Site icon Vistara News

Isha Gramotsavam: ಸೆ.23ರಂದು ಕೊಯಮತ್ತೂರಿನಲ್ಲಿ ʼಈಶ ಗ್ರಾಮೋತ್ಸವʼದ ಫೈನಲ್ಸ್‌

kabaddi in Isha Gramotsavam

ಕೊಯಮತ್ತೂರು: ಈಶ ಫೌಂಡೇಶನ್‌ನಿಂದ ಆಯೋಜಿರುವ ಈಶ ಗ್ರಾಮೋತ್ಸವ (Isha Gramotsavam) ಭಾರತದ ಗ್ರಾಮೀಣ ಕ್ರೀಡೆಗಳನ್ನು ವಿಶ್ವಕ್ಕೆ ಪರಿಚಯಿಸಿದೆ. ಈಶ ಗ್ರಾಮೋತ್ಸವ ಅಂತಿಮ ಹಂತಕ್ಕೆ ತಲುಪಿದ್ದು, ಗ್ರಾಮೀಣ ಭಾರತದ ಅತಿದೊಡ್ಡ ಕ್ರೀಡಾಕೂಟದ ಫೈನಲ್ಸ್‌ ಪಂದ್ಯಗಳನ್ನು ಸೆ.23ರಂದು ತಮಿಳುನಾಡಿನ ಕೊಯಮತ್ತೂರಿನ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಬಳಿ ಆಯೋಜಿಸಲಾಗಿದೆ.

ಸದ್ಗುರು ಜಗ್ಗಿ ವಾಸುದೇವ್‌ ಅವರ ಸಾಮಾಜಿಕ ಉಪಕ್ರಮವಾದ ಈಶ ಗ್ರಾಮೋತ್ಸವವು, ಗ್ರಾಮೀಣ ಜನರ ಜೀವನದಲ್ಲಿ ಕ್ರೀಡೋತ್ಸಾಹ ಮತ್ತು ವಿನೋದಶೀಲತೆಯನ್ನು ತರುವ ಗುರಿಯನ್ನು ಹೊಂದಿದ್ದು, ಸೆಪ್ಟೆಂಬರ್ 23 ರಂದು ಕೊಯಮತ್ತೂರಿನಲ್ಲಿ ನಡೆಯುವ ಫೈನಲ್‌ನಲ್ಲಿ ಸದ್ಗುರು ಜಗ್ಗಿ ವಾಸುದೇವ್‌ ಅವರ ಜತೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಭಾಗವಹಿಸಿ ಭಾರತದ ಗ್ರಾಮೀಣ ಕ್ರೀಡಾ ಕೌಶಲದ ಪ್ರದರ್ಶನಕ್ಕೆ ಸಾಕ್ಷಿಯಾಗಲಿದ್ದಾರೆ.

womens playing throw ball

ಗ್ರಾಮೀಣ ಜನರು ಒಟ್ಟಾಗಿ ಸೇರಲು, ಭಾಗವಹಿಸಲು ಮತ್ತು ಅವರ ಜೀವನದಲ್ಲಿ ಕ್ರೀಡೋತ್ಸಾಹ ಮತ್ತು ವಿನೋದಶೀಲತೆಯನ್ನು ತರಲು ಈಶ ಗ್ರಾಮೋತ್ಸವ ಆಯೋಜಿಸಲಾಗಿದೆ. ಆದ್ದರಿಂದ ಇದರಲ್ಲಿ ವೃತ್ತಿಪರರಿಗೆ ಭಾಗವಹಿಸಲು ಅವಕಾಶವಿಲ್ಲ. ದಕ್ಷಿಣ ಭಾರತದ 5 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಿಂದ 60,000ಕ್ಕೂ ಹೆಚ್ಚು ಆಟಗಾರರು ಈಶ ಗ್ರಾಮೋತ್ಸವದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ | Asian Games 2023 : ಏಷ್ಯನ್​ ಗೇಮ್ಸ್​​​ನಲ್ಲಿ ಭಾರತದ ಸ್ಪರ್ಧಿಗಳ ವೇಳಾಪಟ್ಟಿ ಇಲ್ಲಿದೆ, ಕೆಲವು ಸ್ಪರ್ಧೆಗಳನ್ನು ನೀವು ತಪ್ಪಿಸಿಕೊಳ್ಳಲೇಬಾರದು

ಈಶ ಗ್ರಾಮೋತ್ಸವದ 15ನೇ ಆವೃತ್ತಿಯು, 194 ಗ್ರಾಮೀಣ ಸ್ಥಳಗಳಲ್ಲಿ ಕ್ಲಸ್ಟರ್ ಮತ್ತು ವಿಭಾಗೀಯ ಮಟ್ಟದ ಸ್ಪರ್ಧೆಗಳನ್ನು ನಡೆಸುವ ಮೂಲಕ, ದಕ್ಷಿಣ ಭಾರತದ ಐದು ರಾಜ್ಯಗಳಿಂದ (ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪುದುಚೇರಿ) 60,000ಕ್ಕೂ ಹೆಚ್ಚು ಆಟಗಾರರ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. 10,000ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು – ಬಹುತೇಕ ಗೃಹಿಣಿಯರು ಕಬಡ್ಡಿ ಮತ್ತು ಥ್ರೋಬಾಲ್ನಂತಹ ಆಟಗಳಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಈಶ ಗ್ರಾಮೋತ್ಸವವು ಭಾರತದ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಒಂದು ಶಾಂತ ಕ್ರಾಂತಿಗೆ ಸಾಕ್ಷಿಯಾಗಿದೆ.

