Site icon Vistara News

ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ, ಗಂಡನೇ ಕೊಲೆಗಾರ ಎಂದ ಕುಟುಂಬ

ಬೆಂಗಳೂರು: ಸ್ಯಾನಿಟೈಸರ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಮಠದ ಹಳ್ಳಿಯ ಶಾಜಿಯಾ ಬಾನು ಅವರದು ಅಸಹಜ ಸಾವಲ್ಲ, ಗಂಡನಿಂದ ನಡೆದಿರುವ ಕೊಲೆ ಎಂದು ಮಹಿಳೆಯ ಮನೆಯವರು ಆರೋಪಿಸಿದ್ದಾರೆ.

ಗಂಡನ ಇಮ್ರಾನ್‌ ಖಾನ್‌ನ ಕಿರುಕುಳದಿಂದ ನೊಂದಿದ್ದ ಶಾಜಿಯಾ ಬಾನು ಏಪ್ರಿಲ್‌ 20ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ಯಾನಿಟೈಸರ್‌ ಬೆಂಕಿಯಲ್ಲಿ ಧಗಧಗಿಸಿದ ಅವರನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಮಂಗಳವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಈ ನಡುವೆ, ಆಕೆಯ ಗಂಡ ಅವಳಿಗೆ ಕಿರುಕುಳ ನೀಡುತ್ತಿದ್ದ ಮತ್ತು ಮಗಳಿಗೆ ಸ್ಯಾನಿಟೈಸ್ ಸುರಿದು ಬೆಂಕಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಶಾಜಿಯಾ ಪೋಷಕರು ಆರೋಪ ಮಾಡಿದ್ದಾರೆ. ಇದು ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಠದಹಳ್ಳಿಯಲ್ಲಿ ನಡೆದಿರೋ ಘಟನೆ ಆಗಿದ್ದು ಶಾಜಿಯಾ ಪೋಷಕರು ಇಮ್ರಾನ್ ಖಾನ್ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಕೋರಿದ್ದಾರೆ.

 ಇದನ್ಆನೂ ಓದಿ: ತ್ಮಹತ್ಯೆಗೆ ಯತ್ನಿಸಿದ ಗರ್ಭಿಣಿ: ಹೊಟ್ಟೆಯಲ್ಲೆ ಮಗು ಸಾವು –

Exit mobile version