ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ (ಆರ್‌ಎಸ್‌ಎಸ್‌ಟಿ) ಶೈಕ್ಷಣಿಕ ಕಾರ್ಯಾಚರಣೆಯನ್ನು ಸಾಮ್ರಾಜ್ಯವಾಗಿ ವಿಸ್ತರಿಸಿದ ಹಿರಿಯ ಶಿಕ್ಷಣ ತಜ್ಞ, ಆರ್‌ವಿ ವಿಶ್ವವಿದ್ಯಾಲಯದ (RV University) ಕುಲಪತಿ ಎಂ.ಕೆ. ಪಾಂಡುರಂಗ ಶೆಟ್ಟಿ (90) (Dr MK Panduranga Shetty) ಅವರು ಶನಿವಾರ ನಿಧನರಾದರು.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಶೆಟ್ಟಿ ಅವರು ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಶನಿವಾರ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
ಶೆಟ್ಟಿ ಅವರು ರಾಷ್ಟ್ರೀಯ ವಿದ್ಯಾಲಯವನ್ನು ನಡೆಸುತ್ತಿರುವ ಆರ್‌ಎಸ್‌ಎಸ್‌ಟಿಯ ಅಧ್ಯಕ್ಷರಾಗಿದ್ದರು. 1972 ಮತ್ತು 2022ರ ನಡುವೆ, ಶೆಟ್ಟಿ ಆರ್‌ಎಸ್‌ಎಸ್‌ಟಿಯ ಅಧ್ಯಕ್ಷರಾಗಿದ್ದರು. ಅದು ಈಗ 1,500ಕ್ಕೂ ಹೆಚ್ಚು ಅಧ್ಯಾಪಕ ಸದಸ್ಯರನ್ನು ಹೊಂದಿರುವ 24 ಸಂಸ್ಥೆಗಳನ್ನು ಹೊಂದಿದೆ ಮತ್ತು ಆರ್‌ವಿ ಕಾಲೇಜ್ ಆಫ್ ಎಂಜಿನಿಯರಿಂಗ್, ಆರ್‌ವಿ ಡೆಂಟಲ್ ಕಾಲೇಜು, SSMRV ಕಾಲೇಜು, NMKRV ಕಾಲೇಜು ಮತ್ತು ಮುಂತಾದವುಗಳಲ್ಲಿ 20,000 ವಿದ್ಯಾರ್ಥಿಗಳನ್ನು ಹೊಂದಿದೆ.
ಇದನ್ನೂ ಓದಿ | High Court : ಕರ್ನಾಟಕ ಹೈಕೋರ್ಟ್‌ಗೆ ಇಬ್ಬರು ನ್ಯಾಯಮೂರ್ತಿಗಳ ನೇಮಕ
ಸೆಂಟ್ರಲ್ ಕಾಲೇಜಿನ ಪದವೀಧರರಾದ ಶೆಟ್ಟಿ ಅವರು ತಮ್ಮ ತಂದೆ ಮೇದಾ ಕಸ್ತೂರಿರಂಗ ಎಸ್. ಅವರು ಸ್ಥಾಪಿಸಿದ ಕೃಷ್ಣಾ ಫ್ಲೋರ್ ಮಿಲ್‌ನಲ್ಲಿ ವಿದೇಶದಿಂದ ಆಮದು ಮಾಡಿಕೊಂಡಿದ್ದ ಹಿಟ್ಟಿನ ಗಿರಣಿ ಯಂತ್ರಗಳನ್ನು ನಿರ್ವಹಿಸುವ ಬಗ್ಗೆ ತರಬೇತಿ ಪಡೆಯಲು ಸ್ವಿಟ್ಜರ್ಲೆಂಡ್‌ಗೆ ಭೇಟಿ ನೀಡಿದ ನಂತರ ಕೈಗಾರಿಕೋದ್ಯಮಿಯಾಗಿಯೂ ಹೆಸರು ಮಾಡಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶೆಟ್ಟಿ ಅವರು ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಮತ್ತು ಆಲ್ ಇಂಡಿಯಾ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.