Site icon Vistara News

ಟೊಯೊಟಾ ಟೆಕ್ನಿಕಲ್ ಟ್ರೈನಿಂಗ್ ಇನ್​ಸ್ಟಿಟ್ಯೂಟ್​​ನ ಘಟಿಕೋತ್ಸವ

Nirmalananda swamiji

ರಾಮನಗರ: ಟೊಯೊಟಾ ಟೆಕ್ನಿಕಲ್ ಟ್ರೈನಿಂಗ್ ಇನ್​ಸ್ಟಿಟ್ಯೂಟ್​ನ (ಟಿಟಿಟಿಐ) ತನ್ನ 14ನೇ ಬ್ಯಾಚ್ ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮ ನಡೆಯಿತು. ಗ್ರಾಮೀಣ ಕರ್ನಾಟಕದ 62 ಟಿಟಿಟಿಐ ರೆಗ್ಯುಲರ್ ಮತ್ತು 41 ಟೊಯೊಟಾ ಕೌಶಲ ಕೋರ್ಸ್ ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡಿದ್ದಾರೆ. ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಪಾಳ್ಗೊಂಡಿದ್ದರು.

ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭಕ್ಕೆ ಸಾಕ್ಷಿಯಾಗಿರುವುದಕ್ಕೆ ಸಂತೋಷವಾಗಿದೆ. ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವಲ್ಲಿ ಟಿಟಿಟಿಐ ತೋರಿಸಿದ ಬದ್ಧತೆ ನಿಜವಾಗಿಯೂ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಸಮಾಜದ ಉನ್ನತಿಗೆ ಪ್ರಮುಖ ಪಾತ್ರವಹಿಸುತ್ತವೆ. ಇದರ ಪರಿಣಾಮವಾಗಿ ಸಾಮೂಹಿಕ ಪ್ರಗತಿ ಮತ್ತು ಶಾಶ್ವತ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸಮಾಜ ಮತ್ತು ರಾಷ್ಟ್ರದ ಒಟ್ಟಾರೆ ಪ್ರಗತಿಗೆ ಕೊಡುಗೆ ನೀಡಲು ಅವಕಾಶ ಮಾಡಿಕೊಡುತ್ತದೆ ಎಂದರು.

ಟಿಕೆಎಂ ಮತ್ತು ಟಿಕೆಎಪಿಯ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಶ್ರೀ ಜಿ.ಶಂಕರ “ಕಾರ್ಪೊರೇಟ್ ಆಗಿ ನಾವು ಸ್ಕಿಲ್ ಇಂಡಿಯಾದ ಗುರಿಯನ್ನು ಸಾಧಿಸಲು ಮತ್ತು ಅದಕ್ಕೆ ಕೊಡುಗೆ ನೀಡಲು ಬದ್ಧರಾಗಿದ್ದೇವೆ. ಆಟೋಮೋಟಿವ್ ಕ್ಷೇತ್ರಕ್ಕೆ ಉದ್ಯಮ ಸಿದ್ಧ ನುರಿತ ಕಾರ್ಯಪಡೆಯನ್ನು ಒದಗಿಸುವ ಟೊಯೊಟಾದ ಅನೇಕ ಕಾರ್ಯಕ್ರಮಗಳಲ್ಲಿ ಟಿಟಿಟಿಐ ಒಂದಾಗಿದೆ. ಇದುವರೆಗೆ 950 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಆಟೋ ಉದ್ಯಮದಲ್ಲಿ ತೃಪ್ತಿದಾಯಕ ವೃತ್ತಿಜೀವನವನ್ನು ಹೊಂದುವ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ ಅವರ ಯಶಸ್ಸಿನ ಕಥೆಗಳಿಗೆ ಸಾಕ್ಷಿಯಾಗುವುದು ನಮಗೆ ಹೆಚ್ಚು ಆನಂದ ನೀಡಲಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಪ್ರವೇಶದಲ್ಲಿ ಹೆಚ್ಚಳ, ಸೌಲಭ್ಯಗಳ ವಿಸ್ತರಣೆ ಮತ್ತು ಶೀಘ್ರದಲ್ಲೇ ಹೆಚ್ಚಿನ ಸಾಮರ್ಥ್ಯದ ವಸತಿ ನಿಲಯವನ್ನು ತೆರೆಯಲಾಗುವುದು. ಇದು ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರದ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿದೆ. ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ವಿಶ್ವದರ್ಜೆಯ ತಂತ್ರಜ್ಞರನ್ನಾಗಿ ಪರಿವರ್ತಿಸಲು ಬೆಂಬಲಿಸುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ಬದ್ಧತೆ ಇಲ್ಲಿ ಕಾಣುತ್ತಿದೆ. ಎಂದು ಹೇಳಿದರು.

ಸಮಗ್ರ ಪಠ್ಯಕ್ರಮ

2007 ರಲ್ಲಿ ಈ ತರಬೇತಿ ಕಾರ್ಯಕ್ರಮ ಪ್ರಾರಂಭಗೊಂಡಿದ್ದು, ಟಿಟಿಟಿಐ ತನ್ನ ಸಮಗ್ರ ಪಠ್ಯಕ್ರಮದ ಮೂಲಕ ಸುಧಾರಿತ ತಂತ್ರಜ್ಞಾನಗಳ ಜ್ಞಾನವನ್ನು ನೀಡುವುದರ ಮೂಲಕ ಗ್ರಾಮೀಣ ಪ್ರದೇಶ ಯುವಕರನ್ನು ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ಮಾನವಶಕ್ತಿಯಾಗಿ ಪರಿವರ್ತಿಸುತ್ತಿದೆ. ವಿದ್ಯಾರ್ಥಿಗಳು ಕರ್ನಾಟಕ ಮತ್ತು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ : OpenAI Bankruptcy: ಎಲ್ಲರ ಉದ್ಯೋಗ ಕಸಿಯಲಿದೆ ಎಂದ ಚಾಟ್‌ಜಿಪಿಟಿಯೇ ದಿವಾಳಿ; ವರದಿ ಹೇಳೋದೇನು?

ಟಿಟಿಟಿಐ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಮೂಲಕ ಪ್ರೇರೇಪಿಸುತ್ತಿದೆ. ವಿದ್ಯಾರ್ಥಿಗಳು ಇಂಡಿಯಾ ಸ್ಕಿಲ್ಸ್ ಮತ್ತು ವರ್ಲ್ಡ್ ಸ್ಕಿಲ್ಸ್ ಕಾಂಪಿಟೇಷನ್ ನಂತಹ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಇದು ರಾಷ್ಟ್ರಕ್ಕೆ ಅಪಾರ ಹೆಮ್ಮೆಯನ್ನು ತಂದಿದೆ. ಟಿಟಿಟಿಐನ ಶಿಕ್ಷಣದ ಒಂದು ಲಕ್ಷಣವೆಂದರೆ ಅದರ ವಸತಿ ತರಬೇತಿ ಕಾರ್ಯಕ್ರಮ. ಇದು ಜ್ಞಾನ, ಕೌಶಲ್ಯ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳ ವಿಷಯದಲ್ಲಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ.

Exit mobile version