ಬೆಂಗಳೂರು : ಬೆಂಗಳೂರಿಗರ ನೆಚ್ಚಿನ ಉದ್ಯಾನವನದಲ್ಲಿ ಕಬ್ಬನ್‌ಪಾರ್ಕ್ (Cubbon park) ಕೂಡ ಒಂದು. ಜನರ ನೆಚ್ಚಿನ ತಾಣವಾದ ಕಬ್ಬನ್ ಪಾರ್ಕ್‌ನಲ್ಲಿ ಮರ ತಬ್ಬಿಕೊಳ್ಳಲು 1500 ರೂ. ಶುಲ್ಕ ಕೊಡಬೇಕು. ಅರೇ ಸರ್ಕಾರ ಯಾವಾಗ ಈ ರೂಲ್ಸ್ ತಂದಿದೆ ಅಂತ ಅಂದುಕೊಂಡ್ರಾ? ಖಂಡಿತ ಇಲ್ಲ, ಇದು ಕಂಪೆನಿಯೊಂದು ಶುರು ಮಾಡಿರುವ (Forest Bathing) ಫಾರೆಸ್ಟ್ ಬಾಥಿಂಗ್.. ಟ್ರೋವ್ ಹೆಸರಿನ ಸಂಸ್ಥೆಯೊಂದು (Trove Experinces) ಫಾರೆಸ್ಟ್ ಬಾಥಿಂಗ್ ಚಟುವಟಿಕೆಯನ್ನು ಆಯೋಜಿಸಿದೆ. ಇದೇ ಏಪ್ರಿಲ್ 28ರಂದು ನಡೆಯಲಿರುವ ಈವೆಂಟ್‌ಗೆ ಎಂಟ್ರಿ ಫೀಸ್ ಕೂಡ ಇದೆ. ಈ ಫಾರೆಸ್ಟ್ ಬಾಥಿಂಗ್ ಅನುಭವ ಪಡೆಯಲು ಬರೋಬ್ಬರಿ 1,500 ರೂ. ಟಿಕೆಟ್ ಬೆಲೆಯನ್ನು ನಿಗಧಿ ಮಾಡಲಾಗಿದೆ.
ಜೋಳದ ರೊಟ್ಟಿ (Jolad rotti) ಎಂಬ ಎಕ್ಸ್ ಅಕೌಂಟ್‌ನಲ್ಲಿ ಅಜಯ್ (Ajayawhy) ಎಂಬುವವರು ಫಾರೆಸ್ಟ್ ಬಾಥಿಂಗ್ ಫೋಟೊವನ್ನು ಹಂಚಿಕೊಂಡಿದ್ದಾರೆ. ಫೋಟೊ ಅಡಿಬರಹದಲ್ಲಿ ಮಾರ್ಕೆಟ್‌ನಲ್ಲಿ ಹೊಸ ಸ್ಕ್ಯಾಮ್ ಬಂದಿದೆ ನೋಡಿ ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ತರಹೇವಾರಿ ಕಾಮೆಂಟ್‌ಗಳು ಪಾಸ್ ಆಗುತ್ತಿದ್ದು, ಬಹುತೇಕರು ಕಬ್ಬನ್ ಪಾರ್ಕ್‌ನಲ್ಲಿ ಉಚಿತವಾಗಿಯೇ ಮರಗಳನ್ನು ಒಪ್ಪಿಕೊಳ್ಳಬಹುದು, ಈ ಚಟುವಟಿಕೆಗೆ ಹಣ ಕೊಡುವ ಅಗತ್ಯ ಏನಿದೆ. ಇದೆಲ್ಲ ಹಣ ಮಾಡುವ ಹೊಸ ಸ್ಕ್ಯಾಮ್ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಹೈಕೋರ್ಟ್ ಹಿಂಭಾಗದಲ್ಲಿರುವ ಕಬ್ಬನ್ ಪಾರ್ಕ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ದಿ ಹೀಲಿಂಗ್ ಪವರ್ ಆಫ್ ಫಾರೆಸ್ಟ್ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಫಾರೆಸ್ಟ್ ಬಾಥಿಂಗ್ ಅನುಭವವನ್ನು ಪಡೆದು ಒತ್ತಡವನ್ನು ದೂರ ಮಾಡಿ ಎಂದು ಪೋಸ್ಟ್ ಹಾಕಲಾಗಿದೆ.
