ಬೆಂಗಳೂರು: ಮನೆಯಲ್ಲಿ ಯಾರಾದರೂ ಮೃತಪಟ್ಟಿದ್ದಾರೆಯೇ ಅಥವಾ ಆರೋಗ್ಯ ಸರಿಯಿಲ್ಲವೇ… ಹೀಗಿದ್ದರೆ ಮಾತ್ರ ರಜೆ ತೆಗೆದುಕೊಳ್ಳಿ, ಸಕಾರಣವಿಲ್ಲದೆ ರಜೆ ಕೇಳಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆಗ್ನೇಯ ವಿಭಾಗದ ಡಿಸಿಪಿ ಹೊರಡಿಸಿರುವ ಸುತ್ತೋಲೆ, ಪೊಲೀಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ನಗರ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಈ ಆದೇಶ ಹೊರಡಿಸಿದ್ದು, ತಮ್ಮ ವ್ಯಾಪ್ತಿಯಲ್ಲಿರುವ ಸಿಬ್ಬಂದಿ ಹಾಗೂ ಅಧಿಕಾರಿ ಮಟ್ಟದ ಪೊಲೀಸರು ಸಕಾರಣವಿಲ್ಲದೆ ರಜೆ ತೆಗೆದುಕೊಳ್ಳುವ ಹಾಗಿಲ್ಲ. ಸಂಬಂಧಿಕರು ಯಾರಾದರೂ ಮೃತಪಟ್ಟರೆ ಅಥವಾ ಅನಾರೋಗ್ಯಕ್ಕೆ ಒಳಗಾದಾಗ ಮಾತ್ರ ರಜೆ ಪಡೆಯಬೇಕು. ಅನಿವಾರ್ಯ ಕಾರಣ ಹೊರತುಪಡಿಸಿ ಪದೇಪದೆ ರಜೆ ಪಡೆದುಕೊಂಡರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಆಯಾ ವಿಭಾಗದ ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳು ರಜೆಗೆ ಅನುಮತಿ ನೀಡಕೂಡದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಪದೇಪದೆ ಕಚೇರಿಗೆ ಬಂದು ರಜೆ ಬಗ್ಗೆ ಪ್ರಸ್ತಾಪಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಜೆ ಅನಿವಾರ್ಯ ಇದ್ದರೆ ತಮ್ಮ ಅನುಮತಿ ಪಡೆದುಕೊಳ್ಳಬೇಕೆಂದು ಎಂದು ಡಿಸಿಪಿ ಸೂಚಿಸಿದ್ದಾರೆ. ಡಿಸಿಪಿ ಆದೇಶ ಹೊರಡಿಸುತ್ತಿದ್ದಂತೆ ಕೆಳ ಹಂತದ ಪೊಲೀಸ್ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಪಿ ಸಿ.ಕೆ.ಬಾಬಾ, ಕಳೆದ ತಿಂಗಳು 28ರಂದೇ ಆದೇಶ ಹೊರಡಿಸಲಾಗಿತ್ತು. ಈ ಆದೇಶವು ಕೆಳಹಂತದ ಸಿಬ್ಬಂದಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | Weather Report | ಬೆಂಗಳೂರಿಗರೇ ಎಚ್ಚರ.. 5 ದಿನ ಭಾರಿ ಮಳೆ; ಮೈಸೂರು, ಕೊಡುಗಿಗೂ ಯೆಲ್ಲೋ ಅಲರ್ಟ್!