ನವ ದೆಹಲಿ: ಭಾರತದ ೨೦೨೨ರ ಟಾಪ್ 10 ಮಾಲಿನ್ಯಭರಿತ ನಗರಗಳ ಪಟ್ಟಿಯನ್ನು ನ್ಯಾಶನಲ್ ಕ್ಲೀನ್ ಏರ್ ಪ್ರೋಗ್ರಾಮ್ (NCAP) ಬಿಡುಗಡೆಗೊಳಿಸಿದ್ದು, ದಿಲ್ಲಿ ಮೊದಲ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ (10 Most polluted cities) ಬೆಂಗಳೂರು ಇಲ್ಲ. ಹೀಗಾಗಿ ಭಾರಿ ಪರಿಸರ ಮಾಲಿನ್ಯದ ನಗರಗಳ ಕಳಂಕ ಬೆಂಗಳೂರಿಗೆ ತಪ್ಪಿದೆ.
ಅತಿ ಹೆಚ್ಚು ಮಾಲಿನ್ಯವಾಗಿರುವ ಟಾಪ್ 10 ನಗರಗಳ ಪಟ್ಟಿ ಇಂತಿದೆ. ದಿಲ್ಲಿ, ಫರೀದಾಬಾದ್, ಗಾಜಿಯಾಬಾದ್, ಪಟನಾ, ಮುಜಾಫರಬಾದ್, ನೋಯ್ಡಾ, ಮೀರತ್, ಗೋವಿಂದ್‌ಗಢ್, ಗಯಾ, ಜೋಧ್‌ಪುರ.
ಕೇಂದ್ರ ಪರಿಸರ ಮಾಲಿನ್ಯ ಮಂಡಳಿಯ ಅಂಕಿ ಅಂಶಗಳನ್ನು ಆಧರಿಸಿ ಪಟ್ಟಿಯನ್ನು ರಚಿಸಲಾಗಿದೆ.