ಬೆಂಗಳೂರು: ನಾಡಿನ ಜನಪ್ರಿಯ ಮತ್ತು ಜನಪರ ಮಾಧ್ಯಮ ಸಂಸ್ಥೆಯಾದ ವಿಸ್ತಾರ ನ್ಯೂಸ್ (Vistara News) ಆಯೋಜಿಸಿರುವ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮಕ್ಕೆ (Vistara Kannada Sambhrama) ಇನ್ನು ಎರಡೇ ದಿನ ಬಾಕಿ ಉಳಿದಿದೆ. ನವೆಂಬರ್ 4ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ (Ravindra Kalakshetra) ನಡೆಯುವ ಅದ್ಧೂರಿ ಕಾರ್ಯಕ್ರಮದ ಕಾತರದ ಕ್ಷಣಗಳು ಹತ್ತಿರವಾಗುತ್ತಿವೆ.
ಕನ್ನಡ ಟಿವಿ ವಾಹಿನಿಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ ಮತ್ತು ಸಾಹಿತ್ಯದ ಹಬ್ಬ ಆಯೋಜಿಸಿದ ಕೀರ್ತಿ ವಿಸ್ತಾರ ನ್ಯೂಸ್‌ಗೆ ಸಲ್ಲುತ್ತದೆ. 2022ರಲ್ಲಿ ನಡೆದ ಕಾರ್ಯಕ್ರಮದ ಅದ್ಧೂರಿ ಯಶಸ್ಸಿನ ಬಳಿಕ ಇದೀಗ ಎರಡನೇ ವರ್ಷ ʻವಿಸ್ತಾರ ಕನ್ನಡ ಸಂಭ್ರಮʼ ಆಯೋಜಿಸಲಾಗಿದ್ದು, ಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ರಂಜಿಸಲಿದೆ. ವಿಸ್ತಾರ ನ್ಯೂಸ್‌ಗೆ ಒಂದು ವರ್ಷದ ತುಂಬುತ್ತಿರುವ ಹೊತ್ತಿನಲ್ಲಿ ಇದನ್ನು ʻವರ್ಷ ವೈಭವʼವಾಗಿಯೂ (Vistara Varsha Vaibhava) ಆಚರಿಸಲಾಗುತ್ತಿದೆ.
ಬೆಳಗ್ಗೆ 9 ಗಂಟೆಗೆ ಆರಂಭವಾಗಲಿರುವ ವಿಸ್ತಾರ ಕನ್ನಡ ಸಂಭ್ರಮದಲ್ಲಿ ರಾತ್ರಿ 12 ಗಂಟೆಯವರೆಗೂ ನಾನ್‌ಸ್ಟಾಪ್ ಮನರಂಜನೆಯ ಮಹಾಪೂರವಿದೆ. ಹಾಡು, ಸಂಗೀತ, ಕನ್ನಡ ಸಾಹಿತ್ಯದ ಗೋಷ್ಠಿಗಳು, ನಟ-ನಟಿಯರು, ಕಿರುತೆರೆ ಕಲಾವಿದರ ಜತೆ ನೇರ ಮುಕ್ತ ಮಾತುಕತೆ, ಯಕ್ಷಗಾನ ವೈಭವಗಳೊಂದಿಗೆ ಮೇಳೈಸಲಿದೆ.
ರವೀಂದ್ರ ಕಲಾಕ್ಷೇತ್ರದ ಪ್ರಧಾನ ವೇದಿಕೆ, ಕಲಾಕ್ಷೇತ್ರದ ಆವರಣ, ನಯನಾ ಸಭಾಂಗಣ, ಸಂಸ ಬಯಲು ರಂಗ ಮಂದಿರ ಹೀಗೆ ಎಲ್ಲ ಕಡೆಯೂ ವೈವಿಧ್ಯಮಯ ಕಾರ್ಯಕ್ರಮ, ಸಾಂಸ್ಕೃತಿಕ ಲೋಕದ ಅನಾವರಣ ನಡೆಯಲಿದೆ.
