ಬೆಂಗಳೂರು: ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (Federation of Indian Industries) ಬೆಂಗಳೂರಿನಲ್ಲಿ ತನ್ನ ಪ್ರಾದೇಶಿಕ ಕಚೇರಿ ತೆರೆದಿದೆ. ಎಫ್‌ಐಐ, ದಕ್ಷಿಣ ಭಾರತದಲ್ಲೂ ಒಕ್ಕೂಟವನ್ನು ಮತ್ತಷ್ಟು ಬಳಗೊಳಿಸುತ್ತಿರುವುದು ಸಂತೋಷದ ವಿಚಾರ. ದೇಶದಲ್ಲಿ ನೂತನ ಉದ್ಯಮ ಹಾಗೂ ಉದ್ಯಮಿಗಳನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಬಹಳಷ್ಟು ಸಹಕಾರ ನೀಡುತ್ತಿದೆ. ಇದರಿಂದ ವೇಗವಾಗಿ ಹೊಸ ಹೊಸ ಉದ್ಯಮಗಳು ಹೆಚ್ಚುತ್ತಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ನಗರದಲ್ಲಿ ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ಪ್ರಾದೇಶಿಕ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಉದ್ಯೋಗ ಸೃಷ್ಟಿ ಹೆಚ್ಚಿದೆ. ಹೊಸ ಉದ್ಯಮಗಳಿಗೆ ನೇರವಾಗಿ ಸರ್ಕಾರದ ಸೌಲಭ್ಯಗಳು ಸಿಗುವಂತೆ ಕೆಲವೇ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು ಎಂದರು.
ಇದನ್ನೂ ಓದಿ | iPhone production | ಚೆನ್ನೈನಲ್ಲಿ ಫಾಕ್ಸ್‌ಕಾನ್‌ನಿಂದ 20 ಎಕರೆಯಲ್ಲಿ 60,000 ಕಾರ್ಮಿಕರಿಗೆ ಮೆಗಾ ಹಾಸ್ಟೆಲ್ ನಿರ್ಮಾಣ
ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ರಾಜ್ಯದಲ್ಲಿ ಹೊಸದಾಗಿ 14 ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲಾ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಅನುಕೂಲ ಆಗಲಿದೆ ಎಂದರು.
ಎಫ್‌ಐಐ-ಟಿಎಂಎ ಅಧ್ಯಕ್ಷ ಬಾಲಚಂದ್ರ ಸಿನ್ಹ್ ರಾವ್ ರಾಣೆ ಮತ್ತು ಐಕ್ಯಾಟ್ ಏರ್ ಆಂಬ್ಯುಲೆನ್ಸ್ ಸೇವೆಗಳ ಸಹ ಸಂಸ್ಥಾಪಕಿ, ನಿರ್ದೇಶಕಿ ಮತ್ತು ಐಕ್ಯಾಟ್ ಫೌಂಡೇಶನ್‌ನ ಅಧ್ಯಕ್ಷೆ ಡಾ.ಶಾಲಿನಿ ನಲ್ವಾಡ್, ಬ್ರಿಟಿಷ್ ಡೆಪ್ಯುಟಿ ಹೈಕಮಿಶನ್ ಉಪ ಮುಖ್ಯಸ್ಥ ಜೇಮ್ಸ್ ಗಡ್ಬರ್ ಇದ್ದರು.
ಡಾ.ಶಾಲಿನಿ ನಲ್ವಾಡ್ ಅವರು “ಎಫ್‌ಐಐ-ಟಿಎಂಎ” ಉಪಾಧ್ಯಕ್ಷರಾಗಿ ಮತ್ತು ಭಾರತದ ಪ್ರಾದೇಶಿಕ ಕಚೇರಿಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ ಮತ್ತು ಅವರೊಂದಿಗೆ ಪ್ರಾದೇಶಿಕ ನಿರ್ದೇಶಕರಾಗಿ ನಿರ್ಮಲಾ ಪರಬ್ ನೇಮಕಗೊಂಡಿದ್ದಾರೆ.
ಇದನ್ನೂ ಓದಿ | Energy Conservation Award | ಇಂಧನ ಸಂರಕ್ಷಣೆಯಲ್ಲಿ ಕರ್ನಾಟಕಕ್ಕೆ ಇಂಧನ ಸಚಿವಾಲಯದ ರಾಷ್ಟ್ರೀಯ ಪ್ರಶಸ್ತಿ