Most Powerful Countries: ವಿಶ್ವದ ಬಲಿಷ್ಠ ರಾಷ್ಟ್ರಗಳ ಪಟ್ಟಿ ಬಿಡುಗಡೆ; ಭಾರತಕ್ಕೆ ಎಷ್ಟನೇ ಸ್ಥಾನ? - Vistara News

ವಿದೇಶ

Most Powerful Countries: ವಿಶ್ವದ ಬಲಿಷ್ಠ ರಾಷ್ಟ್ರಗಳ ಪಟ್ಟಿ ಬಿಡುಗಡೆ; ಭಾರತಕ್ಕೆ ಎಷ್ಟನೇ ಸ್ಥಾನ?

Most Powerful Countries: ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರಗಳ ಪಟ್ಟಿ ಬಿಡುಗಡೆಯಾಗಿದೆ. ಈ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ ಚೀನಾ ಮತ್ತು ರಷ್ಯಾ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ಹಾಗಾದರೆ ಭಾರತಕ್ಕೆ ಎಷ್ಟನೇ ಸ್ಥಾನ? ಇಲ್ಲಿದೆ ಉತ್ತರ.

VISTARANEWS.COM


on

world
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂಯಾರ್ಕ್‌: ವಿಶ್ವದ ಪ್ರಬಲ ರಾಷ್ಟ್ರಗಳ (Most Powerful Countries) ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. 2024ರ ಯುಎಸ್‌ ನ್ಯೂಸ್‌ ಪವರ್‌ ರ‍್ಯಾಂಕಿಂಗ್‌ (2024 US News Power Rankings) ಪ್ರಕಾರ ಅಮೆರಿಕ ಮೊದಲ ಸ್ಥಾನದಲ್ಲಿದೆ. ಆ ಮೂಲಕ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಮುಂದುವರಿದಿದೆ. ತಾಂತ್ರಿಕ ಪ್ರಗತಿ ಮತ್ತು ಆರ್ಥಿಕ ಪ್ರಭಾವದಿಂದಾಗಿ ಚೀನಾ ಎರಡನೇ ಸ್ಥಾನದಲ್ಲಿದೆ.

ಭಾರತಕ್ಕೆ ಎಷ್ಟನೇ ಸ್ಥಾನ?

ಇನ್ನು ಭಾರತ ಮಹತ್ವದ ಪ್ರಗತಿ ಸಾಧಿಸಿದ್ದು, 12ನೇ ಸ್ಥಾನ ಪಡೆದಿದೆ. ದೃಢವಾದ ಆರ್ಥಿಕತೆ, ಬಲವಾದ ಅಂತಾರಾಷ್ಟ್ರೀಯ ಸಂಬಂಧ ಮತ್ತು ಪ್ರಭಾವಶಾಲಿ ಮಿಲಿಟರಿ ಶಕ್ತಿಯ ಕಾರಣದಿಂದ ಭಾರತ ಜಾಗತಿಕವಾಗಿ ಶಕ್ತಿಶಾಲಿ ದೇಸವಾಗಿ ಹೊರ ಹೊಮ್ಮುತ್ತಿದೆ. ವಿಶೇಷ ಎಂದರೆ ವಿಶ್ವದ ಜಿಡಿಪಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಅಮೆರಿಕ, ಚೀನಾ, ಜಪಾನ್‌ ಮತ್ತು ಜರ್ಮನಿ ಮೊದಲ 4 ಸ್ಥಾನವನ್ನು ಹಂಚಿಕೊಂಡಿರುವ ರಾಷ್ಟ್ರಗಳು.

ಮಾನದಂಡವೇನು?

ಈ ಪಟ್ಟಿಯನ್ನು ಪ್ರಮುಖ 5 ಅಂಶಗಳ ಆಧಾರದಲ್ಲಿ ತಯಾರಿಸಲಾಗಿದೆ.

  • ನಾಯಕತ್ವ
  • ಆರ್ಥಿಕ ಪ್ರಭಾವ
  • ರಾಜಕೀಯ ಪ್ರಭಾವ
  • ಅಂತಾರಾಷ್ಟ್ರೀಯ ಸಂಬಂಧ
  • ಮಿಲಿಟರಿ ಶಕ್ತಿ

ಒಂದು ದೇಶದ ಜನಸಂಖ್ಯೆಯೂ ಶ್ರೇಯಾಂಕದ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಮಾನವ ಬಂಡವಾಳ, ಶಿಕ್ಷಣ ಮತ್ತು ಜನಸಂಖ್ಯೆಯ ಕೌಶಲ್ಯಗಳು ಸಹ ಮುಖ್ಯವಾಗುತ್ತದೆ.

ಯಾವ ದೇಶಕ್ಕೆ ಯಾವ ಸ್ಥಾನ?

