ನವದೆಹಲಿ: ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಎಜುಕೇಷನಲ್ ಫೌಂಡೇಶನ್ (USIEF) ವತಿಯಿಂದ ಫುಲ್‌ಬ್ರೈಟ್-ನೆಹರು ಮತ್ತು ಇತರ ಫುಲ್‌ಬ್ರೈಟ್ ಫೆಲೋಶಿಪ್‌ಗಳಿಗಾಗಿ (Fulbright Fellowship) ವಾರ್ಷಿಕ ಸ್ಪರ್ಧೆ ಪ್ರಾರಂಭಿಸಲಾಗಿದೆ. USIEFನಿಂದ ಫೆಲೋಶಿಪ್‌ಗಳಿಗಾಗಿ 2025-2026 ಶೈಕ್ಷಣಿಕ ವರ್ಷಕ್ಕೆ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.
U.S. ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ ಮತ್ತು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಧನಸಹಾಯ ಪಡೆದ ಇಂತಹ ಇಂತಹ ಕಾರ್ಯಕ್ರಮಗಳು, ಫೆಲೋಗಳ ಶೈಕ್ಷಣಿಕ, ಸಂಶೋಧನೆ, ಬೋಧನೆ ಮತ್ತು ವೃತ್ತಿಪರ ಸಾಮರ್ಥ್ಯಗಳನ್ನು ಶ್ರೀಮಂತಗೊಳಿಸುವ ಅವಕಾಶಗಳ ಮೂಲಕ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಜನರನ್ನು ಹತ್ತಿರಕ್ಕೆ ತರಲು ಸಹಾಯ ಮಾಡಿದೆ.
ಈ ವಿದ್ಯಾರ್ಥಿವೇತನ ಕಾರ್ಯಕ್ರಮಗಳು ಹಳೆಯ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿಷಯಗಳು ಮತ್ತು ವೃತ್ತಿಗಳಲ್ಲಿ ಬಲವಾದ ನಾಯಕತ್ವ ಪ್ರದರ್ಶಿಸಿದ್ದಾರೆ. ಅತ್ಯುತ್ತಮ ಭಾರತೀಯ ವಿದ್ಯಾರ್ಥಿಗಳು, ವಿದ್ವಾಂಸರು, ಶಿಕ್ಷಕರು, ಕಲಾವಿದರು ಮತ್ತು ವೈವಿಧ್ಯಮಯ ಹಿನ್ನೆಲೆಯ ವೃತ್ತಿಪರರು ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತದೆ.
ಇದನ್ನೂ ಓದಿ | Most Powerful Countries: ವಿಶ್ವದ ಬಲಿಷ್ಠ ರಾಷ್ಟ್ರಗಳ ಪಟ್ಟಿ ಬಿಡುಗಡೆ; ಭಾರತಕ್ಕೆ ಎಷ್ಟನೇ ಸ್ಥಾನ?
“ಫುಲ್‌ಬ್ರೈಟ್-ನೆಹರು ವಿದ್ಯಾರ್ಥಿವೇತನವು ನನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ. ಈ ಪ್ರತಿಷ್ಠಿತ ಅವಕಾಶವು ನನ್ನ ದೃಷ್ಟಿಕೋನವನ್ನು ಪ್ರಾದೇಶಿಕ ಗಮನದಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ್ದು, ಸಾಕಷ್ಟು ನೆಟ್‌ವರ್ಕಿಂಗ್ ಮತ್ತು ಜ್ಞಾನ-ವಿನಿಮಯ ಅವಕಾಶಗಳನ್ನು ಒದಗಿಸುತ್ತದೆ. ಇಂದು, ನಾನು ಬ್ಲೂಮ್‌ಬರ್ಗ್ ಸ್ಕೂಲ್‌ನಲ್ಲಿ ಏಷ್ಯಾ ಪೆಸಿಫಿಕ್ ಪಬ್ಲಿಕ್ ಹೆಲ್ತ್ ನೆಟ್‌ವರ್ಕ್‌ನ ಅಧ್ಯಕ್ಷರಾಗಿ ಹೆಮ್ಮೆಯಿಂದ ಸೇವೆ ಸಲ್ಲಿಸುತ್ತಿದ್ದೇಮೆ, ನನ್ನ ಜೀವನ ಮತ್ತು ವೃತ್ತಿಪರ ಪ್ರಯಾಣದ ಮೇಲೆ ಫುಲ್‌ಬ್ರೈಟ್ ಬೀರಿದ ಆಳವಾದ ಪ್ರಭಾವದಿಂದ ನಾನು ಈ ಸ್ಥಾನವನ್ನು ಪಡೆದಿದ್ದೇನೆ” ಎಂದು 2023-2024ರ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಫುಲ್‌ಬ್ರೈಟ್-ನೆಹರು ಮಾಸ್ಟರ್ಸ್ ಫೆಲೋ ನವೀನ್ ಅನಸ್ವರ ತಿಳಿಸಿದ್ದಾರೆ.
