ಬೆಂಗಳೂರು: ಬೆಂಗಳೂರಿನಲ್ಲಿ ತೀವ್ರ ಚಳಿ ಹಾಗೂ ಮೋಡಕವಿದ ವಾತಾವರಣ ಮುಂದುವರಿದಿದೆ. ಶುಕ್ರವಾರ ಮಧ್ಯಾಹ್ನ ನಂತರ ಹಾಗೂ ಶನಿವಾರ ಮುಂಜಾನೆ ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ.
ಒಂದ ಕಡೆ ವಿಪರೀತ ಚಳಿ ಮತ್ತೊಂದು ಕಡೆ ನಗರದ ಹಲವೆಡೆ ಬಿಟ್ಟು ಬಿಡದ ತುಂತುರು ಮಳೆಯಿಂದಾಗಿ ಇಡೀ ಬೆಂಗಳೂರು ಹಿಲ್ ಸ್ಟೇಶನ್‌ನಂತಾಗಿದೆ. ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ವ್ಯಾಪಿಸಿರುವ ಮಾಂಡೌಸ್ ಚಂಡಮಾರುತದ ಎಫೆಕ್ಟ್‌ನಿಂದಾಗಿ ನಗರದಲ್ಲಿ ಈ ವಾತಾವರಣ ಉಂಟಾಗಿದೆ.
ಇನ್ನೂ ಮೂರು ದಿನಗಳ ಕಾಲ ಇದೇ ವಾತಾವರಣ ಮುಂದುವರೆಯುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತ ಚಂಡಮಾರುತವಾಗಿದೆ. ದಟ್ಟ ಮೋಡ ಇರುವ ಕಾರಣ ಕನಿಷ್ಠ ತಾಪಮಾನ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿ ಚಳಿ ಸೃಷ್ಟಿಯಾಗಿದೆ. ಅರಬೀ ಸಮುದ್ರದ ಕಡೆ ಚಂಡಮಾರುತ ಸಾಗುತ್ತಿದ್ದು, ಇನ್ನೂ ಎರರು- ಮೂರು ದಿನ ಇದೇ ವಾತಾವರಣ ಇರುವುದಾಗಿ ಹೇಳಲಾಗಿದೆ.
ಡಿಸೆಂಬರ್‌ನ ಚಳಿಗೆ ಬೆಂಗಳೂರಿನ ಜನತೆ ಸಿದ್ಧರಾಗಿದ್ದರು. ಆದರೆ ಈ ದಿಡೀರ್ ತಾಪಮಾನ ಇಳಿಕೆ ಹಾಗೂ ಮಳೆಯನ್ನು ನಿರೀಕ್ಷಿಸದ ಕಾರಣ ತಬ್ಬಿಬ್ಬಾಗಿದ್ದಾರೆ.
ಇದನ್ನೂ ಓದಿ | Cyclone Mandous: ತಮಿಳುನಾಡಿನಲ್ಲಿ ರೆಡ್ ಅಲರ್ಟ್, ಬೆಂಗಳೂರಿನಲ್ಲಿ ತುಂತುರು ಮಳೆ