ಬೆಂಗಳೂರು: ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಸಾವನ್ನಪ್ಪಿದ ದುರಂತದ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದೆ. ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ 4 ವರ್ಷದ ಮಗು ಬಲಿಯಾಗಿದ್ದು, ಇದು ವೈದ್ಯರ ನಿರ್ಲಕ್ಷ್ಯದಿಂದ ಆಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಜಾಲಹಳ್ಳಿಯ ಡೇವಿಡ್ ಎಂಬವರು ತಮ್ಮ ನಾಲ್ಕು ವರ್ಷದ ಮಗು ಡಾರ್ವಿನ್ ಅನ್ನು ಭಾನುವಾರ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆರೋಗ್ಯವಾಗಿದ್ದ ಮಗುವಿಗೆ ಟ್ರೈನಿ ಡಾಕ್ಟರ್‌ಗಳು ಚಿಕಿತ್ಸೆ ನೀಡಿದ್ದಾರೆ. ಬೆನ್ನುಮೂಳೆಯಲ್ಲಿದ್ದ ನೀರು ತೆಗೆಯಲು ಪೋಷಕರ ಅನುಮತಿ ಪಡೆಯದೇ ಚಿಕಿತ್ಸೆ ನೀಡಿದ್ದಾರೆ. ಸತ್ತಿರುವ ಮಗುವನ್ನು ಆಂಬ್ಯುಲೆನ್ಸ್‌ಗೆ ಶಿಫ್ಟ್ ಮಾಡಿ, ಮತ್ತೆ ಆಸ್ಪತ್ರೆಗೆ ಕರೆ ತಂದು ಜೀವ ಹೋಗಿದೆ ಎಂದು ಪೋಷಕರಿಗೆ ತಿಳಿಸಿದ್ದಾರೆ ಎಂದು ಮಗುವಿನ ಕುಟುಂಬಸ್ಥರು ದೂರಿದ್ದಾರೆ.
ರಾತ್ರಿ ವೇಳೆ ಈ ಕುರಿತು ಆಸ್ಪತ್ರೆಯ ಮುಂದೆ ಹೈಡ್ರಾಮಾ ನಡೆದಿದ್ದು, ಥಳಿತದ ಭಯದಿಂದ ವೈದ್ಯರು ಆಸ್ಪತ್ರೆಯ ಒಳಗೆ ಗೇಟ್ ಲಾಕ್ ಮಾಡಿಕೊಂಡು ಕುಳಿತಿದ್ದರು.
ಇದನ್ನೂ ಓದಿ | Negligence | ಅವಳಿ ಮಕ್ಕಳ ಸಹಿತ ತಾಯಿ ಸಾವು; ತಾಯಿ ಕಾರ್ಡ್ ಇಲ್ಲವೆಂದು ವಾಪಸ್ ಕಳಿಸಿದ ಸರ್ಕಾರಿ ಆಸ್ಪತ್ರೆ