ಬೆಂಗಳೂರು: ಹಂಗಾಮುವಾರು ಬೆಳೆ ವಿಮೆಯನ್ನು ನವೆಂಬರೊಳಗೆ ಇತ್ಯರ್ಥಪಡಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅಧಿಕಾರಿಗಳಿಗೆ ಸೂನೆ ನೀಡಿದ್ದಾರೆ. ಶೀಘ್ರವಾಗಿ ಬೆಳೆ ವಿಮೆ ಇತ್ಯರ್ಥಪಡಿಸುವ ಕುರಿತು ವಿಕಾಸಸೌಧದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಇ-ಆಡಳಿತ ಹಾಗೂ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖಾಧಿಕಾರಿಗಳೊಂದಿಗೆ ತಾಂತ್ರಿಕ ದೋಷಗಳ ಪರಿಹಾರಗಳ ಬಗ್ಗೆ ಚರ್ಚಿಸಲಾಯಿತು. ಬೆಳೆ ವಿಮೆಗೆ ಅನುಕೂಲ ಕಲ್ಪಿಸುವ ʼನನ್ನ ಬೆಳೆ ನನ್ನ ಹಕ್ಕುʼ ಬೆಳೆ ಸಮೀಕ್ಷೆ ಯೋಜನೆಗೆ ರೈತರು ಹೆಚ್ಚು ಒತ್ತು ನೀಡಿ ರೈತರೇ ಸ್ವತಃ ಮೊಬೈಲ್ ಬೆಳೆ ಸಮೀಕ್ಷೆಯನ್ನು ಯಶಸ್ವಿಯಾಗಿ ಮಾಡುವಂತೆ ನೋಡಿಕೊಳ್ಳಬೇಕು. ಬಳಿಕ ಈ ಮಾಹಿತಿ ರೈತರಪಹಣಿಯಲ್ಲಿ ತಕ್ಷಣವೇ ನಮೂದಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಇದನ್ನೂ ಓದಿ| ಲಿಂಗಾಯತ ಧರ್ಮ ನಾವು ರಾಜಕೀಯಕ್ಕೆ ಬಳಸುವುದಿಲ್ಲ: ಎಂ.ಬಿ.ಪಾಟೀಲ್