“ಫುಲ್‌ಬ್ರೈಟ್-ನೆಹರು ಡಾಕ್ಟರಲ್ ರೀಸರ್ಚ್ ಫೆಲೋಶಿಪ್ ನನ್ನ ಶೈಕ್ಷಣಿಕ ಮತ್ತು ವೈಯಕ್ತಿಕ ಪ್ರಯಾಣವನ್ನು ಗಣನೀಯವಾಗಿ ಪರಿವರ್ತಿಸಿತು. ವೃತ್ತಿಪರ ವಿಭಾಗದಲ್ಲಿ, ಇದು ವೈವಿಧ್ಯಮಯ ಸಂಶೋಧನಾ ಕೌಶಲ್ಯಗಳು, ದೃಷ್ಟಿಕೋನಗಳು ಮತ್ತು ಅಮೂಲ್ಯವಾದ ಸಹಯೋಗದ ಅವಕಾಶಗಳಿಗೆ ಬಾಗಿಲು ತೆರೆಯಿತು. ವೈಯಕ್ತಿಕವಾಗಿ, ಫೆಲೋಶಿಪ್ ಸ್ವಯಂ ಅನ್ವೇಷಣೆಗೆ ಒಂದು ಅನನ್ಯ ಸ್ಥಳವನ್ನು ಒದಗಿಸಿದೆ, ನನ್ನ ಗುರುತು ಮತ್ತು ಮೌಲ್ಯಗಳ ಬಗ್ಗೆ ಆಳವಾಗಿ ಚಿಂತನೆ ಮಾಡಲುನನಗೆ ಅವಕಾಶ ಮಾಡಿಕೊಟ್ಟಿತು. ಈ ಅನುಭವವು ನನ್ನ ಒಟ್ಟಾರೆ ವ್ಯಕ್ತಿತ್ವ ಮತ್ತು ಯೋಗಕ್ಷೇಮದ ಮೇಲೆ ಆಳವಾದ ಮತ್ತು ಶಾಶ್ವತವಾದ ಪ್ರಭಾವವನ್ನು ಬೀರಿದೆ” ಎಂದು 2023 ಕ್ಯಾಲಿಫೋರ್ನಿಯಾ-ಡೇವಿಸ್ ವಿಶ್ವವಿದ್ಯಾಲಯದ ಫುಲ್‌ಬ್ರೈಟ್-ನೆಹರು ಡಾಕ್ಟರಲ್ ರಿಸರ್ಚ್ ಫೆಲೋ ಸನಾ ಇಮ್ತಿಯಾಜ್‌ಭಾಯ್ ಜಿಂದಾನಿ ಹೇಳಿದ್ದಾರೆ.
“ಸಿಯಾಟಲ್‌ನ ವಾಷಿಂಗ್‌ಟನ್ ವಿಶ್ವವಿದ್ಯಾಲಯಕ್ಕೆ ನನ್ನ ಫುಲ್‌ಬ್ರೈಟ್ ಭೇಟಿಯು ನಿಜವಾಗಿಯೂ ರೂಪಾಂತರವಾಗಿದೆ. ಇಲ್ಲಿ ಕಳೆದ ಸಮಯವು ನನ್ನ ಸಂಶೋಧನಾ ಪ್ರಶ್ನೆಗಳನ್ನು ಪರಿಷ್ಕರಿಸಿದ್ದುಮಾತ್ರವಲ್ಲದೆ ನಾನು ಉತ್ತರಗಳನ್ನು ಹುಡುಕುವ ವಿಧಾನದ ಮೇಲೆ ಆಳವಾದ ಪ್ರಭಾವ ಬೀರಿದೆ. ಹವಾಮಾನ ಬದಲಾವಣೆ ಮತ್ತು ಸಿಹಿನೀರಿನ ಪರಿಸರ ವಿಜ್ಞಾನದಲ್ಲಿ ಪ್ರಖ್ಯಾತ ತಜ್ಞರೊಂದಿಗೆ ಸಂವಹನ ನಡೆಸುವುದು ಅಮೂಲ್ಯವಾದ ಅನುಭವವಾಗಿದೆ, ಇದು ನನ್ನ ಶೈಕ್ಷಣಿಕ ಮತ್ತು ವೃತ್ತಿಪರ ಅಭಿವೃದ್ಧಿಯಲ್ಲಿ ಪ್ರಮುಖ ಮೈಲಿಗಲ್ಲು” ಎಂದು 2023-2024 ವಾಷಿಂಗ್ಟನ್ – ಸಿಯಾಟಲ್ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧನೆಯ ಫುಲ್‌ಬ್ರೈಟ್-ಕಲಾಂ ಕ್ಲೈಮೇಟ್ ಫೆಲೋ ಆಶ್ನಾ ಶರ್ಮಾ ತಿಳಿಸಿದ್ದಾರೆ.
ಇದನ್ನು ಓದಿ | Armed Drones: ಅಮೆರಿಕದಿಂದ ಭಾರತಕ್ಕೆ 31 ಎಂಕ್ಯೂ-9ಬಿ ಸಶಸ್ತ್ರ ಡ್ರೋನ್; ಇದು 4 ಶತಕೋಟಿ ಡಾಲರ್ ಡೀಲ್!
ಕಳೆದ 78 ವರ್ಷಗಳಲ್ಲಿ, U.S. ಸರ್ಕಾರದ ವಿಶ್ವಾದ್ಯಂತ ಫುಲ್‌ಬ್ರೈಟ್ ಕಾರ್ಯಕ್ರಮವು ಶಾಶ್ವತವಾದ ಸಂಬಂಧಗಳನ್ನು ನಿರ್ಮಿಸಿದೆ. ಹೆಚ್ಚಿನ ವಿವರಗಳಿಗಾಗಿ, www.usief.org.in ಗೆ ಭೇಟಿ ನೀಡಿ. ಅರ್ಜಿದಾರರು ತಮ್ಮ ಯಾವುದೇ ಪ್ರಶ್ನೆಗಳನ್ನು ip@usief.org.in ಗೆ ಕಳುಹಿಸಬಹುದು ಅಥವಾ ನವದೆಹಲಿ, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ ಅಥವಾ ಮುಂಬೈನಲ್ಲಿರುವ USIEF ಕಚೇರಿಗಳಲ್ಲಿ ಒಂದನ್ನು ಸಂಪರ್ಕಿಸಬಹುದು.