ತಂತ್ರಜ್ಞಾನ, ಹಣಕಾಸು ಮತ್ತು ಮನೋರಂಜನೆಯಂತಹ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಅಮೆರಿಕ ಗಾಡ ಪ್ರಭಾವ ಬೀರಿರುವುದರಿಂದ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಚೀನಾ ಕೃತಕ ಬುದ್ಧಿಮತ್ತೆ, 5ಜಿ ಕೇತ್ರದಲ್ಲಿ ಶಾಧಿಸುತ್ತಿರುವ ಪ್ರಗತಿ, ತಾಂತ್ರಿಕ ಶಕ್ತಿಯಿಂದಾಗಿ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿದೆ.

ರಷ್ಯಾ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಎನಿಸಿಕೊಂಡಿದೆ. ರಾಜಕೀಯ ಪ್ರಭಾವ, ಮಿಲಿಟರಿ ಶಕ್ತಿಯ ಪ್ರಭಾವದಿಂದ ಇದು ತನ್ನ ಮೂರನೇ ಸ್ಥಾನವನ್ನು ಕಾಪಾಡಿಕೊಂಡಿದೆ. ಹಸಿರು ಇಂಧನ ಮತ್ತು ತಂತ್ರಜ್ಞಾನಗಳ ಬಲದಿಂದ ಜರ್ಮನಿ ನಾಲ್ಕನೇ ರ‍್ಯಾಂಕ್‌ ಗಳಿಸಲುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್‌ ಐದನೇ ಸ್ಥಾನ ಪಡೆದುಕೊಂಡಿದೆ. ಪರಿಸರ ಸ್ನೇಹಿ ಉಪಕ್ರಮಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿರುವುದರಿಂದ ಇಂಗ್ಲೆಂಡ್‌ ಈ ಪಟ್ಟಿಯಲ್ಲಿ 5ನೇ ರ‍್ಯಾಂಕ್‌ ಹೊಂದಿದೆ.

ವಿಶ್ವದ ಬಲಿಷ್ಠ ಟಾಪ್‌ 10 ದೇಶಗಳು

ರ‍್ಯಾಂಕ್‌ದೇಶ
1ಅಮೆರಿಕ
2ಚೀನಾ
3ರಷ್ಯಾ
4ಜರ್ಮನಿ
5ಇಂಗ್ಲೆಂಡ್‌
6ಉತ್ತರ ಕೊರಿಯ
7ಫ್ರಾನ್ಸ್‌
8ಜಪಾನ್‌
9ಸೌದಿ ಅರೇಬಿಯಾ
10ಯುಎಇ
12ಭಾರತ

ಬದಲಾಗುತ್ತಿರುವ ಜಾಗತಿಕ ಶಕ್ತಿ

ಶ್ರೇಯಾಂಕಗಳು ಬದಲಾಗುತ್ತಿರುವ ಜಾಗತಿಕ ಶಕ್ತಿಯನ್ನು ಸೂಚಿಸುತ್ತದೆ. ಚೀನಾದ ತ್ವರಿತ ಪ್ರಗತಿ ಮತ್ತು ಭಾರತದಂತಹ ಉದಯೋನ್ಮುಖ ಆರ್ಥಿಕತೆಗಳು ಜಾಗತಿಕವಾಗಿ ಪ್ರಭಾವ ಬೀರುವುದನ್ನು ಪಟ್ಟಿ ತಿಳಿಸುತ್ತದೆ. ಹಸಿರು ಇಂಧನದತ್ತ ಹೆಚ್ಚಿದ ಗಮನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯನ್ನು ಆದ್ಯತೆಯಾಗಿ ಪರಿಗಣಿಸುತ್ತಿರುವುದು ಕೂಡ ಕಂಡು ಬರುತ್ತಿದೆ.

ಇದನ್ನೂ ಓದಿ: Corrupt Countries List: ಅತ್ಯಂತ ಹೆಚ್ಚು ಭ್ರಷ್ಟಾಚಾರ ಹೊಂದಿರುವ ದೇಶಗಳ ಪಟ್ಟಿ ಬಿಡುಗಡೆ; ಭಾರತಕ್ಕೆ ಎಷ್ಟನೇ ಸ್ಥಾನ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Rahat Fateh Ali Khan: ದುಬೈನಲ್ಲಿ ಪಾಕಿಸ್ತಾನದ ಗಾಯಕನ ಬಂಧನ; ಎಸಗಿದ ಕೃತ್ಯವೇನು?

