Site icon Vistara News

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

Fire breaks out in auto shed Burnt autos

ಬೆಂಗಳೂರು: ತಡರಾತ್ರಿ 12-30ರ ಸುಮಾರಿಗೆ ಆಟೋ ಶೆಡ್‌ನಲ್ಲಿ ಬೆಂಕಿ ಕಾಣಿಸಿಕೊಂಡು, 30ಕ್ಕೂ ಹೆಚ್ಚು ಆಟೋಗಳು (Fire Accident) ಸುಟ್ಟು ಕರಕಲಾಗಿವೆ. ಬೆಂಗಳೂರಿನ ನಾಯಂಡಹಳ್ಳಿ ಸಮೀಪದ ಗಂಗೊಂಡನಹಳ್ಳಿ ಸಮೀಪ ಅಗ್ನಿ ಅವಘಡ ಸಂಭವಿಸಿದೆ.

ರಿಜ್ವಾನ್ ಎಂಬುವವರಿಗೆ ಸೇರಿದ ಶೆಡ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಬೆಂಕಿ ನಂದಿಸಿದ್ದಾರೆ.

ಶೆಡ್‌ನಲ್ಲಿ ಹೇಗೆ, ಯಾವ ಕಾರಣಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂಬುದು ನಿಗೂಢವಾಗಿದೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅನಾಹುತ ಸಂಭವಿಸಿರುವ ಸಾಧ್ಯತೆ ಇದೆ. ತಡರಾತ್ರಿ ಆಟೋಗಳು ಸುಟ್ಟು ಕರಕಲಾದ ಸುದ್ದಿ ತಿಳಿಯುತ್ತಿದ್ದಂತೆ ಆಟೋ ಚಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ: Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

ಹೊಟ್ಟೆಪಾಡಿಗಿದ್ದ ದುಡಿಮೆಗೆ ಆಧಾರವಾಗಿದ್ದ ಆಟೋವನ್ನು ಕಳೆದುಕೊಂಡಿದ್ದಕ್ಕೆ ದುಃಖಿಸಿದ್ದರು. ಮನೆ ಮುಂದೆ ಜಾಗ ಇಲ್ಲವೆಂದು ಆಟೋ ಚಾಲಕರು ಶುಲ್ಕ ಕೊಟ್ಟು ಶೆಡ್‌ನಲ್ಲಿ ಪಾರ್ಕ್‌ ಮಾಡುತ್ತಿದ್ದರು. ಕಷ್ಟ ಪಟ್ಟು ದುಡೀತಾ ಇದೀವಿ ಹೀಗೆ ಆಗುತ್ತೆ ಎಂದು ಅಂದುಕೊಂಡಿರಲಿಲ್ಲ. ಆಟೋ ನಿಲ್ಲಿಸಿ ಮನೆಗೆ ಹೋದಾಗ ಈ ಅವಘಡ ನಡೆದಿದೆ.

ಕಳೆದ 10 ದಿನದ ಹಿಂದೆ ಶಾರ್ಟ್ ಸರ್ಕ್ಯೂಟ್‌ನಿಂದ ಪಕ್ಕದ ಗೋಡಾನ್‌ಗೆ ಬೆಂಕಿ ಬಿದ್ದಿತ್ತು. ಇದರ ಬಗ್ಗೆ ಬೆಸ್ಕಾಂ ಅವರ ಗಮನಕ್ಕೆ ತಂದರೂ ಏನು ಪ್ರಯೋಜನ ಆಗಿಲ್ಲ. ಈಗ ಆಟೋಗಳಿದ್ದ ಶೆಡ್‌ ಸುಟ್ಟು ಕರಕಲಾಗಿದೆ, ನಾವೆಲ್ಲರೂ ಬೀದಿಪಾಲಾಗಿದ್ದೇವೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಇನ್ನು ಅಗ್ನಿಶಾಮಕ ದಳ ಸಿಬ್ಬಂದಿ ಶೆಡ್‌ನಲ್ಲಿ ಸುಟ್ಟು ಕರಕಲಾಗಿರುವ ಆಟೋ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜೆಸಿಬಿ‌ ಮೂಲಕ ತೆರವುಗೊಳಿಸುವ ಸಮಯದಲ್ಲಿ ಮತ್ತೆ ಮತ್ತೆ ಬೆಂಕಿ ಹತ್ತಿಕೊಳ್ಳುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version