಿ; ಸಿಡಿ ಷಡ್ಯಂತ್ರದ ಪ್ರಕರಣ ಸಿಬಿಐಗೆ ವಹಿಸುವಂತೆ ಹೈಕಮಾಂಡ್‌ಗೆ ಮೊರೆ?

ಒಂದು ಸರ್ಕಾರವನ್ನ ಬೀಳಿಸಿ ಮತ್ತೊಂದು ಪಕ್ಷವನ್ನು ಅಧಿಕಾರಕ್ಕೆ ತಂದವ ಅವನು. ಅವನ ಹತ್ತಿರ ದಾಖಲೆ ಇದ್ರೆ ತಲೆ ಮೇಲೆ ಹೊಯ್ಕೊಳ್ಳೊಕೆ ಹೇಳು. ಪ್ರತಿ ದಿನ ಒಂದೊಂದು ದಾಖಲೆ ಬಿಡ್ಲಿ. ಅವನ ಹತ್ತಿರ ಏನಿದೆ‌? ಎಂದು ಅವಾಚ್ಯ ಶಬ್ದಗಳಲ್ಲಿ ರಮೇಶ್ ಜಾರಕಿಹೋಳಿ ವಿರುದ್ಧ ವಾಗ್ದಾಳಿ ನಡೆಸಿದರು.

Exit mobile version