ದೋಹಾ(ಕತಾರ್): ಮಹಾರಾಷ್ಟ್ರ ಮಂಡಲ ಕತಾರ್ (ಎಂಎಂಕ್ಯೂ), ಭಾರತೀಯ ಸಾಂಸ್ಕೃತಿಕ ಕೇಂದ್ರದ(ಐಸಿಸಿ) ಸಹಯೋಗದಲ್ಲಿ ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ(ಫಿಫಾ) ಆಹ್ವಾನಿತ ಗಣ್ಯರಾದ ಯುವರಾಜ್ ಮಲೋಜಿರಾಜೆ ಶಾಹು ಛತ್ರಪತಿ ಮತ್ತು ಶ್ರೀಮತಿ ಮಧುರಿಮಾ ರಾಜೇ ಅವರನ್ನು ನವೆಂಬರ್ 23ರಂದು ದೋಹಾ ನಗರದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ (Felicitation Ceremony) ಸನ್ಮಾನಿಸಲಾಯಿತು.
ಮಲೋಜಿರಾಜೆ ಶಾಹು ಛತ್ರಪತಿ ಅವರು ಕೊಲ್ಲಾಪುರದ ರಾಜಮನೆತನದ ಶಾಹುವಿನ ವಂಶಸ್ಥರು, ರಾಜಕಾರಣಿ, ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಸದಸ್ಯರು ಹಾಗೂ ಅಖಿಲ ಭಾರತ ಶ್ರೀ ಶಿವಾಜಿ ಸ್ಮಾರಕ ಸಂಘದ ಕಾರ್ಯದರ್ಶಿಯಾಗಿಯೂ ಆಗಿದ್ದಾರೆ. ಇವರನ್ನು ಮಹಾರಾಷ್ಟ್ರ ಮಂಡಲ ಕತಾರ್ ಅಧ್ಯಕ್ಷ ಸಂಜಯ್ ಪಾಟೀಲ್, 2021-2022 ಆಡಳಿತ ಮಂಡಳಿ ಸದಸ್ಯರು ಗೌರವಿಸಿದರು.
ಇದನ್ನೂ ಓದಿ | ಬೀಜಿಂಗ್ ತಲುಪಬಲ್ಲ ಸಾಮರ್ಥ್ಯದ ಅಗ್ನಿ-V ಕ್ಷಿಪಣಿ ಉಡಾಯಿಸಿದ ಭಾರತ | ಗಡಿ ತಗಾದೆ ತೆಗೆದಿದ್ದಕ್ಕೆ ಎಚ್ಚರಿಕೆ?
ಅಧ್ಯಕ್ಷೀಯ ಭಾಷಣ ಮತ್ತು ಮಹಾರಾಷ್ಟ್ರದ ಸಂಪ್ರದಾಯ ಮತ್ತು ಸಂಸ್ಕೃತಿಯಂತೆ ಗಣ್ಯರನ್ನು ಸನ್ಮಾನಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌ನ ಕಾರ್ಯಕಾರಿ ಸಮಿತಿಯ ಅನುಭವವನ್ನು ಮಲೋಜಿರಾಜೆ ಶಾಹು ಛತ್ರಪತಿ ಅವರು ಸಭೆಗೆ ತಿಳಿಸುವ ಮೂಲಕ ಸದಸ್ಯರನ್ನು ಪ್ರೇರೇಪಿಸಿದರು.
ಸಮಿತಿಯು ಗಣ್ಯರ ಸಮ್ಮುಖದಲ್ಲಿ ಸದಸ್ಯರ ಪ್ರತಿಭೆಯನ್ನು ಎತ್ತಿ ಹಿಡಿಯಲು ವಿವಿಧ ಗಾಯನ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿತ್ತು. ಕಾರ್ಯಕ್ರಮವನ್ನು ಎಂಎಂಕ್ಯೂ ಕಲಾವಿದೆ ಮಾನಸಿ ವಾಶಿಕರ್, ರೇವಾ ವಾಶಿಕರ್ ಮತ್ತು ಶ್ರೀಯಾ ಪಾಟೀಲ್ ಅವರ ಗಾಯನ ಕಾರ್ಯಕ್ರಮಕ್ಕೆ ಮೆರುವಗು ನೀಡಿತು. ಕಲಾವಿದೆ ಪ್ರಾಂಜಲಿ ಮುಲಿಕ್ ಅವರು ಫಿಫಾ ವಿಶ್ವಕಪ್‌ನಲ್ಲಿ ಪೇಪರ್‌ಗಳ ಚಲಿಸುವ ಶಿಲ್ಪಗಳ ಕಲಾ ಪ್ರಕಾರವನ್ನು ಪ್ರದರ್ಶಿಸಿದರು. ಶ್ವೇತಾ ಮತ್ತು ಅವರ ತಂಡವು ಯೋಗ ಸಂಗೀತ ರೂಪವನ್ನು ಪ್ರದರ್ಶಿಸಿತು. ಮಹಾರಾಷ್ಟ್ರ ಮಂಡಲ ಕತಾರ್‌ನ ಪ್ರಧಾನ ಕಾರ್ಯದರ್ಶಿ ಸುಶಾಂತ್ ಸಾವರ್ಡೇಕರ್ ಅವರು ಎಲ್ಲಾ ಗಣ್ಯರಿಗೆ ಮತ್ತು ಎಂಎಂಕ್ಯೂ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಭಾರತೀಯ ಸಾಂಸ್ಕೃತಿಕ ಕೇಂದ್ರ ಉಪಾಧ್ಯಕ್ಷರ ಸುಬ್ರಹ್ಮಣ್ಯ ಹೆಬ್ಬಾಗಿಲು, ಐಸಿಬಿಎಫ್ ಅಧ್ಯಕ್ಷರ ವಿನೋದ್ ನಾಯರ್, ಐಸಿಸಿ ಸಾಂಸ್ಕೃತಿಕ ಮುಖ್ಯಸ್ಥೆ ಶ್ವೇತಾ ಕೋಷ್ಠಿ, ಎಂಎಂಕ್ಯೂ ಮಾಜಿ ಅಧ್ಯಕ್ಷ, ಎಂಎಂಕ್ಯೂ ಸಂಸ್ಥಾಪಕ ಸದಸ್ಯ, ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷ ಮಹೇಶ್ ಗೌಡ, ಸಂಘದ ಇತರ ಮುಖ್ಯಸ್ಥರು ಮತ್ತು ಎಂಎಂಕ್ಯೂ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.