ಬೆಂಗಳೂರು: ದೀಪಾವಳಿ ಹಬ್ಬದ (Deepavali 2023) ಮೊದಲ ದಿನವಾದ ಭಾನುವಾರ ಒಂದೇ ದಿನ ಪಟಾಕಿ ಸಿಡಿದು ಕಣ್ಣಿಗೆ ಗಾಯವಾದ (Firecracker injury) 29 ಪ್ರಕರಣಗಳು ದಾಖಲಾಗಿವೆ.
ನಿನ್ನೆ ಒಂದೇ ದಿನ 29ಕ್ಕೂ ಹೆಚ್ಚು ಪಟಾಕಿ ಸಿಡಿತದಿಂದ ಗಾಯ ಪ್ರಕರಣಗಳು ದಾಖಲಾಗಿದ್ದು, ನಾರಾಯಣ ನೇತ್ರಾಲಯದಲ್ಲಿ (Narayana netralaya) 22 ಮಂದಿ ಹಾಗೂ ಮಿಂಟೋ ಆಸ್ಪತ್ರೆಯಲ್ಲಿ 7 ಮಂದಿ ಚಿಕಿತ್ಸೆಗಾಗಿ ಧಾವಿಸಿದ್ದಾರೆ.
ನಾರಾಯಣ ನೇತ್ರಾಲಯದ 22 ಪ್ರಕರಣಗಳಲ್ಲಿ 10 ಮಂದಿಗೆ ಮೇಜರ್ ಗಾಯಗಳಾಗಿವೆ. ಸರ್ಜರಿಯ ಅಗತ್ಯವಿದೆ. 12 ಜನರಿಗೆ ಮೈನರ್ ಇಂಜುರಿಯಾಗಿದೆ. 4 ಮಕ್ಕಳು ಹಾಗೂ ಉಳಿದ ವಯಸ್ಕರು ಪಟಾಕಿ ಸಿಡಿತದಿಂದ ಗಾಯಗೊಂಡಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ (Minto hospital) 7 ಪ್ರಕರಣ ದಾಖಲಾಗಿದ್ದು, ಇಬ್ಬರಿಗೆ ಮೇಜರ್ ಇಂಜುರಿ; ಉಳಿದ 5 ಕೇಸ್‌ಗಳು ಒಪಿಡಿಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. 10 ವರ್ಷದ ಬಾಲಕಿ ಮತ್ತು 18 ವರ್ಷದ ಯುವಕನ ಕಣ್ಣಿಗೆ ಗಂಭೀರ ಗಾಯವಾಗಿದೆ. ಇಬ್ಬರಿಗೂ ಸರ್ಜರಿ ಮಾಡುವ ಅವಶ್ಯಕತೆ ಇದೆ ಎಂದು ಡಾಕ್ಟರ್ ಮಾಹಿತಿ ನೀಡಿದ್ದಾರೆ.
ಪಟಾಕಿ ಹಚ್ಚುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಇಂಥ ಅವಘಡಗಳಾಗುತ್ತಿವೆ. ಪಟಾಕಿಯ ಮೇಲೆ ಬಾಗಿ ಹಚ್ಚುವುದು ಅಥವಾ ಮೈಗೆ ಸಮೀಪದಲ್ಲಿ ಹಿಡಿದು ಹಚ್ಚುವುದು, ನೈಲಾನ್ ಬಟ್ಟೆಗಳನ್ನ ಧರಿಸಿಕೊಂಡಿರುವುದು ಇತ್ಯಾದಿಗಳು ಅಪಾಯಕಾರಿಗಳಾಗಿವೆ.
ಬೆಂಕಿ ಅವಘಡ, ಹೊತ್ತಿ ಉರಿದ ಐಟಿ ಕಂಪನಿ, ಪೀಠೋಪಕರಣ ಮಳಿಗೆ
ಬೆಂಗಳೂರು: ರಾಜಧಾನಿಯ ರಾಮಮೂರ್ತಿನಗರದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಐಟಿ ಕಂಪನಿ ಹಾಗೂ ಪೀಠೋಪಕರಣ ಮಳಿಗೆ ಸಂಪೂರ್ಣ ಹೊತ್ತಿ ಉರಿದು ಭಸ್ಮವಾಗಿದೆ.
ಕಟ್ಟಡದಲ್ಲಿದ್ದ ಐಟಿ ಕಂಪನಿ, ಫರ್ನಿಚರ್ ಶಾಪ್ ಹಾಗೂ ಕೋಚಿಂಗ್ ಸೆಂಟರ್ ಸಂಪೂರ್ಣ ಸುಟ್ಟು ಕರಕಲಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಢ ನಡೆದಿರುವ ಶಂಕೆಯಿದೆ.
ಬಾಣಸವಾಡಿ ಔಟರ್ ರಿಂಗ್ ರೋಡ್‌ನಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನ ದೌಡಾಯಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಕಟ್ಟಡದ ನಾಲ್ಕು ಅಂತಸ್ತಿನಲ್ಲಿದ್ದ ವಸ್ತುಗಳು ಸಂಪೂರ್ಣ ಭಸ್ಮವಾಗಿವೆ.
ನೆಲ ಹಾಗೂ ಮೊದಲ ಮಹಡಿಯಲ್ಲಿ ಸ್ಟ್ಯಾನ್ಲಿ ಫರ್ನಿಚರ್ಸ್, ಎರಡನೇ ಮಹಡಿಯಲ್ಲಿ ಕಾಮೆಡ್ ಕೋಂಚಿಂಗ್ ಸೆಂಟರ್ ಹಾಗೂ 3, 4ನೇ ಮಹಡಿಯಲ್ಲಿ ಬ್ರೇಕ್ಸ್ ಕಂಟ್ರೋಲ್ಸ್ ಸಾಫ್ಟ್‌ವೇರ್ ಕಂಪನಿಗಳಿದ್ದವು. ಇವೆಲ್ಲವೂ ಸಂಪೂರ್ಣ ಸುಟ್ಟುಹೋಗಿವೆ.
ಕಟ್ಟಡದಲ್ಲಿದ್ದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಟ್ಟಡದಲ್ಲಿ ಸಿಲುಕಿದ್ದ ಸೆಕ್ಯೂರಿಟಿ ಗಾರ್ಡ್‌ಗಳನ್ನು ಅಗ್ನಿಶಾಮಕದಳ ಸಿಬ್ಬಂದಿಗಳು ರಕ್ಷಿಸಿದರು.
ಇದನ್ನೂ ಓದಿ: ದಿಲ್ಲಿ ಮಾತ್ರವಲ್ಲ, ದೇಶಾದ್ಯಂತ ಪಟಾಕಿ ನಿಷೇಧ ಎಂದ ಸುಪ್ರೀಂ ಕೋರ್ಟ್