ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಆರಂಭವಾದ, ಜಾತ್ರೋತ್ಸವಗಳಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅನುಮತಿ ನೀಡಬಾರದು ಎಂಬ ಕೂಗು ಸಿಲಿಕಾನ್ ಸಿಟಿಗೂ ವ್ಯಾಪಿಸಿದೆ. ಬೆಂಗಳೂರಿನ ಐತಿಹಾಸಿಕ ವಿವಿ ಪುರಂ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಜಾತ್ರೆಯಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ತಡೆ ಹಾಕಬೇಕು ಎಂದು ಹಿಂದೂ ಸಂಘಟನೆ ಒತ್ತಾಯಿಸಿದೆ.
ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಅನ್ಯಧರ್ಮದವರು ವ್ಯಾಪಾರ ನಡೆಸಿದ್ದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಹಿಂದೂ ಸಂಘಟನೆಗಳು ಈಗ ವಿವಿ ಪುರಂ ಜಾತ್ರೆಯತ್ತ ಗಮನ ಹರಿಸಿವೆ.
ಇದೇ ತಿಂಗಳು 29ರಂದು ಸುಬ್ರಮಣ್ಯಸ್ವಾಮಿ ಜಾತ್ರೆ ನಡೆಯಲಿದೆ. ಜಾತ್ರೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳು ಇರಲಿವೆ. ವಿವಿ ಪುರಂ ಸರ್ಕಲ್ ಸೇರಿದಂತೆ 2 ಕಿ.ಮೀ ಸುತ್ತಮುತ್ತಲಿನ ಬೀದಿಗಳಲ್ಲಿ ತಾತ್ಕಾಲಿಕ ಅಂಗಡಿಗಳ ನಿರ್ಮಾಣವಾಗಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ, ನೆರೆ ರಾಜ್ಯಗಳಿಂದಲೂ ವ್ಯಾಪಾರಸ್ಥರು ಆಗಮಿಸುತ್ತಾರೆ. ಇಲ್ಲಿ ಹಿಂದೂಗಳನ್ನು ಹೊರತುಪಡಿಸಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು. ಹಿಂದೂಗಳಿಗೆ ಮಾತ್ರ ಜಾತ್ರೆಯಲ್ಲಿ ಅಂಗಡಿಗಳಿಗೆ ಅವಕಾಶ ನೀಡಬೇಕು ಎಂದು ಪೊಲೀಸ್ ಆಯುಕ್ತರಿಗೆ, ಬಿಬಿಎಂಪಿ ಆಯುಕ್ತರಿಗೆ ಭಜರಂಗ ದಳ ಮನವಿ ಪತ್ರ ಸಲ್ಲಿಸಿದೆ.
ಇದನ್ನೂ ಓದಿ | ಜಾತ್ರೆ ಸೀಸನ್‌ಗೂ ಮುನ್ನ ಶುರುವಾಯಿತು ಧರ್ಮ ದಂಗಲ್, ಅನ್ಯಮತೀಯರ ವ್ಯಾಪಾರ ತಡೆಯಲು ಆಗ್ರಹ