Site icon Vistara News

Fraud Case : ಸ್ನೇಹಿತರೇ ಸುಲಿಗೆಕೋರರು; ಖಾಸಗಿ ಫೋಟೊ ಇದೆಯೆಂದು ಟೆಕ್ಕಿಯಿಂದ ಲಕ್ಷ ಲಕ್ಷ ಲೂಟಿ!

Friends are cheats Techie robbed of lakhs of rupees for having private photo

ಬೆಂಗಳೂರು: ಅವರೆಲ್ಲೂ 18 ವರ್ಷಗಳ ಸ್ನೇಹಿತರು.. ಒಂದೇ ತಟ್ಟೆಯಲ್ಲಿ ಅನ್ನ ತಿಂದು ಬೆಳೆದವರು. ಆದರೆ ಜತೆಗೆ ಇದ್ದುಕೊಂಡೇ ನಂಬಿಕೆ, ವಿಶ್ವಾಸ ದ್ರೋಹ ಮಾಡಿದ್ದಾರೆ. ಗೆಳೆಯನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಅಣ್ಣ-ತಮ್ಮಂದಿರು ಲಕ್ಷಾಂತರ ರೂ. ಹಣವನ್ನು (Fraud Case) ದೋಚಿದ್ದಾರೆ. ನಿನ್ನ ಖಾಸಗಿ ಫೋಟೊಗಳು ಸಿಕ್ಕಿವೆ ಎಂದೇಳಿ ಲಕ್ಷ ಲಕ್ಷ ಸುಲಿಗೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಶಿವಮೊಗ್ಗ ಮೂಲದ ಅಕ್ಷಯ್ ಕುಮಾರ್ ಹಾಗೂ ಭರತ್ ನಂಬಿಕೆ ದ್ರೋಹಿ ಸ್ನೇಹಿತರಾಗಿದ್ದಾರೆ. ಅಕ್ಷಯ್‌ ಕುಮಾರ್‌ ಹಾಗೂ ಭರತ್‌ ಇಬ್ಬರು ಅಣ್ಣ-ತಮ್ಮಂದಿರು. ಕೆಲಸ ನಿಮಿತ್ತ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ವಾಸವಿದ್ದರು. ತಾವಾಯಿತು, ತಮ್ಮ ಕೆಲಸ ಆಯಿತು ಎಂದು ಇದ್ದಿದ್ದರೆ, ಇಂದು ಜೈಲುಪಾಲಾಗುತ್ತಿರಲಿಲ್ಲ. ಇವರಿಬ್ಬರು ಸೇರಿ 18 ವರ್ಷದಿಂದ ಸ್ನೇಹಿತನಾಗಿದ್ದ ಟೆಕ್ಕಿಗೆ ವಂಚಿಸಿದ್ದಾರೆ. ಸ್ನೇಹಿತ ಒಳ್ಳೆಯ ಕೆಲಸದಲ್ಲಿ ಇದ್ದಾನೆ, ಅವನ ಬಳಿ ಸಾಕಷ್ಟು ಹಣ ಇರಬಹುದು ಎಂದು ಅಂದಾಜಿಸಿ ವಂಚಿಸಿದ್ದಾರೆ.

ಅಪರಿಚಿತ ವ್ಯಕ್ತಿ ಬಳಿ ನಿನ್ನ ಖಾಸಗಿ ಫೋಟೊಗಳಿವೆ. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಅವನಿಗೆ ತುರ್ತಾಗಿ 12 ಲಕ್ಷ ರೂ. ಕೊಡಬೇಕು ಎಂದು ಈ ಇಬ್ಬರು ಸಹೋದರರು ಟೆಕ್ಕಿ ಸ್ನೇಹಿತನನ್ನು ನಂಬಿಸಿದ್ದರು. ಸ್ನೇಹಿತರ ಮಾತು ನಂಬಿದ ಟೆಕ್ಕಿ, ಸಾಲಸೋಲ ಮಾಡಿ ಹಣವನ್ನು ಕೊಟ್ಟಿದ್ದ. ಇಷ್ಟಕ್ಕೆ ಸುಮ್ಮನಾಗದೇ ಒಮ್ಮೆ ಹಣದ ರುಚಿ ನೋಡಿದ ಇವರಿಬ್ಬರು ಪದೇಪದೆ ಇದೇ ವಿಷಯವನ್ನು ಮುಂದಿಟ್ಟುಕೊಂಡು 5, 15 ಲಕ್ಷ ರೂ. ಹಣ ಪಡೆದಿದ್ದರು.

