Site icon Vistara News

ಪಟಾಕಿ ಗಾಯ | ಹಬ್ಬದ ಮೊದಲ ದಿನವೇ 6 ಪ್ರಕರಣ ದಾಖಲು

eye injure

ಬೆಂಗಳೂರು: ರಾಜಧಾನಿಯಲ್ಲಿ ಪಟಾಕಿಯಿಂದ ಗಾಯಗೊಂಡವರ ಸಂಖ್ಯೆ 11ಕ್ಕೆ ಏರಿದೆ. ನಿನ್ನೆ ಒಂದೇ ದಿನ ಮಿಂಟೋ ಆಸ್ಪತ್ರೆಯಲ್ಲಿ 6 ಪ್ರಕರಣಗಳು ದಾಖಲಾಗಿವೆ.

ಬಿಜಿಲಿ ಹಾಗೂ ಲಕ್ಷ್ಮೀ ಪಟಾಕಿಯಿಂದಲೇ ಹೆಚ್ಚು ಜನರಿಗೆ ಹಾನಿಯಾಗಿವೆ. ಗಾಯಗೊಂಡವರಲ್ಲಿ ಚಾಮರಾಜಪೇಟೆಯ‌ ಆಜಾದ್ 10 ವರ್ಷದ ಬಾಲಕ, 50 ವರ್ಷದ ರಮೇಶ್, ಮೈಸೂರು ರಸ್ತೆಯ 19 ವರ್ಷದ ಜಯಸೂರ್ಯ, 4 ವರ್ಷದ ಸುರಭಿ, ಸರ್ಜಾಪುರದ 49 ವರ್ಷದ ಸಂಗೀತ ವರ್ಮಾ, ಅವೆನ್ಯೂ ರಸ್ತೆಯ 22 ವರ್ಷದ ಹಬೀಬುಲ್ಲ ಸೇರಿದ್ದಾರೆ. ಈವರೆಗೆ ಒಟ್ಟು 11 ಜನರಿಗೆ ಪಟಾಕಿ ಸಿಡಿತದಿಂದ ಗಾಯಗಳಾಗಿವೆ.

ಪಟಾಕಿ ಸಿಡಿಸುವಾಗ ಸುರಕ್ಷಿತ ಅಂತರದಲ್ಲಿರಬೇಕು. ಉದ್ದದ ಕೋಲಿನಿಂದ ಪಟಾಕಿಗೆ ಬೆಂಕಿ ಹಚ್ಚಬೇಕು. ನೈಲಾನ್‌ ಬಟ್ಟೆಗಳನ್ನು ಧರಿಸಬಾರದು. ಪಕ್ಕದಲ್ಲಿ ನೀರು ಅಥವಾ ಮರಳಿನಂಥ ಅಗ್ನಿಶಾಮಕ ದ್ರವ್ಯಗಳನ್ನು ಇಟ್ಟುಕೊಂಡಿರಬೇಕು. ಪ್ರಥಮ ಚಿಕಿತ್ಸೆ ಸಾಮಗ್ರಿಗಳನ್ನು ಇಟ್ಟುಕೊಂಡಿರಬೇಕು ಎಂದು ವೈದ್ಯರು ದೀಪಾವಳಿ ಸಂಭ್ರಮದಲ್ಲಿರುವವರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | ವಿಸ್ತಾರ TOP 10 NEWS | ಬ್ರಿಟನ್‌ಗೆ ʼರಿಷಿʼ ಪ್ರಧಾನಿಯಿಂದ ಸೈನಿಕರೊಂದಿಗೆ ಮೋದಿ ದೀಪಾವಳಿವರೆಗಿನ ಪ್ರಮುಖ ಸುದ್ದಿಗಳಿವು

Exit mobile version