ಏನುಂಟು ಏನಿಲ್ಲ? ಈ ಸಂಭ್ರಮದ ಲೋಕದಲ್ಲಿ?
ವಿಸ್ತಾರ ಕನ್ನಡ ಸಂಭ್ರಮದಲ್ಲಿ ಸಂಗೀತೋತ್ಸವವಿದೆ, ನಾಟಕೋತ್ಸವವಿದೆ. ಆಹಾರೋತ್ಸವದ ಸವಿಯಿದೆ, ಪುಸ್ತಕೋತ್ಸವದ ಸೊಬಗಿದೆ. ಯಕ್ಷ ಗಾನ ಗಂಧರ್ವರೆಲ್ಲ ಧರೆಗಿಳಿವ ಸಡಗರವಿದೆ.
ನಾಡಿನ ಯೋಗಕ್ಷೇಮದ ರೂವಾರಿಗಳಾದ ಜನಪ್ರತಿನಿಧಿಗಳು, ನಿಮ್ಮ ನೆಚ್ಚಿನ ಚಂದನವನದ ಚಂದದ ತಾರೆಯರು, ಕಿರುತೆರೆಯ ನಿಮ್ಮ ಇಷ್ಟದ ನಟ-ನಟಿಯರು ಇಲ್ಲಿ ಸೇರಲಿದ್ದಾರೆ. ಕನ್ನಡಕ್ಕೆ ದನಿಯಾದ ಗಾಯಕರು, ಸಂಗೀತಗಾರರು, ಸ್ಟಾಂಡಪ್ ಕಾಮಿಡಿಯನ್‌ಗಳು, ಯಕ್ಷಿಣಿ ಜಾದೂಗಾರರು, ಎಲ್ಲರೂ ನಿಮ್ಮನ್ನು ಒಂದೇ ಕಡೆ ಎದುರ್ಗೊಳ್ಳಲಿದ್ದಾರೆ. ಇದು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಖುಷಿಪಡಬಹುದಾದ ಒಂದು ಪರಿಶುದ್ಧ ಫ್ಯಾಮಿಲಿ ಪ್ಯಾಕೇಜ್ ಕಾರ್ಯಕ್ರಮವಾಗಿ ಕಳೆಗಟ್ಟಲಿದೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದೆ.
ಮುಖ್ಯಮಂತ್ರಿಗಳಿಂದ ವಿಸ್ತಾರ ಕನ್ನಡ ಸಂಭ್ರಮಕ್ಕೆ ಚಾಲನೆ
ನವೆಂಬರ್ 4ರಂದು ಬೆಳಗ್ಗೆ 10 ಗಂಟೆಗೆ ವಿಸ್ತಾರ ಕನ್ನಡ ಸಂಭ್ರಮ- ವಿಸ್ತಾರ ನ್ಯೂಸ್ ವರ್ಷ ವೈಭವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಸಹಕಾರ ಸಚಿವ ಕೆ.ಎನ್ ರಾಜಣ್ಣ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ, ಬೆಂಗಳೂರು ಸೆಂಟ್ರಲ್ ಸಂಸದರಾದ ಪಿ.ಸಿ. ಮೋಹನ್, ಶಾಸಕರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಹಿರಿಯ ಸಾಹಿತಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಜನಪ್ರಿಯ ನಟ ರಮೇಶ್ ಅರವಿಂದ್, ಜನಪ್ರಿಯ ನಟಿ ಬೃಂದಾ ಆಚಾರ್ಯ ಅವರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಡಿಸಿಎಂ ಮತ್ತು ಇತರ ಗಣ್ಯರು ಭಾಗಿ
ಸಂಜೆ 6 ಗಂಟೆಯಿಂದ 7.30ರವರೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ದಿನೇಶ್ ಗುಂಡೂರಾವ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವರಾದ ಪ್ರಿಯಾಂಕ್ ಖರ್ಗೆ, ಶಾಸಕರಾದ ಜಿ.ಟಿ. ದೇವೇಗೌಡ, ಹಿರಿಯ ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಅದಮ್ಯ ಚೇತನ ಸಂಸ್ಥಾಪಕರಾದ ತೇಜಸ್ವಿನಿ ಅನಂತ್‌ಕುಮಾರ್, ಖ್ಯಾತ ಸಿನಿಮಾ ನಿರ್ದೇಶಕರಾದ ಯೋಗರಾಜ್ ಭಟ್, ಜನಪ್ರಿಯ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಮಾನ್ವಿತಾ ಕಾಮತ್ ಭಾಗವಹಿಸುತ್ತಿದ್ದಾರೆ.
