ನಾಲ್ಕನೇ ಅಲೆ ತಡೆಗಟ್ಟಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ( BBMP) ಹಾಗೂ ಅರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಾಮಾನ್ಯ ಜನರ ಜತೆಗೆ, ಬಹುಮುಖ್ಯವಾಗಿ ಗರ್ಭಿಣಿಯರ ಕುರಿತು ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ.
ಗರ್ಭಿಣಿಯರಿಗೆ ಕೋವಿಡ್ ಪಾಸಿಟಿವ್ ಎಂದಾದರೆ ಚಿಕಿತ್ಸೆ ನೀಡಬೇಕಾಗುತ್ತದೆ. ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಕೊವೀಡ್ ಹೆರಿಗೆ ಆಸ್ಪತ್ರೆಯನ್ನು ಮೀಸಲಿಡಲಾಗಿದೆ. ಪ್ರತಿ ವಲಯದಲೂ ಒಂದು ಕೊವೀಡ್ ಹೆರಿಗೆ ಆಸ್ಪತ್ರೆ ತೆರೆಯಲು ನಿರ್ಧರಿಸಿ ಆಸ್ಪತ್ರೆಗಳನ್ನು ಕಾಐದಿರಿಸಲಾಗಿದೆ. ಈ ಆಸ್ಪತ್ರೆಗಳಿಗೆ ಬೇಕಾಗಬಹುದಾದ ದಾದಿಯರು, ವೈದ್ಯರಯ ಹಾಗೂ ಸಿಬ್ಬಂದಿ ನೇಮಕಾತಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ Covid-19 ಪಾಸಿಟಿವ್: ಎರಡೂ ಡೋಸ್ ಲಸಿಕೆ ಪಡೆದಿದ್ದ ನಂ-2
ಕರೊನಾ ಮೊದಲ ಮತ್ತು 2ನೇ ಅಲೆಯ ವೇಳೆ ಗರ್ಭಿಣಿಯರು ಹಾಗೂ ಬಾಣಂತಿಯರ ಚಿಕಿತ್ಸೆಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಆದರೆ ಈ ವೇಳೆ ಕೆಲವು ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕಳೆದ ಬಾರಿ ವಾಣಿವಿಲಾಸ ಮತ್ತು ಘೋಷಾ ಆಸ್ಪತ್ರೆಯನ್ನು ಮೀಸಲಾಗಿಡಲಾಗಿತ್ತು. ಕೋವಿಡ್ 2ನೇ ಅಲೆಯ ವೇಳೆ ಪಾಲಿಕೆಯ ಕೆಲವು ಆಸ್ಪತ್ರೆಗಳನ್ನು ಸಿದ್ಧಪಡಿಸಿ, ಅಲ್ಲಿ ಹೆರಿಗೆ ಮತ್ತು ಕೋವಿಡ್ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: Covid-19 | ಇನ್ನೂ 2ನೇ ಡೋಸ್ ಲಸಿಕೆ ಪಡೆಯದ 30 ಲಕ್ಷ ಜನ: ರಾಜ್ಯದಲ್ಲಿ ಹೈ ಅಲರ್ಟ್
ಅದೇ ರೀತಿ ಕೋವಿಡ್ 4ನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಗರ್ಭಿಣಿಯರ ಹೆರಿಗೆಗೆ ಮತ್ತು ಸೋಂಕಿತ ಬಾಣಂತಿಯರ ಆರೈಕೆಗೆ ಪ್ರತ್ಯೇಕವಾಗಿ ಆಸ್ಪತ್ರೆಯನ್ನು ಮೀಸಲು ಮಾಡಿ ಪಾಲಿಕೆಯ ಕೆಲವು ಹೆರಿಗೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಕೂಲ ಆಗುವಂತೆ ಆಮ್ಲಜನಕ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ವಲಯದ ಆಸ್ಪತ್ರೆಯಲ್ಲಿ ಕನಿಷ್ಠ 10 ಹಾಸಿಗೆ, ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಸಿಬ್ಬಂದಿ ಕಾರ್ಯ ಪಾಲಿಕೆಯ ಕ್ಲಿನಿಕಲ್ ವಿಭಾಗದ ಅರೋಗ್ಯಾಧಿಕಾರಿ ಡಾ: ನಿರ್ಮಲಾ ಬುಗ್ಗಿ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಾಸ್ಕ್ ಧರಿಸದಿದ್ದರೆ ದಂಡ ಎಂದ ಸರ್ಕಾರ: ಜನರು ಮಾತ್ರ Don’t Care