ಸಂತ್ರಸ್ತ ಟೆಕ್ಕಿಯು ಸ್ನೇಹಿತರ ಮಾತು ನಂಬಿ ಬರೋಬ್ಬರಿ 65 ಲಕ್ಷ ರೂ. ಹಣವನ್ನು ಕೊಟ್ಟಿದ್ದಾನೆ. ಆದರೆ ನಂತರದ ಸಮಯದಲ್ಲಿ ಸ್ನೇಹಿತರ ವಿಶ್ವಾಸ ದ್ರೋಹ ಹಾಗೂ ವಂಚನೆ ತಿಳಿದು ಬಂದಿದೆ. ಸದ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸ್ನೇಹಿತರ ದೋಖಾ ಬಗ್ಗೆ ದೂರು ಕೊಟ್ಟಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಅಣ್ಣ-ತಮ್ಮನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Drone Prathap: ಡ್ರೋನ್‌ ಪ್ರತಾಪ್‌ ವಿರುದ್ಧ ಸಾಲು ಸಾಲು ದೂರುಗಳು: ದಾಖಲಾಗಿಲ್ಲ ಎಫ್‌ಐಆರ್!

ಬುರ್ಖಾ ಧರಿಸಿ ತಮ್ಮ ಮನೆಯಲ್ಲೇ ಚಿನ್ನ, ದುಡ್ಡು ಕದ್ದ ಮಹಿಳೆ! ಯಾವ ಸೇಡಿಗಾಗಿ ಇಂಥ ಕೃತ್ಯ?

ನವದೆಹಲಿ: ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ಪೊಸೆಸಿವ್‌ನೆಸ್‌ (Possessiveness) ಜಾಸ್ತಿ ಇರುತ್ತದೆ. ತಂದೆ-ತಾಯಿ, ಪತಿ, ಮಕ್ಕಳು, ಸಂಬಂಧಿಕರೆಲ್ಲರೂ ತನ್ನನ್ನು ಮಾತ್ರ ಇಷ್ಟಪಡಬೇಕು, ತನಗೆ ಸಂಬಂಧಿಸಿದವರ ಗಮನ ತನ್ನ ಮೇಲೆ ಮಾತ್ರ ಇರಬೇಕು ಎಂಬ ಪೊಸೆಸಿವ್‌ನೆಸ್‌ ಜಾಸ್ತಿ ಇರುತ್ತದೆ. ಆದರೆ, ಕೆಲವೊಮ್ಮೆ ಈ ಪೊಸೆಸಿವ್‌ನೆಸ್‌ ಹೊಟ್ಟೆಕಿಚ್ಚಾಗಿ ಬದಲಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲಿ ತಾಯಿಗೆ ತಂಗಿ ಮೇಲೆಯೇ ಜಾಸ್ತಿ ಪ್ರೀತಿ ಎಂಬ ಹೊಟ್ಟೆಕಿಚ್ಚಿನಿಂದಾಗಿ ತಮ್ಮ ಮನೆಗೇ ಬುರ್ಖಾ ಧರಿಸಿ ತೆರಳಿದ ಮಹಿಳೆಯು (Delhi Woman) ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದಿದ್ದಾರೆ. ಈಗ ಮಹಿಳೆಯು ಪೊಲೀಸರ ಅತಿಥಿಯಾಗಿದ್ದಾರೆ.