ಸರ್ವರನ್ನೂ ಪ್ರೀತಿಯಿಂದ ಸ್ವಾಗತಿಸುತ್ತಿದೆ ವಿಸ್ತಾರ ತಂಡ
ವಿಸ್ತಾರ ನ್ಯೂಸ್ ಪ್ರೈವೆಟ್ ಲಿಮಿಟೆಡ್‌ನ ಎಕ್ಸಿಕ್ಯೂಟಿವ್ ಚೇರ್ಮನ್ ಆಗಿರುವ ಡಾ. ಎಚ್.ಎಸ್. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್. ವಿ. ಧರ್ಮೇಶ್, ನಿರ್ದೇಶಕರಾಗಿರುವ ಶ್ರೀನಿವಾಸ ಹೆಬ್ಬಾರ್, ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್ ಕೋಣೆಮನೆ, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು – ಸ್ಪೆಷಲ್ ಆಪರೇಷನ್ಸ್ ಸಂಪಾದಕರಾಗಿರುವ ಕಿರಣ್ ಕುಮಾರ್ ಡಿ.ಕೆ. ಅವರು ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸುತ್ತಿದ್ದಾರೆ.
15 ಗಂಟೆಗಳ ಕಾಲ ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮ
ಬೆಳಗ್ಗೆ 9.00 – 10.00: ಗೀತ ಬೆಳಗು
ಭಕ್ತಿ ಗೀತೆ, ಭಾವ ಗೀತೆ, ಜನಪದ, ಸೂಫಿ ಹಾಡುಗಳ ಮಾಧುರ್ಯ
ರಾಮಚಂದ್ರ ಹಡಪದ, ಆರ್. ಕೆ. ಸ್ಪರ್ಶ ಅವರಿಂದ ಗಾನಸುಧೆ
ಬೆಳಗ್ಗೆ 10.00ರಿಂದ 11.30: ವಿಸ್ತಾರ ಕನ್ನಡ ಸಂಭ್ರಮ ಉದ್ಘಾಟನೆ ಹಾಗೂ
ವಿಸ್ತಾರ ಪ್ರಕಾಶನದ ಪುಸ್ತಕಗಳ ಬಿಡುಗಡೆ
ಮಧ್ಯಾಹ್ನ 12.00 – 1.00: ಬಾರಿಸು ಕನ್ನಡ ಡಿಂಡಿಮವ
ಕನ್ನಡ ವಿಸ್ತರಿಸುತ್ತಿರುವ ಹೊಸ ದಿಕ್ಕುಗಳು: ವಿಚಾರಗೋಷ್ಠಿ
ವಿಷಯ ಮತ್ತು ಭಾಗವಹಿಸುವ ವಿಷಯ ತಜ್ಞರು
- ಕನ್ನಡ ಓದಿನ ಹೊಸ ಮೀಡಿಯಂ: ವಸಂತ್ ಶೆಟ್ಟಿ ಮೈಲಾಂಗ್ ಸಂಸ್ಥಾಪಕರು
- ಮುಕ್ತ ಡಬ್ಬಿಂಗ್: ಕನ್ನಡಕ್ಕೆ ಲಾಭ ಆಯ್ತಾ? ನಷ್ಟ ಆಯ್ತಾ?: ಹೃದಯಶಿವ ಚಿತ್ರ ಸಾಹಿತಿ
- ಮಾತೃ ಭಾಷೆಯಲ್ಲೇ ಏಕೆ ಕಲಿಯಬೇಕು?: ವೀಣಾ ರಾವ್
ಸಂಸ್ಥಾಪಕರು, ಭಾಷಾ ವಿದ್ಯಾ ಕನ್ನಡ ಕಲಿಕಾ ಕೇಂದ್ರ - ನಿತ್ಯದ ಬರವಣಿಗೆಯಾಗಿ ಕನ್ನಡ: ಶ್ರೀಧರ್ ನಾಗರಾಜ್ ‘ಜಸ್ಟ್ ಕನ್ನಡ’ ರೂವಾರಿ
