Site icon Vistara News

Drunk and Drive | ಕುಡಿದು ಕಾರು ಚಾಲನೆ; ಅಪಘಾತ ಮಾಡಿ ಇನ್‌ಸ್ಪೆಕ್ಟರ್‌, ಪತ್ನಿ ಕಿರಿಕ್

Drink and Drive

ಬೆಂಗಳೂರು: ಪೊಲೀಸ್‌ ಇನ್‌ಸ್ಪೆಕ್ಟರ್‌ ಪತ್ನಿ ಮದ್ಯ ಸೇವನೆ ಮಾಡಿ ಒನ್‌ ವೇನಲ್ಲಿ ಕಾರು ಚಲಾಯಿಸಿ(Drunk and Drive) ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಲ್ಲದೆ ತಾವು ಅಪಘಾತ ಮಾಡಿಲ್ಲ ಎಂದು ರಂಪಾಟ ಮಾಡಿದ್ದಾರೆ.

ಚಾಮರಾಜಪೇಟೆ ಕ್ವಾರ್ಟರ್ಸ್‌ನಿಂದ ಸಿಎಆರ್ ಇನ್‌ಸ್ಪೆಕ್ಟರ್ ಸಂಜೀವ್ ಹಾಗೂ ಪತ್ನಿ ಉಷಾ ಶನಿವಾರ ರಾತ್ರಿ ಜಾಲಿ ರೈಡ್‌ಗೆ ಬಂದಿದ್ದರು. ಈ ವೇಳೆ ನಾನೇ ಡ್ರೈವ್ ಮಾಡುತ್ತೇನೆ ಎಂದು ಉಷಾ ಕಾರು ಚಲಾಯಿಸಿ, ಚಾಮರಾಜಪೇಟೆ 6ನೇ ಮುಖ್ಯ ರಸ್ತೆ ಬಳಿ ಬೇರೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ ಎರಡು ಕಾರುಗಳಿಗೆ ಡ್ಯಾಮೇಜ್‌ ಆಗಿದೆ. ಈ ವೇಳೆ ಪೊಲೀಸ್‌ ದಂಪತಿ ಹಾಗೂ ಯುವಕನ ನಡುವೆ ಜಗಳವಾಗಿದ್ದು, ಸ್ಥಳೀಯರು ಪೊಲೀಸ್‌ ಇನ್‌ಸ್ಪೆಕ್ಟರ್‌ ಹಾಗೂ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಉಷಾ ಮತ್ತು ಸಂಜೀವ್ ಚಾಮರಾಜಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದೇ ರೀತಿ ಯುವಕ ಕೂಡ, ಪೊಲೀಸ್‌ ದಂಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್‌ ಹಾಗೂ ಪತ್ನಿಯ ವೈದ್ಯಕೀಯ ಪರೀಕ್ಷೆ ಮಾಡಿದಾಗ ಮದ್ಯಸೇವನೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಾಟನ್ ಪೇಟೆ ಸಂಚಾರಿ ಠಾಣೆಯಲ್ಲಿ ದಂಪತಿ ವಿರುದ್ಧ ಡ್ರಂಕ್ ಆ್ಯಂಡ್‌ ಡ್ರೈವ್ ಕೇಸ್ ದಾಖಲಾಗಿದೆ.

ಇದನ್ನೂ ಓದಿ | ಗಣೇಶ ವಿಸರ್ಜನೆಗೂ ಮುನ್ನ ಈ ಮಾಹಿತಿ ತಿಳಿದುಕೊಳ್ಳಿ: ವಿವಿಧೆಡೆ ಸಂಚಾರ ನಿರ್ಬಂಧ

Exit mobile version