ಬೆಂಗಳೂರು: ರೌಡಿ ಶಿಟರ್‌ಗಳು ಹಾಗೂ ರೇಪಿಸ್ಟ್‌ಗಳು ಬಿಜೆಪಿಯ ಮುತ್ತುರತ್ನಗಳು, ಅವರನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂದು ಬಿಜೆಪಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K. Shivakumar) ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಭೇಟಿ ವೇಳೆ ಫೈಟರ್ ರವಿ ಭೇಟಿಯ ಫೋಟೊ ವೈರಲ್ ಆಗಿದ್ದರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಅವರೆಲ್ಲ ಬಿಜೆಪಿಯವರ ಮುತ್ತು ರತ್ನಗಳು. ಯಾರಿಗಾದರೂ ಮೋದಿ ಕೈ ಮುಗಿಯಲಿ. ರೌಡಿಶೀಟರ್, ಸ್ಯಾಂಟ್ರೋ ನಾದ್ರೂ ಸೇರಿಸ್ಕೊಳ್ಳಿ ರೇಪಿಸ್ಟ್ ನಾದರೂ ಸೇರಿಸಿಕೊಳ್ಳಲಿ. ಅವರ ಮುತ್ತುರತ್ನಗಳನ್ನ ಚೆನ್ನಾಗಿ ನೋಡಿಕೊಳ್ಳಲಿ ಎಂದರು.
ರಮೇಶ್ ಜಾರಕಿಹೊಳಿ ಕುರಿತು ಕೇಳಿದ ಪ್ರಶ್ನೆಗೆ, ನಿಮ್ಹಾನ್ಸ್ ಅಭ್ಯರ್ಥಿಗಳ ಬಗ್ಗೆ ನಾನು ಈಗ ಮಾತಾಡಲ್ಲ. ಹಾಸ್ಪಿಟಲ್ ಅಭ್ಯರ್ಥಿಗಳ ಬಗ್ಗೆ ನಾನು ಮಾತಾಡಲ್ಲ.. ಅವರ ಪಾರ್ಟಿದು ಏನಿದೆ ಎಂದು ಗೊತ್ತಿಲ್ಲ ಎಂದರು.
ಶನಿವಾರ ಮೃತಪಟ್ಟ ಧೃವನಾರಯಣ್ ಪುತ್ರನಿಗೆ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಐಸಿಸಿ ಅಧ್ಯಕ್ಷರು ಅವರ ಆಪ್ತರಾಗಿದ್ದರು. ಅವರೇ ತೀರ್ಮಾನ ಮಾಡ್ತಾರೆ. ನಾನೇನು ಅಭಿಪ್ರಾಯ ಕೊಡಬೇಕು ಎಂದು ಅದನ್ನ ಕೊಟ್ಟಿದ್ದೇನೆ. ಕಳೆದುಕೊಂಡಿದ್ದೇವೆ, ಅವರ ಆತ್ಮಕ್ಕೆ ಶಾಂತಿ ಸಿಗಲು ಏನು ಮಾಡಬೇಕೊ ಅದನ್ನ ಮಾಡ್ತೇವೆ ಎಂದರು.
ರಾಜಾಜಿನಗರ ಟಿಕೆಟ್ ಆಕಾಂಕ್ಷಿಗಳ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಹೇಳಿದ್ರು ಟಿಕೆಟ್ ಕೊಟ್ಟಿದ್ದೇವೆ ಅಂತ? ಕಾಂಗ್ರೆಸ್ ಪಾರ್ಟಿ ಯಾರ ಬ್ಲಾಕ್ ಮೇಲ್‌ಗೂ ಹೆದರಲ್ಲ ಎಂದು ತಿಳಿಸಿದರು.