- ಅಪಾರ್ಟ್‌ಮೆಂಟ್ ಗಳಲ್ಲಿ ಕನ್ನಡಾಭಿಮಾನ: ವಿಕ್ರಂ ರೈ ಕಾರ್ಯದರ್ಶಿ,
ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಷನ್ - ನಿರ್ವಹಣೆ: ಶ್ರೀ ಎನ್. ರವಿಶಂಕರ್ ಸಿಇಒ, ಏಮ್ಸ್ ಹೈ ಕನ್ಸಲ್ಟಿಂಗ್
ಮಧ್ಯಾಹ್ನ 1.30 – 2.30: ವಾಯ್ಸ್ ಆಫ್ ಯಂಗ್ ಕನ್ನಡಿಗ
ದನಿ ಬೇರೆ, ಭಾಷೆ ಒಂದೇ!: ವಿಶಿಷ್ಟ ಸಂವಾದ
ಸಂವಾದದಲ್ಲಿ ಪಾಲ್ಗೊಳ್ಳುವವರು
ಚಂದನ್ ಶೆಟ್ಟಿ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಕನ್ನಡ ರ‍್ಯಾಪರ್
ನಿರಂಜನ್ ದೇಶಪಾಂಡೆ ಹೆಸರಾಂತ ನಿರೂಪಕರು
ನೇತ್ರಾ ಖ್ಯಾತ ಆರ್ ಜೆ
ಸಿರಿ ಜನಪ್ರಿಯ ನಟಿ-ನಿರೂಪಕಿ
ಮಧ್ಯಾಹ್ನ 3.00 – 4.00: ಭಾಗ್ಯಲಕ್ಷ್ಮೀ & ಟೀಮ್ ಬರ್ತಾರಮ್ಮ!
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಾದ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಟೀಮ್ ಜತೆ ಆತ್ಮೀಯ ಸಂವಾದ
ಸಂಜೆ 4.30 – 5.30: ಮಕ್ಕಳ ನಾಟಕ
ಮೈಸೂರಿನ ಖ್ಯಾತ ‘ಅರಿವು’ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ನಾಟಕ: ವಿಗಡ ವಿಕ್ರಮರಾಯ
ರಚನೆ: ಸಂಸ, ನಿರ್ದೇಶನ: ಯತೀಶ್ ಎನ್. ಕೊಳ್ಳೇಗಾಲ
ಸಂಜೆ 6.00- 7.30: ಸಮಾರೋಪ ಸಮಾರಂಭ
ರಾತ್ರಿ 8.00- 9.30: ಲೈವ್ ಮ್ಯೂಸಿಕ್ ಧಮಾಕಾ
ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಶ್ರೀ ಗುರುಕಿರಣ್ ಮತ್ತು ತಂಡದಿಂದ ಸೂಪರ್ ಹಿಟ್ ಹಾಡುಗಳು (GURUKIRAN Live in Concert)
ರಾತ್ರಿ 10ರಿಂದ 12: ಯಕ್ಷಗಾನ ಪ್ರದರ್ಶನ
ಪ್ರಸಂಗ: ಕವಿರತ್ನ ಕಾಳಿದಾಸ
ಹೇರಂಜಾಲು ಯಕ್ಷಬಳಗ ಹಾಗೂ ಟೀಮ್ ಉತ್ಸಾಹಿ, ಬೆಂಗಳೂರು ತಂಡದಿಂದ
ಭಾಗವತರು: ಹೇರಂಜಾಲು ಗೋಪಾಲ ಗಾಣಿಗ, ಪಲ್ಲವ ಗಾಣಿಗ, ಜತೆಗೆ, ಕರಾವಳಿಯ ಪ್ರಖ್ಯಾತ ಯಕ್ಷಗಾನ ಕಲಾವಿದರು.