ಈಶ ಗ್ರಾಮೋತ್ಸವದ ಹಿಂದಿನ ಸಂಭ್ರಮದ ಮನೋಭಾವದ ಬಗ್ಗೆ ಸದ್ಗುರು ಜಗ್ಗಿ ವಾಸುದೇವ್‌ ಅವರು ಪ್ರತಿಕ್ರಿಯಿಸಿ, “ಈಶ ಗ್ರಾಮೋತ್ಸವವು ಕ್ರೀಡೆಯ ಮೂಲಕ ಆಚರಿಸುವ ಒಂದು ಜೀವನದ ಆಚರಣೆಯಾಗಿದೆ. ಒಂದು ಆಟವು ಎಲ್ಲಾ ಸಾಮಾಜಿಕ ಭಿನ್ನತೆಗಳನ್ನು ಮೀರಿ ಜನರನ್ನು ಒಂದುಗೂಡಿಸಬಹುದು; ಇದು ಕ್ರೀಡೆಯ ಶಕ್ತಿಯಾಗಿದೆ – ಇದು ಆಚರಣೆಯ ಉತ್ಸಾಹದ ಮೂಲಕ ಜಾತಿ, ಧರ್ಮ ಮತ್ತು ಇತರ ಗುರುತುಗಳನ್ನು ಅಳಿಸಬಹುದು” ಎಂದು ತಿಳಿಸಿದ್ದಾರೆ.

“ಇದು ಸ್ಪರ್ಧಾತ್ಮಕ ಕ್ರೀಡಾಪಟುವಾಗುವುದರ ಬಗ್ಗೆ ಅಲ್ಲ, ಜೀವನಕ್ಕಾಗಿ ವಿನೋದಶೀಲರಾಗುವುದರ ಬಗ್ಗೆ. ನೀವು ಸಂಪೂರ್ಣ ಭಾಗವಹಿಸುವಿಕೆ ಮತ್ತು ಒಳಗೊಳ್ಳುವಿಕೆಯೊಂದಿಗೆ ಚೆಂಡನ್ನು ಎಸೆಯಲು ಸಾಧ್ಯವಾದರೆ, ಒಂದು ಚೆಂಡು ಜಗತ್ತನ್ನು ಬದಲಾಯಿಸಬಹುದು. ಸಂಪೂರ್ಣ ಒಳಗೊಳ್ಳುವಿಕೆಯಿಂದ ಆಡುವ ಸಂತೋಷವನ್ನು ನೀವು ತಿಳಿದುಕೊಳ್ಳುವಂತಾಗಲಿ” ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ವಿಜೇತ ತಂಡಗಳಿಗೆ ಬೃಹತ್‌ ಬಹುಮಾನ

2004ರಿಂದ ನಡೆಸಿಕೊಂಡು ಬರುತ್ತಿರುವ ಈಶ ಗ್ರಾಮೋತ್ಸವದಲ್ಲಿ ಈ ವರ್ಷ, ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಮತ್ತು ತಮಿಳುನಾಡಿನೊಂದಿಗೆ ಗ್ರಾಮೀಣ ಆಟಗಳನ್ನು ಮತ್ತು ಹೆಚ್ಚುವರಿಯಾಗಿ ಪುರುಷರು ಮತ್ತು ಮಹಿಳೆಯರಿಗಾಗಿ ಕಬಡ್ಡಿಯನ್ನು ಒಳಗೂಡಿಸಲಾಗಿದೆ. ವಾಲಿಬಾಲ್ ಮತ್ತು ಥ್ರೋಬಾಲ್ ವಿಜೇತರು ಕ್ರಮವಾಗಿ 5 ಲಕ್ಷ ಮತ್ತು 2 ಲಕ್ಷ ಮತ್ತು ಕಬಡ್ಡಿಯಲ್ಲಿ ವಿಜೇತರಾದ ಪುರುಷ ಮತ್ತು ಮಹಿಳಾ ತಂಡಗಳು ಕ್ರಮವಾಗಿ 5 ಲಕ್ಷ ಮತ್ತು 2 ಲಕ್ಷ ರೂಪಾಯಿ ಬಹುಮಾನವನ್ನು ಪಡೆಯುತ್ತವೆ. ಸ್ಪರ್ಧಾತ್ಮಕ ಆಟಗಾರರು 55 ಲಕ್ಷ ಮೌಲ್ಯದ ಬೃಹತ್ ಬಹುಮಾನದ ಮೊತ್ತದಿಂದ ಗೆಲ್ಲುವ ಅವಕಾಶವನ್ನೂ ಹೊಂದಿದ್ದಾರೆ.

