ಬೆಂಗಳೂರು: ರಾಜಧಾನಿಯಲ್ಲಿ, ಶಕ್ತಿಕೇಂದ್ರವಾದ ವಿಧಾನಸೌಧದ ಹತ್ತಿರದಲ್ಲೇ ವ್ಯಕ್ತಿಯೊಬ್ಬರನ್ನು ದರೋಡೆ ಮಾಡಲು ನಡೆಸಿದ ಯತ್ನ (Robbery attempt) ವರದಿಯಾಗಿದೆ. ಕಮಿಷನರ್ ಕಚೇರಿಯೂ ಇಲ್ಲೇ ಹತ್ತಿರದಲ್ಲಿದ್ದು, ಇಲ್ಲಿ ನಡೆದ ರಾಬರಿ ಯತ್ನ ಒಟ್ಟಾರೆ ಸುರಕ್ಷತೆಯ ಬಗೆಗೆ ಆತಂಕ ಮೂಡಿಸಿದೆ.
ಬೆಳ್ಳಂಬೆಳಗ್ಗೆ 5.50ರ ಸುಮಾರಿಗೆ ಘಟನೆ ನಡೆದಿದೆ. ಬಾಣಸವಾಡಿಯ ನಿವಾಸಿಯಾಗಿರುವ ಸುನಿಲ್ ಕುಮಾರ್ ಎಂಬವರು ಹೂವು ಖರೀದಿಗಾಗಿ ಮಾರ್ಕೆಟ್‌ಗೆ ತೆರಳುತ್ತಿದ್ದ ವೇಳೆ ವಿಧಾನಸೌಧ ಬಳಿಯ ಮೀಸೆ ತಿಮ್ಮಯ್ಯ ಸರ್ಕಲ್‌ನಲ್ಲಿ ಇಬ್ಬರು ಅಪರಿಚಿತರು ದ್ವಿಚಕ್ರವಾಹನವನ್ನು ಹಿಂಬಾಲಿಸಿ ಬಂದು ಕೀ ಕಸಿದಿದ್ದರು. ಇದಕ್ಕೆ ಸುನಿಲ್ ಪ್ರತಿರೋಧಿಸಿ ಹೆಲ್ಮೆಟ್‌ನಿಂದ ಹೊಡೆದಿದ್ದಾರೆ. ಕೆಳಕ್ಕೆ ಬಿದ್ದ ಆರೋಪಿಗಳನ್ನು ಹಿಡಿಯಲು ಹೋದಾಗ ಚಾಕುವಿನಿಂದ ಹೆದರಿಸಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿಧಾನಸೌಧ ಹೊಯ್ಸಳ ಪೊಲೀಸರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ: Road accident : ಬೈಕ್‌ಗಳ ಮುಖಾಮುಖಿ ಡಿಕ್ಕಿ; ಒಂದು ಬೆಂಕಿಗಾಹುತಿ, ವಿದೇಶಿ ಸವಾರನ ಮೇಲೆ ಸ್ಥಳೀಯರ ಹಲ್ಲೆ