ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಗೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹೆಸರಿಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒಕ್ಕಲಿಗರ ಯುವ ಬ್ರಿಗೇಡ್ ಹಾಗೂ ಒಕ್ಕಲಿಗರ ಅನಿವಾಸಿ ಭಾರತೀಯ ಬ್ರಿಗೇಡ್ ಮನವಿ ಮಾಡಿದೆ.
ಮಹಾರಾಷ್ಟ್ರ ಮಂಡಲ ಕತಾರ್ ಅಧ್ಯಕ್ಷ ಸಂಜಯ್ ಪಾಟೀಲ್, 2021-2022 ಆಡಳಿತ ಮಂಡಳಿ ಸದಸ್ಯರಿಂದ ಯುವರಾಜ್ ಮಲೋಜಿರಾಜೆ ಶಾಹು ಛತ್ರಪತಿ ಮತ್ತು ಶ್ರೀಮತಿ ಮಧುರಿಮಾ ರಾಜೇ ಅವರನ್ನು ಕತಾರ್ನ ದೋಹಾ ನಗರದಲ್ಲಿ ಸನ್ಮಾನಿಸಲಾಗಿದೆ.
ಬ್ಯಾಂಕಾಕ್ನಲ್ಲಿ ಕನ್ನಡದ ಸ್ವರ ಕೇಳಿದರೆ ಎಷ್ಟು ಖುಷಿಯಾಗಲ್ಲ ಹೇಳಿ.. ವಿಸ್ತಾರ ನ್ಯೂಸ್ನ ಅಂಕಣಕಾರರಾದ ನಾರಾಯಣ ಯಾಜಿ ಅವರಿಗೂ ಹೀಗೇ ಆಗಿದೆ. ಆ ಧ್ವನಿಯ ಬೆನ್ನು ಹತ್ತಿ ಹೋದ ಅವರಿಗೆ ಅಚ್ಚರಿಗಳ ಸರಮಾಲೆ ಎದುರಾಗಿದೆ.
ಸಿಡ್ನಿಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಗಾಯನ, ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಕುರಿತು ಸಿಡ್ನಿಯ ದೀಪ್ತಿ ಭಟ್ ಬರೆದು ಕಳುಹಿಸಿರುವ ವರದಿ ಇಲ್ಲಿದೆ.
ಮಹಾರಾಷ್ಟ್ರದ ಥಾಣೆಯಲ್ಲಿ ಸಪ್ತಕ-ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಮುಂಬಯಿಯಲ್ಲಿ ಸ್ವರ-ಧಾರಾ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿ ನವೆಂಬರ್ 1 ಅನ್ನು "ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ" ವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಅಲ್ಲಿಯ ಗವರ್ನರ್ ಟೋನಿ ಎವರ್ಸ್ ಆದೇಶ ಹೊರಡಿಸಿದ್ದಾರೆ.
ಲಂಡನ್ನಲ್ಲಿ ಹೊರನಾಡು ಕನ್ನಡಿಗರು ಆಯೋಜಿಸಿದ ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ಅವರು ಬಸವಣ್ಣನ ವಚನ ಹಾಡುವ ಮೂಲಕ ಬಸವೇಶ್ವರರ ಪ್ರತಿಮೆಗೆ ನಮನ ಸಲ್ಲಿಸಿದರು.