Site icon Vistara News

ಹೋಮಿಯೋಪತಿ ರಾಷ್ಟ್ರೀಯ ಸಮಾವೇಶದಲ್ಲಿ ಡಾ.ಬಿ.ಟಿ. ರುದ್ರೇಶ್‌ ಉಪನ್ಯಾಸ

dr b t rudresh at National Homeopathic Conference

#image_title

ಡೆಹ್ರಾಡೂನ್‌: ಇಲ್ಲಿಯ ಡೂನ್‌ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೋಮಿಯೋಪತಿ ಸಮಾವೇಶ ʻಹೋಮಿಯೋಕಾನ್‌-2023ʼ ನಲ್ಲಿ ಬೆಂಗಳೂರಿನ ಖ್ಯಾತ ಹೊಯಿಯೋಪತಿ ವೈದ್ಯ ಡಾ. ಬಿ.ಟಿ. ರುದ್ರೇಶ್‌ ವಿಶೇಷ ಉಪನ್ಯಾಸ ನೀಡಿದ್ದಾರೆ.

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಈ ಸಮಾವೇಶವನ್ನು ಉದ್ಘಾಟಿಸಿದರಲ್ಲದೆ, ಹೋಮಿಯೋಪತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈದ್ಯರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿರುವ ಡಾ. ಬಿ.ಟಿ. ರುದ್ರೇಶ್‌ ಅವರನ್ನೂ ಗೌರವಿಸಲಾಗಿದೆ.

ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಹೋಮಿಯೋಪತಿ ವೈದ್ಯರು, ತಜ್ಞರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ, ಹೋಮಿಯೋಪತಿಯು ಅತ್ಯಂತ ಪರಿಣಾಮಕಾರಿಯಾದ ಮತ್ತು ಆರ್ಥಿಕವಾಗಿ ಹೊರೆಯಾಗದ ಚಿಕಿತ್ಸಾ ಪದ್ಧತಿಯಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ಆಸಕ್ತಿಯಿಂದಾಗಿ ಭಾರತೀಯ ವೈದ್ಯ ಪದ್ಧತಿಗಳಿಗೆ ಈಗ ಜಾಗತಿಕ ಮನ್ನಣೆ ದೊರೆಯುತ್ತಿದೆ ಎಂದು ಹೇಳಿದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ, ವಿಶ್ವ ಆರೋಗ್ಯ ಸಂಸ್ಥೆಯು ಹೋಮಿಯೋಪತಿಯನ್ನು ಅತಿ ಹೆಚ್ಚು ಜನರು ಬಳಸುವ ಪ್ರಪಂಚದ ಎರಡನೇ ವೈದ್ಯಪದ್ಧತಿ ಎಂದು ಗುರುತಿಸಿದೆ ಎಂದಿದ್ದಾರೆ.

ಸಮಾವೇಶದಲ್ಲಿ ಮಾತನಾಡುತ್ತಿರುವ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ

ಈ ಸಮಾವೇಶದಲ್ಲಿ ಕೇಂದ್ರ ಸರ್ಕಾರ ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಉಪಸ್ಥಿತರಿದ್ದರು.

ಇದನ್ನೂ ಓದಿ : Award Ceremony: ನಾಡೋಜ ಡಾ. ಬಿ.ಟಿ. ರುದ್ರೇಶ್‌ಗೆ ಲೆಜೆಂಡ್ಸ್ ಆಫ್ ಹೋಮಿಯೊಪಥಿಕ್ ಬ್ರಿಲಿಯನ್ಸ್ ಅವಾರ್ಡ್

Exit mobile version