ಈಶ ಗ್ರಾಮೋತ್ಸವದ ಸಂಘಟನಾ ತಂಡದ ಭಾಗವಾದ ಸ್ವಾಮಿ ನಕುಜ ಪ್ರತಿಕ್ರಿಯಿಸಿ, “ಈಶ ಗ್ರಾಮೋತ್ಸವದ ಒಂದು ವಿಶೇಷ ಅಂಶವೆಂದರೆ ತಂಡದ ಎಲ್ಲಾ ಆಟಗಾರರು ಒಂದೇ ಗ್ರಾಮದವರು. ಇದು ವೃತ್ತಿಪರ ಆಟಗಾರರ ಪಂದ್ಯಾವಳಿಯಲ್ಲ ಆದರೆ, ಪ್ರತಿಯೊಬ್ಬರನ್ನು ಆಡಲು ಪ್ರೋತ್ಸಾಹಿಸುವ ವೇದಿಕೆಯಾಗಿದೆ. ಪ್ರತಿಯೊಬ್ಬರನ್ನೂ ಯಾವುದಾದರೊಂದು ಆಟದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದರಿಂದ ಹಿಡಿದು, ಗ್ರಾಮೀಣ ಆಟಗಳ ಮೋಜನ್ನು ಪುನರುಜ್ಜೀವನಗೊಳಿಸುವುದು ಮತ್ತು ನಶಿಸುತ್ತಿರುವ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪುನರುಜ್ಜೀವನಗೊಳಿಸುವವರೆಗೆ, ಈ ಸಂಪೂರ್ಣ ಉಪಕ್ರಮವನ್ನು ಎಚ್ಚರಿಕೆಯಿಂದ ರಚಿಸಲಾಗಿದೆ. ಇದರಿಂದಾಗಿ ಇಡೀ ಹಳ್ಳಿಯು ಒಂದು ಸಂಭ್ರಮಾಚರಣೆಯಾಗಿ ಒಟ್ಟುಗೂಡುತ್ತದೆ ಮತ್ತು ಗ್ರಾಮೀಣ ಜೀವನದ ಹುರುಪನ್ನು ಮರಳಿ ತರುತ್ತದೆ.” ಎಂದು ಹೇಳಿದ್ದಾರೆ.

womens playing throw ball

ಈಶ ಔಟ್ರೀಚ್‌ನಿಂದ ಆಯೋಜನೆ

ಈಶ ಗ್ರಾಮೋತ್ಸವದ ಹಿಂದಿನ ಆವೃತ್ತಿಗಳು, 8,412 ತಂಡಗಳು ಮತ್ತು ಒಟ್ಟು 1,00,167 ಆಟಗಾರರ ಭಾಗವಹಿಸುವಿಕೆಗೆ ಸಾಕ್ಷಿಯಾಗಿವೆ. ಈಶ ಗ್ರಾಮೋತ್ಸವವನ್ನು ಆಯೋಜಿಸುತ್ತಿರುವ “ಈಶ ಔಟ್ರೀಚ್”, ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವಾಲಯದಿಂದ, ರಾಷ್ಟ್ರೀಯ ಕ್ರೀಡಾ ಪ್ರಚಾರ ಸಂಸ್ಥೆ (NSPO) ಎಂದು ಗುರುತಿಸಲ್ಪಟ್ಟಿದೆ. ಈಶ ಔಟ್ರೀಚ್ 2018 ರಲ್ಲಿ, ಕ್ರೀಡಾ ಅಭಿವೃದ್ಧಿಗಾಗಿ ರಾಷ್ಟ್ರಪತಿಗಳಿಂದ “ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್” ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ | Asian Games 2023 : ಏಷ್ಯನ್ ಗೇಮ್ಸ್​ನ ಮೊದಲ ಪಂದ್ಯದಲ್ಲಿಯೇ ದಾಖಲೆ ಬರೆದ ಭಾರತ ಮಹಿಳಾ ಕ್ರಿಕೆಟ್​​ ತಂಡ

womens playing throw ball

ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್, ಒಲಿಂಪಿಕ್ ಪದಕ ವಿಜೇತರಾದ ರಾಜವರ್ಧನ್ ಸಿಂಗ್ ರಾಥೋಡ್ ಮತ್ತು ಕರ್ಣಂ ಮಲ್ಲೇಶ್ವರಿ ಅವರಂತಹ ಕ್ರೀಡಾ ಗಣ್ಯರು ಈ ಹಿಂದೆ ಕ್ರೀಡಾ ಉತ್ಸವದ ಫೈನಲ್‌ನಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಮಿಥಾಲಿ ರಾಜ್, ಪಿವಿ ಸಿಂಧು, ವೀರೇಂದ್ರ ಸೆಹ್ವಾಗ್, ಶಿಖರ್ ಧವನ್ ಈಶ ಗ್ರಾಮೋತ್ಸವಕ್ಕೆ ಬೆಂಬಲ ನೀಡಿದ್ದಾರೆ.

Exit mobile version