ಬೆಂಗಳೂರು: ʻಉಡ್ತಾ ಪಂಜಾಬ್ ರೀತಿ ರಾಜಧಾನಿ ಬೆಂಗಳೂರು ʻಉಡ್ತಾ ಬೆಂಗಳೂರುʼ ಆಗುತ್ತಿದ್ಯಾ? ಇಂತಹದೊಂದು ಪ್ರಶ್ನೆ ಸಹಜವಾಗಿಯೇ ಕಾಡುತ್ತೆ. ಮಾದಕ ವಸ್ತುಗಳ ವಿರುದ್ಧ ಪೊಲೀಸರು ಸಮರ ಮುಂದುವರಿಸಿದ್ದು, ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ (Drugs Case) ನಡೆಸಿದ್ದಾರೆ.
ನೈಜೀರಿಯನ್ ಪ್ರಜೆ ಬೆಂಜಮಿನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರೇ ದಂಗಾಗಿದ್ದರು. ಯಾಕೆಂದರೆ ಮನೆಯೊಳಗೆ ಕಾಲಿಟ್ಟ ಪೊಲೀಸರಿಗೆ ಬರೋಬ್ಬರಿ 10 ಕೋಟಿ ಮೌಲ್ಯದ ಸಿಂಥಟಿಕ್ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ.
ನೈಜೀರಿಯನ್ ಪ್ರಜೆಗಳೇ ಹೆಚ್ಚಾಗಿರುವ ರಾಮಮೂರ್ತಿ ನಗರದಲ್ಲಿ ಡ್ರಗ್ಸ್ ದಂಧೆಯೇ ನಡೆಯುತ್ತಿತ್ತು. ರಾಮಮೂರ್ತಿನಗರದಲ್ಲಿ ವಾಸವಿದ್ದ ನೈಜೀರಿಯನ್ ಪ್ರಜೆ ಬೆಂಜಮೀನ್ ಎಂಬಾತ ವೀಸಾ ಅವಧಿ ಮುಗಿದರೂ ಹಲವು ವರ್ಷಗಳಿಂದ ಬೆಂಗಳೂರಲ್ಲೇ ನೆಲಿಸಿದ್ದಾನೆ. ನಟೋರಿಯಸ್ ಡ್ರಗ್ ಪೆಡ್ಲರ್ ಹಾಗೂ ಡ್ರಗ್ ಮೇಕರ್ ಆಗಿರುವ ಈತನನ್ನು ಕನ್ದ್ಯೂಮರ್ ಟು ಪೆಡ್ಲರ್ ಮೆಥೆಡ್ನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Hasanamba Temple : ಹಾಸನಾಂಬೆ ದರ್ಶನದ ವೇಳೆ ಕರೆಂಟ್ ಶಾಕ್! ದಿಕ್ಕಾಪಾಲಾಗಿ ಓಡಿದ ಭಕ್ತರು!
ಡ್ರಗ್ಸ್ ಸೇವನೆ ಮಾಡುತ್ತಿದ್ದ ವ್ಯಕ್ತಿ ನೀಡಿದ ಹೇಳಿಕೆ ಮೇಲೆ ತನಿಖೆ ಶುರು ಮಾಡಿದ ಸಿಸಿಬಿ ಬೃಹತ್ ಡ್ರಗ್ಸ್ ಜಾಲವನ್ನೇ ಪತ್ತೆ ಹಚ್ಚಿದೆ. ಬೆಂಜಮಿನ್ ಮನೆಯಲ್ಲಿ 5 ಕೆ.ಜಿ ಎಂಡಿಎಂಎ ಸಿಕ್ಕಿದೆ. ಎಂಡಿಎಂಎಯನ್ನು ತಯಾರಿಸಿಲು ಇಟ್ಟುಕೊಂಡಿದ್ದ 12 ಕೆ.ಜಿ ಸೋಡಿಯಂ ಹೈಡ್ರಾಕ್ಸೈಡ್, ಹೈಡ್ರೋಕ್ಲೋರಿಕ್ ಆ್ಯಸಿಡ್ ಹಾಗೂ ಅಸಿಟೋನ್ ಎಂಬ ರಾಸಾಯನಿಕವನ್ನು ವಶಕ್ಕೆ ಪಡೆಯಲಾಗಿದೆ.
ಇವೆಲ್ಲಾ ರಾಸಾಯನಿಕವನ್ನು ಕುಕ್ಕರ್ನಲ್ಲಿಟ್ಟು ಅದರ ಹಬೆಯಿಂದ ಎಂಡಿಎಂಎ ಕ್ರಿಷ್ಟಲ್ನ್ನು ತಯಾರು ಮಾಡುತ್ತಿದ್ದ. ಆರೋಪಿ ಸ್ಥಳೀಯರಿಗೆ ಡ್ರಗ್ಗಳನ್ನು ಮಾರಾಟ ಮಾಡುತ್ತಿರಲಿಲ್ಲ. ಬದಲಿಗೆ ನೈಜೀರಿಯನ್, ಆಫ್ರಿಕನ್ ಪ್ರಜೆಗಳಿಗೆ ಮಾತ್ರ ಮಾರಾಟ ಮಾಡುತ್ತಿದ್ದ. ಇನ್ನು ಮನೆಯಲ್ಲಿಯೇ ತೂಕದ ಯಂತ್ರ ಇಟ್ಟುಕೊಂಡು ತನ್ನ ಪರ್ಮನೆಂಟ್ ಕಸ್ಟಮರ್ಗೆ ಮಾತ್ರ ಕಡಿಮೆ ಬೆಲೆಗೆ ನೀಡುತ್ತಿದ್ದ.
ಪ್ಯೂರ್ ಎಂಡಿಎಂಎ ಕ್ರಿಷ್ಟಲ್ನ್ನು ಪಡೆದರೆ ಅದರಿಂದ ಮತ್ತಷ್ಟು ಡ್ರಗ್ ಅನ್ನು ತಯಾರು ಮಾಡಬಹುದು. ಹೀಗಾಗಿ ಇಂತಹ ಪ್ಯೂರ್ ಎಂಡಿಎಂಎ ಪತ್ತೆ ಹಚ್ಚಿದ್ದರಿಂದ ಮತ್ತಷ್ಟು ಡ್ರಗ್ ತಯಾರಾಗುವುದನ್ನು ಸಿಸಿಬಿ ಅಧಿಕಾರಿಗಳು ತಡೆದಿದ್ದಾರೆ. ಸದ್ಯ ಈ ಸಂಬಂಧ ಸಿಸಿಬಿ ಅಧಿಕಾರಿಗಳು ಆರೋಪಿಯನ್ನ ಮತ್ತಷ್ಟು ವಿಚಾರಣೆಗೊಳಪಡಿಸಲಾಗಿದೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಪ್ರತಿಕ್ರಿಯಿಸಿದ್ದಾರೆ. ಸಿಸಿಬಿ ಅಧಿಕಾರಿಗಳು ಡ್ರಗ್ಸ್ ವಿರುದ್ಧ ಸಮರ ಮುಂದುವರೆಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹತ್ತು ಕೋಟಿ ಮೌಲ್ಯದ ಎಂಡಿಎಂಎಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿಚಾರಣೆಗಾಗಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