ಸಂಸ ಬಯಲು ರಂಗಮಂದಿರದಲ್ಲಿ ಹಲವು ಕಾರ್ಯಕ್ರಮ
ಪ್ರಧಾನ ವೇದಿಕೆಯ ಜತೆ ಜತೆಯಲ್ಲೇ ಸಂಸ ಬಯಲು ರಂಗ ಮಂದಿರದಲ್ಲೂ ಕಾರ್ಯಕ್ರಮಗಳು ನಡೆಯಲಿವೆ.
1. ಸಂಜೆ 4.00ರಿಂದ ಚಿಣ್ಣರಿಗಾಗಿ ಜಾದೂ: ಆಕಾಶ್ ಗುಪ್ತಾ ಅವರಿಂದ
2. ಸಂಜೆ 5ರಿಂದ 6: ಸ್ಟ್ಯಾಂಡಪ್ ಕಾಮಿಡಿ: ಖ್ಯಾತ ಹಾಸ್ಯ ಕಲಾವಿದ ಕಾರ್ತಿಕ್ ಪತ್ತಾರ್ ಹಾಸ್ಯ ಕಾರಂಜಿ
3. ಸಂಜೆ 6ರಿಂದ 6.30: ಸೀರೆ ಸೊಬಗು: ಸೀರೆಯಲ್ಲಿ ನೋಡಿ, ಲಲನೆಯರ ಮೋಡಿ!
ಮಿಸೆಸ್ ಇಂಡಿಯಾ ಕರ್ನಾಟಕ ಡೈರೆಕ್ಟರ್ ಪ್ರತಿಭಾ ಸಂಶಿಮಠ ತಂಡದಿಂದ ನಾಡಿನ ಪಾರಂಪರಿಕ ಉಡುಗೆ ಬಿಂಬಿಸುವ ರಾಂಪ್ ವಾಕ್
ಹೊರಾಂಗಣದಲ್ಲಿ ಪುಸ್ತಕ ಮೇಳ: 20%ವರೆಗೆ ರಿಯಾಯಿತಿ
ರವೀಂದ್ರ ಕಲಾಕ್ಷೇತ್ರದ ಹೊರಾವರಣದಲ್ಲಿ ಅಪೂರ್ವ ಪುಸ್ತಕ ಮೇಳ ನಡೆಯಲಿದ್ದು, 20ಕ್ಕೂ ಹೆಚ್ಚು ಜನಪ್ರಿಯ ಬುಕ್ ಸ್ಟಾಲ್‌ಗಳು ಭಾಗಿಯಾಗಲಿವೆ. ಸಾವಿರಾರು ಪುಸ್ತಕಗಳು ಒಂದೇ ಕಡೆ ಲಭ್ಯವಾಗಲಿದೆ. ಪುಸ್ತಕಗಳಿಗೆ ಶೇ.20ರವರೆಗೆ ವಿಶೇಷ ರಿಯಾಯಿತಿ ಇರಲಿದೆ.
