ಬೆಂಗಳೂರು: ಬೆಂಗಳೂರಿನ ದೊಡ್ಡ ಗಣಪತಿ ಸಮೂಹ ದೇವಸ್ಥಾನಗಳ ವಿವಾದಾತ್ಮಕ ಟೆಂಡರ್ ಅನ್ನು ರದ್ದುಪಡಿಸಲಾಗಿದೆ.
ದೇವಸ್ಥಾನದ ಆವರಣದಲ್ಲಿ ಪೂಜಾ ಸಾಮಾಗ್ರಿ, ಎಳನೀರು ಮಾರಾಟ, ಸುಂಕ ವಸೂಲಿ ಹಾಗೂ ಚಪ್ಪಲಿ ಕಾಯ್ದುಕೊಳ್ಳುವ ಕೆಲಸಗಳಿಗೆ ಟೆಂಡರ್ ಕರೆಯಲಾಗಿತ್ತು. ಪೂಜಾ ಸಾಮಾಗ್ರಿ, ಎಳನೀರು ಮಾರಾಟ, ಸುಂಕ ವಸೂಲಿಯನ್ನು, ಸಾಮಾನ್ಯ ವರ್ಗಕ್ಕೆ, ಅಂದರೆ ಎಲ್ಲರಿಗೂ ಮುಕ್ತವಾಗಿರಿಸಲಾಗಿತ್ತು.
ಚಪ್ಪಲಿ ಸ್ಟ್ಯಾಂಡ್ ಅನ್ನು ನಿರ್ವಹಿಸುವ ಹಕ್ಕು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿತ್ತು. ಇದು ವಿವಾದ ಸೃಷ್ಟಿಸಿತ್ತು. ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನ ಬಸವನಗುಡಿಯಲ್ಲಿದೆ.
ಅ.31ರಂದು ಬಹಿರಂಗ ಹರಾಜು ಪ್ರಕಟಣೆ ಹೊರಡಿಸಲಾಗಿತ್ತು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಟೆಂಡರ್ ಪ್ರಕಟಣೆಯನ್ನು ಸರ್ಕಾರ ರದ್ದುಪಡಿಸಿದೆ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಆಯೋಗ ಈ ಬಗ್ಗೆ ವರದಿಯನ್ನು ಕೇಳಿತ್ತು.