ಹೌದು, ದೆಹಲಿಯ ಉತ್ತಮ ನಗರ ಪ್ರದೇಶದಲ್ಲಿ ಶ್ವೇತಾ (31) ಎಂಬ ಮಹಿಳೆಯು ತಮ್ಮ ತಾಯಿ ಮನೆಯಲ್ಲೇ ಕಳ್ಳತನ ಮಾಡಿದ್ದಾರೆ. ಶ್ವೇತಾ, ಆಕೆಯ ತಂಗಿ ಹಾಗೂ ತಾಯಿ ಒಟ್ಟಿಗೆ ವಾಸಿಸುತ್ತಿದ್ದು, ತಾಯಿಗೆ ತನಗಿಂತ ತಂಗಿ ಮೇಲೆಯೇ ಹೆಚ್ಚು ಪ್ರೀತಿ ಇದೆ ಎಂದು ಶ್ವೇತಾ ಭಾವಿಸಿದ್ದಾರೆ. ಈ ಪೊಸೆಸಿವ್‌ನೆಸ್‌ ಸೇಡಾಗಿ ಬದಲಾಗಿದೆ. ಇದಕ್ಕಾಗಿ, ಯಾರಿಗೂ ಗೊತ್ತಾಗಬಾರದು ಎಂದು ಬುರ್ಖಾ ಧರಿಸಿ, ತಮ್ಮ ಮನೆಯ ಬಾಗಿಲನ್ನೇ ಮುರಿದ ಶ್ವೇತಾ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕದ್ದಿದ್ದಾರೆ.

ಇದನ್ನೂ ಓದಿ: Viral Video: ಇನ್ನೆಂದೂ ಕಳವು ಮಾಡದಂತೆ ರೈಲು ಪ್ರಯಾಣಿಕರು ಖದೀಮನಿಗೆ ಪಾಠ ಕಲಿಸಿದ್ದು ಹೀಗೆ

ಉತ್ತಮ ನಗರ ವ್ಯಾಪ್ತಿಯ ಸೇವಕ ಪಾರ್ಕ್‌ ಪ್ರದೇಶದಲ್ಲಿರುವ ಮನೆಯಲ್ಲಿ ಜನವರಿ 30ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಶ್ವೇತಾ ಕಳ್ಳತನ ಮಾಡಿದ್ದಾರೆ. ತಂಗಿಯ ಮದುವೆಗಾಗಿ ಇಟ್ಟಿದ್ದ ಚಿನ್ನ ಹಾಗೂ 25 ಸಾವಿರ ರೂಪಾಯಿಯನ್ನು ಶ್ವೇತಾ ಕದ್ದಿದ್ದಾರೆ. ಮನೆಯಲ್ಲಿ ಕಳ್ಳತನವಾಗಿರುವ ಕುರಿತು ಶ್ವೇತಾ ಅವರ ತಾಯಿ ಕಮಲೇಶ್‌ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಶ್ವೇತಾ ಅವರೇ ಕಳ್ಳತನ ಮಾಡಿದ್ದು ಗೊತ್ತಾಗಿದೆ.

ಶ್ವೇತಾ ಎರಡು-ಮೂರು ದಿನದಿಂದ ಮನೆಯಲ್ಲಿ ಇರದಿರುವುದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ಆಗ ಶ್ವೇತಾ ಅವರೇ ಕಳ್ಳತನ ಮಾಡಿರುವುದು ಬಯಲಾಗಿದೆ. ಶ್ವೇತಾ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಆಕೆಯ ಹೊಟ್ಟೆಕಿಚ್ಚಿನ ಕತೆ ಬಯಲಾಗಿದೆ. ಶ್ವೇತಾ ಒಂದಷ್ಟು ಸಾಲ ಮಾಡಿಕೊಂಡಿದ್ದರು. ಇದಕ್ಕಾಗಿ ತಾಯಿ ಬಳಿ ಹಣ ಕೇಳಿದ್ದರು. ತಂಗಿ ಮದುವೆ ಇದೆ, ಹಣ ಕೊಡುವುದಿಲ್ಲ ಎಂದು ತಾಯಿ ಹೇಳಿದ್ದರು. ಇದು ಕೂಡ ಕಳ್ಳತನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version