ಫೈಟರ್ ರವಿಗೆ ಪ್ರಧಾನಿ ಕೈಮುಗಿದಿರುವುದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ, ಈಗ ರಾಜಕಾರಣ ಮೌಲ್ಯವೂ ಉಳಿದಿಲ್ಲ, ಪ್ರಾಣಿಕತೆಯೂ ಉಳಿದಿಲ್ಲ. ಮಂಡ್ಯ ಜಿಲ್ಲೆಗೆ ಬಂದ ಉದ್ದೇಶ ರಸ್ತೆ ಉದ್ಘಾಟನೆಗೆ. ಅದೇ ಒಂದು ದುರಂತ. ರಸ್ತೆ ಕ್ವಾಲಿಟಿಯಿಂದ ಆಗಿಲ್ಲ. ಅನೇಕರು ಅಪಘಾತದಲ್ಲಿ ಮೃತಪಟ್ಟಿದಾರೆ. ಈಗಲೂ ನಾವು ಕೂಡ ಹೋಗಲು ಆ ರಸ್ತೆಯಲ್ಲಿ ಭಯವಾಗುತ್ತದೆ. ಇಂತಹ ಒಂದು ರಸ್ತೆಯನ್ನು ಸಾರ್ವಜನಿಕರಿಗೆ ಸಮರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ: Modi in Karnataka: ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು: ಕಾಂಗ್ರೆಸ್ ಟ್ವೀಟ್
ಅಲ್ಲಿ ಇನ್ನೂ ರೆಸ್ಟ್ ಪ್ಲೇಸ್ ಮಾಡಿಲ್ಲ, ಜತೆಗೆ ಸರ್ವಿಸ್ ರೋಡ್ ಕಂಪ್ಲೀಟ್ ಆಗಿಲ್ಲ. ಇದನ್ನ ಮಾಡೋಕೆ ಇನ್ನೂ ಒಂದು ವರ್ಷ ಆಗುತ್ತೆ. ಎಲ್ಲಿಯೂ ಎಕ್ಸಿಟ್ ಮತ್ತು ಎಂಟ್ರಿ ಇನ್ನೂ ಫೈನಲ್ ಆಗಿಲ್ಲ. ಮಂಡ್ಯ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಬೈಪಾಸ್ ಮಾಡಿಲ್ಲ. ಇದ್ಯಾವುದೂ ಅವರದ್ದು ಅಲ್ಲ. ಕಾಂಗ್ರೆಸ್ನವರು ಪ್ರಾರಂಭ ಮಾಡಿದ ರಸ್ತೆ ಇದು, ರಾಜಕೀಯವಾಗಿ ಪ್ರಧಾನಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹದಕ್ಕೆ ಬರಬಾರದಿತ್ತು ಎಂದು ಹೇಳಿದರು.
ಸುಮಲತಾ ಸೇರ್ಪಡೆಯಿಂದ ಮಂಡ್ಯದಲ್ಲಿ ತ್ರಿಕೋನ ರಾಜಕೀಯ ಏರ್ಪಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆಯಲ್ಲಿ ನಾನು ಹೇಳಿದ್ದೆ, ತೀರ್ಮಾನ ಮಾಡೋದು ಮಂಡ್ಯದ ಜನ ನಾವು ಹೇಳೋದು ಸೂಕ್ತವಲ್ಲ. ಅವರ ಸೇರ್ಪಡೆ ಅವರ ಇಚ್ಛೆ. ಇಂಡಿಪೆಂಡೆಂಟ್ ಸಂಸದರಾಗಿದ್ದರು. ಹೀಗಾಗಿ ಅವರ ಸೇರ್ಪಡೆಯನ್ನು ನಾವ್ಯಾರು ಪ್ರಶ್ನೆ ಮಾಡುವಂತಿಲ್ಲ ಅವರು ಗೆದ್ದಿದ್ದಾರೆ. ಇಂಡಿಪೆಂಡೆಂಟ್ ಇದ್ದಾರೆ ಅವರ ಸ್ವಂತ ತೀರ್ಮಾನ ತೆಗೆದುಕೊಂಡಿದ್ದಾರೆ.ಅದು ಅವರಿಗೆ ಬಿಟ್ಟ ವಿಚಾರ ಮಂಡ್ಯ ಜನರು ಬುದ್ಧಿವಂತರಿದ್ದಾರೆ.
ಈ ಸಲ ಕಾಂಗ್ರೆಸ್ ಪರ ಅಲೆ ಎದ್ದಿದೆ. ತೀರ್ಮಾನ ತೆಗೆದುಕೊಳ್ಳುತ್ತಾರೆ. ಮಂಡ್ಯದಲ್ಲಿ 7ಕ್ಕೆ 7 ಕಾಂಗ್ರೆಸ್ಗೆ ರಿಸಲ್ಟ್ ತಂದುಕೊಡ್ತಾರೆ. ಮಂಡ್ಯ ಜನರ ಮೇಲೆ ನಂಬಿಕೆ ಇದೆ. ಸುಮಲತಾ ಸೇರ್ಪಡೆಯಿದ ನಮಗೆ ತೊಂದರೆ ಇಲ್ಲ ಎಂದು ಹೇಳಿದರು.