ಬೆಂಗಳೂರು/ಚಿಕ್ಕಬಳ್ಳಾಪುರ: ಕರೆಂಟ್ ಶಾಕ್ (Electric shock) ಹೊಡೆದು ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬೇನ ಅಗ್ರಹಾರದಲ್ಲಿ ನಡೆದಿದೆ. ಬಿಪುಲ್ ಕುಮಾರ್ (35) ಮೃತ ದುರ್ದೈವಿ.
ಟೈಲ್ಸ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಬಿಪುಲ್, ಫ್ಯಾನ್ ಆನ್ ಮಾಡಲು ಹೋಗಿದ್ದಾನೆ. ಈ ವೇಳೆ ಕರೆಂಟ್ ಶಾಕ್ ಬಡಿದಿದ್ದು ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಬಿಪುಲ್ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Road Accident : ಮುಖಾಮುಖಿಯಾಗಿ ಬಂದ ಕಾರುಗಳು ಪೀಸ್ ಪೀಸ್; ಚಾಲಕ ಸ್ಪಾಟ್ ಡೆತ್
ರಿಪೇರಿ ಮಾಡುವಾಗಲೇ ಪ್ರವಹಿಸಿದ ವಿದ್ಯುತ್; ಲೈನ್‌ಮ್ಯಾನ್ ಸಾವು
ಚಿಕ್ಕಬಳ್ಳಾಪುರದಲ್ಲಿ ಕಾರು ಅಪಘಾತದಲ್ಲಿ ಮೂವರು ಬೆಸ್ಕಾಂ ಸಿಬ್ಬಂದಿ ದುರ್ಮರಣ ಬೆನ್ನಲ್ಲೆ ಗೌರಿಬಿದನೂರಿನ ಬಿಸಲಹಳ್ಳಿ ಗ್ರಾಮದಲ್ಲಿ ಮೊತ್ತೊಬ್ಬ ಬೆಸ್ಕಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ದಾವಣಗೆರೆ ಮೂಲದ ಉದಯ್ ಕುಮಾರ್ (28 ) ಮೃತ ದುರ್ದೈವಿ.
ಟ್ರಾನ್ಸ್‌ಫಾರ್ಮರ್ ರಿಪೇರಿಗೆ ಹೋದ ಉದಯ್‌ಗೆ ವಿದ್ಯುತ್ ಪ್ರವಹಿಸಿದ್ದು ಕ್ಷಣ ಮಾತ್ರದಲ್ಲೇ ಒದ್ದಾಡಿ ಮೃತಪಟ್ಟಿದ್ದಾರೆ. ಇನ್ನೂ ಕಂಬದಲ್ಲೇ ಲೈನ್ ಮ್ಯಾನ್ ಮೃತದೇಹ ನೇತಾಡುತ್ತಿದ್ದು, ದುರ್ಘಟನೆ ಸಂಭವಿಸಿ ಒಂದು ಗಂಟೆ ಕಳೆದರೂ ಸ್ಥಳಕ್ಕೆ ಯಾವೊಬ್ಬ ಬೆಸ್ಕಾ ಅಧಿಕಾರಿಗಳು ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
ತಡವಾಗಿ ಬಂದ ಅಧಿಕಾರಿಗಳಿಗೆ ತರಾಟೆ
ವಿದ್ಯುತ್ ದುರಸ್ಥಿ ವೇಳೆ ಲೈನ್ ಮ್ಯಾನ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕ ತಡವಾಗಿ ಬಂದ ಬೆಸ್ಕಾ ಅಧಿಕಾರಿಗಳಿಗೆ ಸ್ಥಳೀಯರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ಬಳಿಕ ವಿದ್ಯುತ್ ಕಂಬದಲ್ಲಿದ್ದ ಮೃತದೇಹವನ್ನು ಕೆಳಗೆ ಇಳಿಸಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