Site icon Vistara News

Drought Taluk : 11 ಜಿಲ್ಲೆಗಳು ಸಂಪೂರ್ಣ ಬರಪೀಡಿತ; 161 ತಾಲೂಕುಗಳ ಪಟ್ಟಿ ಇಲ್ಲಿದೆ

Karnataka drought and CM Siddaramaiah

ಬೆಂಗಳೂರು: ರಾಜ್ಯದ 161 ತಾಲೂಕುಗಳನ್ನು ಬರಪೀಡಿತ (Drought Taluk) ತಾಲೂಕುಗಳು ಎಂದು ಘೋಷಿಸಿ ರಾಜ್ಯ ಸರ್ಕಾರ (Karnataka State Government) ಆದೇಶ ಹೊರಡಿಸಿದೆ. ಇದರಲ್ಲಿ ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ, ಕೊಪ್ಪಳ, ಶಿವಮೊಗ್ಗ, ಕಲಬುರಗಿ, ವಿಜಯಪುರ, ಧಾರವಾಡ, ವಿಜಯನಗರ ಜಿಲ್ಲೆಗಳ ಸಂಪೂರ್ಣ ತಾಲೂಕುಗಳು ಬರ‌ ಎಂದು ಘೋಷಿಸಲ್ಪಟ್ಟಿದೆ.

ಇನ್ನು ಬೆಳಗಾವಿಯ 14 ತಾಲೂಕುಗಳ ಪೈಕಿ 13 ತಾಲೂಕುಗಳು, ತುಮಕೂರು ಜಿಲ್ಲೆಯ 10 ತಾಲೂಕಲ್ಲಿ 9 ತಾಲೂಕುಗಳು, ಬಾಗಲಕೋಟೆ ಜಿಲ್ಲೆಯ 10 ತಾಲೂಕುಗಳಲ್ಲಿ 9 ತಾಲೂಕುಗಳು, ಗದಗ ಜಿಲ್ಲೆಯ 6 ತಾಲೂಕುಗಳಲ್ಲಿ 5 ತಾಲೂಕುಗಳು ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸಿದೆ. ಇದು ಬರಕ್ಕೆ ಅತಿ ಹೆಚ್ಚು ಬಾಧಿತವಾದ ಪ್ರದೇಶಗಳಾಗಿವೆ.

ಜಿಲ್ಲಾಧಿಕಾರಿಗಳಿಂದ ಬೆಳೆಹಾನಿ ಸಮೀಕ್ಷೆ (Ground Truthing) ಮಾಡಿಸಲಾಗಿದ್ದು, ಅವರ ವರದಿಗಳನ್ನು ಪಡೆದುಕೊಂಡು ಅವುಗಳ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ. ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳಲ್ಲಿಯೂ ಸಮೀಪಕ್ಷೆ ನಡೆಸಲಾಗಿತ್ತು. ಈ ಪೈಕಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡು ಬಂದಿದೆ. ಇವುಗಳಲ್ಲಿ 161 ತಾಲೂಕುಗಳನ್ನು ಸಂಪೂರ್ಣ ಬರಪೀಡಿತ (Drought hit taluk), 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕು (Moderately drought prone taluk) ಎಂದು ಘೋಷಣೆ ಮಾಡಲಾಗಿದೆ.

ಜೂನ್‌ ತಿಂಗಳಲ್ಲಿ ಶೇ.56 ಮಳೆ ಕೊರತೆ (Lack of rain) ಉಂಟಾಗಿತ್ತು. ಜುಲೈಯಲ್ಲಿ ಶೇ.29ರಷ್ಟು ಹೆಚ್ಚು ಮಳೆಯಾಗಿದ್ದರೂ ಅದು ಒಂದು ವಾರದಲ್ಲಿ ಕೇಂದ್ರೀಕೃತಗೊಂಡಿದೆ. ಆಗಸ್ಟ್‌ನಲ್ಲಿ ವಾಡಿಕೆಗಿಂತ ಶೇ.73ರಷ್ಟು ಮಳೆ ಕೊರತೆಯಾಗಿದೆ. ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Karnataka Road : ಇನ್ನು ಗುತ್ತಿಗೆದಾರರಿಂದಲೇ 5 ವರ್ಷ ರಸ್ತೆ ನಿರ್ವಹಣೆ: ಸತೀಶ್‌ ಜಾರಕಿಹೊಳಿ

ಜಿಲ್ಲಾಧಿಕಾರಿಗಳು ಬರ ನಿರ್ವಹಣೆಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಕಾಲಕಾಲಕ್ಕೆ SDRF/NDRF ನಿಯಮಗಳನ್ವಯ ಮಾರ್ಗಸೂಚಿ ನೀಡುವುದಾಗಿ ತಿಳಿಸಿದೆ. ಈ ಆದೇಶವು ಮುಂದಿನ 6 ತಿಂಗಳ ಅವಧಿಗೆ ಇಲ್ಲವೇ ಇನ್ನೊಂದು ಆದೇಶದವರೆಗೆ ಜಾರಿಯಲ್ಲಿ ಇರಲಿದೆ ಎಂದು ಉಲ್ಲೇಖಿಸಲಾಗಿದೆ.

ತೀವ್ರ ಬರಪೀಡಿತ 161 ತಾಲೂಕುಗಳ ಪಟ್ಟಿ ಇಲ್ಲಿದೆ

ದಾವಣಗೆರೆಯಿಂದ ರಾಯಚೂರು ಜಿಲ್ಲೆವರೆಗಿನ ಪಟ್ಟಿ

ಕಲಬುರಗಿಯಿಂದ ವಿಜಯಪುರ ಜಿಲ್ಲೆವರೆಗಿನ ಪಟ್ಟಿ

ವಿಜಯಪುರದಿಂದ ಕೊಡಗು ಜಿಲ್ಲೆವರೆಗಿನ ಪಟ್ಟಿ

ಉಡುಪಿಯಿಂದ ವಿಜಯನಗರ ವರೆಗಿನ ಪಟ್ಟಿ

ಸಾಧಾರಣ ಬರಪೀಡಿತ ತಾಲೂಕುಗಳ ಪಟ್ಟಿ ಇಲ್ಲಿದೆ

Exit mobile version