ಭಾಗವಹಿಸಲಿರುವ ಪ್ರಕಾಶನ ಸಂಸ್ಥೆಗಳು
ಸಪ್ನ ಬುಕ್ ಹೌಸ್, ನವ ಕರ್ನಾಟಕ, ಅಂಕಿತ, ವಿಸ್ತಾರ ಪ್ರಕಾಶನ, ಸ್ನೇಹ ಬುಕ್ ಹೌಸ್, ಛಂದ ಪುಸ್ತಕ, ಸಾವಣ್ಣ ಪ್ರಕಾಶನ, ವೀರಲೋಕ, ಸಮನ್ವಿತ, ಸಾಹಿತ್ಯ ಪ್ರಕಾಶನ, ಸಾಹಿತ್ಯ ಲೋಕ, ವಿಕ್ರಂ ಪ್ರಕಾಶನ, ಹರಿವು ಬುಕ್ಸ್, ಅಯೋಧ್ಯ ಪ್ರಕಾಶನ, ಅಭಿನವ, ಅಮೂಲ್ಯ ಪುಸ್ತಕ, ಮೈತ್ರಿ ಸಂಸ್ಕೃತ- ಸಂಸ್ಕೃತಿ ಪ್ರತಿಷ್ಠಾನ, ಕದಂಬ ಪ್ರಕಾಶನ
ಬಿಡುಗಡೆಯಾಗಲಿರುವ ವಿಸ್ತಾರ ಪ್ರಕಾಶನದ ನೂತನ ಪುಸ್ತಕಗಳು
ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಸ್ತಾರ ಪ್ರಕಾಶನದ ನಾಲ್ಕು ಪುಸ್ತಕಗಳು ಬಿಡುಗಡೆಯಾಗಲಿವೆ.
1. ಕುಣಿಯೇ ಜೀವ : ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಸಹಯೋಗದಲ್ಲಿ ನಡೆಸಿದ್ದ ವಿಸ್ತಾರ ನ್ಯೂಸ್
ಯುಗಾದಿ ಕಥಾಸ್ಪರ್ಧೆ 2023ರ ಬಹುಮಾನಿತ ಕಥೆಗಳ ಸಂಕಲನ
2. ನಮ್ಮದೇ ಕಥೆಗಳು: ಲೇಖಕರು: ಕೃಷ್ಣ ಭಟ್ ಅಳದಂಗಡಿ
3.ರಾಜಮಾರ್ಗ: ಪ್ರೇರಣಾದಾಯಕ ಕಥೆಗಳು ಲೇಖಕರು: ರಾಜೇಂದ್ರ ಭಟ್ ಕೆ
4. ಅಮ್ಮ ಹೇಳುವ ಚಂದದ ಕಥೆಗಳು: ಲೇಖಕರು: ಅಲಕಾ ಕಟ್ಟೆಮನೆ
ಮಕ್ಕಳಿಗೆ ನಾನಾ ಮನರಂಜನೆಗಳ ಮಹಾಲೋಕ
ಯುವಕ ಸಂಘ, ಸಾಂಸ್ಕೃತಿಕ ಸಂಘಟನೆಗಳಿಂದ ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳು ನಡೆಯಲಿವೆ. ವಿಶೇಷ ಸ್ಪರ್ಧೆ ಮತ್ತು ಬಹುಮಾನಗಳಿವೆ. ಪುಟ್ಟ ಮಕ್ಕಳಿಗೆ ಆಟವಾಡಲು ಆಕರ್ಷಕ ಸಾಧನಗಳು ಇರಲಿವೆ.
ಹೊಟ್ಟೆ ತಣ್ಣಗಾಗಿಸುವ ಸವಿ ಸಂಭ್ರಮ
ವಿಸ್ತಾರ ಸಂಭ್ರಮದಲ್ಲಿ ಮೆದುಳಿಗೆ ಮಾತ್ರವಲ್ಲ, ಹೊಟ್ಟೆಯನ್ನೂ ತಣ್ಣಗೆ ಮಾಡುವ ವಿಶೇಷ ಆಹಾರ ಖಾದ್ಯಗಳ ಲೋಕವಿದೆ.
ಬಾಯಿಯಲ್ಲಿ ನೀರೂರಿಸುವ ರಾಜ್ಯದ ನಾನಾ ಭಾಗಗಳ ಆಹಾರ ಮಳಿಗೆಗಳು
ಮೈಸೂರು, ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಪ್ರದೇಶದ ವಿಶೇಷ ತಿಂಡಿಗಳು
ಸಾವಯವ ಆಹಾರ ಪದಾರ್ಥಗಳು, ದೇಸಿ ಉತ್ಪನ್ನಗಳ ವಿಶೇಷ ಮಳಿಗೆಗಳು ಇರಲಿವೆ.