ಇದನ್ನೂ ಓದಿ: Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!
ಇನ್ನೂ ನೆಟ್ಟಿಗರಿಂದ ಪರ-ವಿರೋಧದದ ಪ್ರತಿಕ್ರಿಯೆಗಳು ಬಂದಿವೆ. ದೈನಂದಿನ ಜೀವನದಲ್ಲಿ ಮನೆ- ಕಚೇರಿಗೆ ಸೀಮಿತವಾಗಿದ್ದರೆ, ಕಬ್ಬನ್ ಪಾರ್ಕ್ ಖಂಡಿತವಾಗಿಯೂ ಕಾಡಿನಂತೆ ಭಾಸವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಂದಿಷ್ಟು ಜನ ಫಾರೆಸ್ಟ್ ಬಾಥಿಂಗ್ ಅಂದರೇನು ಎಂದು ಪ್ರಶ್ನೆ ಕೇಳಿದ್ದು ಮಾತ್ರವಲ್ಲದೇ ಕಬ್ಬನ್‌ಪಾರ್ಕ್‌ಗೆ ಹೋಗಲು ಸಾವಿರಾರು ರೂಪಾಯಿ ಕೊಡಬೇಕಾ ಎಂದು ಕಾಲೆಳೆದಿದ್ದಾರೆ.
ಅರಣ್ಯ ಸ್ನಾನದ ಕಲ್ಪನೆಗೆ ನನ್ನ ವಿರೋಧವಿಲ್ಲ. ಇದು ಅನೇಕ ರೀತಿಯಲ್ಲಿ ಪ್ರಯೋಜನಕಾರಿ ಎಂದು ನನಗೆ ಖಾತ್ರಿಯಿದೆ. ಆದರೆ ಸ್ಥಳ ಮತ್ತು ಶುಲ್ಕ 18% ಜಿಎಸ್‌ಟಿ ಬಗ್ಗೆ ನನ್ನ ತಕಾರರು ಇದೆ. ಕಬ್ಬನ್ ಪಾರ್ಕ್ ಒಳಗೆ ಹೋಗಲು ಓಡಾಡಲು ಈ ದುಬಾರಿ ಶುಲ್ಕ ಯಾಕೆ ಎಂದಿದ್ದಾರೆ. ಕಬ್ಬನ್ ಪಾರ್ಕ್ ಕಾಡಲ್ಲ, ಮತ್ಯಾಕೆ ಫಾರೆಸ್ಟ್ ಬಾಥಿಂಗ್ ಹೆಸರಿನಲ್ಲಿ ಮೋಸ ಎಂದು ಕಿಡಿಕಾರಿದ್ದಾರೆ.
https://x.com/AJayAWhy/status/1780167988504625242ಏನಿದು ಫಾರೆಸ್ಟ್ ಬಾಥಿಂಗ್?
ಅಂದಹಾಗೇ ಫಾರೆಸ್ಟ್ ಬಾಥಿಂಗ್ ಎಂಬ ಪರಿಕಲ್ಪನೆಯು ನಮ್ಮ ದೇಶದಲ್ಲ, ಬದಲಿಗೆ ಜಪಾನಿನಲ್ಲಿ ಹೆಚ್ಚು ಸಕ್ರಿಯವಾಗಿದೆ. ಜಪಾನಿನಲ್ಲಿ ಶಿನ್ರಿನ್-ಯೋಕು (shinrin-yoku) ಎಂದೂ ಕರೆಯಲ್ಪಡುವ ಈ ಫಾರೆಸ್ಟ್ ಬಾಥಿಂಗ್ ಅಥವಾ ಅರಣ್ಯ ಸ್ನಾನವು ಪ್ರಕೃತಿ ಜತೆಗಿನ ಒಡನಾಟದೊಂದಿಗೆ ಒತ್ತಡವನ್ನು ದೂರ ಮಾಡಲು ಥೆರಪಿಯಂತೆ ಬಳಸಲಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