ಜಾನಪದ ಕಲಾ ತಂಡದ ಪ್ರದರ್ಶನ: ಡಿಜಿಟಲ್ 3ಡಿ ಶೋ ಇರಲಿದೆ
ಸ್ಥಳದಲ್ಲೇ ನಿಮ್ಮ ಚಿತ್ರ ಬಿಡಿಸುತ್ತಾರೆ ಐವರು ಕಲಾವಿದರು
ಖ್ಯಾತ ಕಲಾವಿದರಾದ ಬಿ.ಜಿ. ಗುಜ್ಜಾರಪ್ಪ, ಜಿ.ಎಸ್. ರಂಗನಾಥ್, ರಘುಪತಿ ಶೃಂಗೇರಿ, ವಿ.ಆರ್.ಸಿ. ಶೇಖರ್, ರವಿ ಪೂಜಾರಿ ಅವರು ಕೆಲವೇ ನಿಮಿಷದಲ್ಲಿ ನಿಮ್ಮ ಪೆನ್ಸಿಲ್ ಸ್ಕೆಚ್ ರೆಡಿ ಮಾಡಲಿದ್ದಾರೆ.
ಇವರು ನಮ್ಮ ಪಾರ್ಟ್ನರ್‌ಗಳು
91.1 ಎಫ್‌ಎಂ ರೇಡಿಯೊ ಸಿಟಿ ನಮಗೆ ರೇಡಿಯೊ ಪಾರ್ಟ್ನರ್ ಆಗಿದ್ದರೆ, ಡೈಲಿಹಂಟ್ ಡಿಟಿಟಲ್ ಪಾರ್ಟ್ನರ್ ಆಗಿರಲಿದೆ.
ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಸಹಕರಿಸುವ ಸಂಘ ಸಂಸ್ಥೆಗಳು ಇವು
■ ಬೆಂಗಳೂರು ಅಪಾರ್ಟ್‌ಮೆಂಟ್ ಒಕ್ಕೂಟ
■ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ)
■ ರೋಟರಿ ಸಂಸ್ಥೆ, ಬೆಂಗಳೂರು
■ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ
■ ಮಾನ್ಯತೆ ಪಡೆದ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘ
■ ಶಿ ಫಾರ್ ಸೊಸೈಟಿ
■ ರಾಜ್ಯ ಆಗಮಿಕರ ಹಾಗೂ ಅರ್ಚಕರ ಸಂಘ
■ ರಾಜ್ಯ ಕಬ್ಬು ಬೆಳೆಗಾರರ ಸಂಘ
■ ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ
■ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
■ ಕರ್ನಾಟಕ ಹೋಟೆಲ್ ಮಾಲೀಕರ ಸಂಘ
■ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ
■ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ನಗರ ಜಿಲ್ಲಾ ಘಟಕ
■ ಕರ್ನಾಟಕ ಕಾರ್ಮಿಕ ಲೋಕ
■ ಕನ್ನಡ ಗೆಳೆಯರ ಬಳಗ
■ ಕೇಂದ್ರೀಯ ಸದನ ಕನ್ನಡ ಸಂಘ
■ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)
■ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)
■ ಕರ್ನಾಟಕ ಓಲಾ ಉಬರ್ ಚಾಲಕರ ಸಂಘ
■ ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ
■ ಕೇಬಲ್ ಆಪರೇಟರ್ ಸಂಘ
■ ಬಿಬಿಎಂಪಿ ನೌಕರರ ಸಂಘ
■ ವಿಷ್ಣು ಸೇನಾ ಸಮಿತಿ
■ ವೀರಲೋಕ ಸಂಸ್ಥೆ
■ ಆಸರೆ ಫೌಂಡೇಷನ್
ಇದನ್ನೂ ಓದಿ: Krishna Janmashtami : ವಿಸ್ತಾರ ನ್ಯೂಸ್‌ನಲ್ಲಿ ನಿಮ್ಮ ಮನೆಯ ಶ್ರೀಕೃಷ್ಣನ ದರ್ಶನ; ಇಲ್ಲಿದೆ Photo Gallery!