Rahat Fateh Ali Khan: ಸಲ್ಮಾನ್‌ ಅಹ್ಮದ್‌ ಅವರು ದುಬೈ ಅಧಿಕಾರಿಗಳಿಗೆ ಗಾಯಕನ ವಿರುದ್ಧ ದೂರು ನೀಡಿದ್ದಾರೆ. ಮಾನಹಾನಿ ಕೇಸ್‌ ದಾಖಲಿಸಿದ್ದರು. ಬಂಧನದ ಬಳಿಕ ಗಾಯಕನನ್ನು ಬುರ್ಜ್‌ ದುಬೈ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಲಾಗಿದೆ ಎಂದು ವರದಿಯಾಗಿದೆ. ಆದರೆ, ಬಂಧನದ ವರದಿಗಳು ಹರಿದಾಡುತ್ತಲೇ ರಾಹತ್‌ ಫತೇಹ್‌ ಅಲಿ ಖಾನ್ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್‌ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

VISTARANEWS.COM


on

Rahat Fateh Ali Khan
Koo

ದುಬೈ: ಪಾಕಿಸ್ತಾನದ ಖ್ಯಾತ ಗಾಯಕ ರಾಹತ್‌ ಫತೇಹ್‌ ಅಲಿ ಖಾನ್ (Rahat Fateh Ali Khan) ಅವರನ್ನು ದುಬೈನಲ್ಲಿ ಬಂಧಿಸಲಾಗಿದೆ. ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈನಲ್ಲಿ ಇವರನ್ನು ಬಂಧಿಸಲಾಗಿದೆ. ರಾಹತ್‌ ಫತೇಹ್‌ ಅಲಿ ಖಾನ್‌ ಅವರ ಮಾಜಿ ಮ್ಯಾನೇಜರ್‌ ಸಲ್ಮಾನ್‌ ಅಹ್ಮದ್‌ (Salman Ahmed) ಅವರು ನೀಡಿದ ಮಾನಹಾನಿ ದೂರಿನ (Defamation Case) ಮೇರೆಗೆ ಗಾಯಕನನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್‌ ವರದಿ ಮಾಡಿದೆ. ಆದರೆ, ಬಂಧನದ ಸುದ್ದಿಯನ್ನು ರಾಹತ್‌ ಫತೇಹ್‌ ಅಲಿ ಖಾನ್‌ ನಿರಾಕರಿಸಿದ್ದಾರೆ.

“ಸಲ್ಮಾನ್‌ ಅಹ್ಮದ್‌ ಅವರು ದುಬೈ ಅಧಿಕಾರಿಗಳಿಗೆ ಗಾಯಕನ ವಿರುದ್ಧ ದೂರು ನೀಡಿದ್ದಾರೆ. ಮಾನಹಾನಿ ಕೇಸ್‌ ದಾಖಲಿಸಿದ್ದರು. ಬಂಧನದ ಬಳಿಕ ಗಾಯಕನನ್ನು ಬುರ್ಜ್‌ ದುಬೈ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ” ಎಂಬ ವರದಿಗಳು ಕೇಳಿಬಂದಿದ್ದವು. ಇದು ಜಾಗತಿಕ ಮಟ್ಟದಲ್ಲಿ ಖ್ಯಾತ ಗಾಯಕನಿಗೆ ಆದ ಅವಮಾನ ಎಂದೆಲ್ಲ ಹೇಳಲಾಗಿತ್ತು.

ರಾಹತ್‌ ಫತೇಹ್‌ ಅಲಿ ಖಾನ್‌ ಹೇಳುವುದೇನು?

ಬಂಧನದ ವರದಿಗಳು ಹರಿದಾಡುತ್ತಲೇ ರಾಹತ್‌ ಫತೇಹ್‌ ಅಲಿ ಖಾನ್ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್‌ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. “ನಾನು ದುಬೈಗೆ ನನ್ನ ಹಾಡುಗಳನ್ನು ರೆಕಾರ್ಡ್‌ ಮಾಡಲು ಬಂದಿದ್ದೇನೆ. ಹಾಡುಗಳ ಕುರಿತು ನನ್ನ ಕೆಲಸ ಅದ್ಭುತವಾಗಿ ಸಾಗುತ್ತಿದೆ. ಇಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಯಾರೂ ವದಂತಿಗಳಿಗೆ ಕಿವಿ ಕೊಡಬೇಡಿ” ಎಂಬುದಾಗಿ ಅಭಿಮಾನಿಗಳಿಗೆ ರಾಹತ್‌ ಫತೇಹ್‌ ಅಲಿ ಖಾನ್‌ ಅವರು ವಿಡಿಯೊ ಮೂಲಕ ಮನವಿ ಮಾಡಿದ್ದಾರೆ.

“ನನ್ನ ಅಭಿಮಾನಿಗಳು ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿ ಕೊಡಬಾರದು. ಕೆಲವೇ ದಿನಗಳಲ್ಲಿ ಜಗತ್ತಿನಾದ್ಯಂತ ಸೂಪರ್‌ ಹಿಟ್‌ ಆಗಲಿರುವ ಹಾಡಿಗಾಗಿ ಇಲ್ಲಿಗೆ ಬಂದಿದ್ದೇನೆ. ಯಾರೂ ಸುಳ್ಳು ಸುದ್ದಿಗಳನ್ನು ನಂಬಬಾರದು. ಹಾಗೆಯೇ, ನನ್ನ ವೈರಿಗಳು ಹರಡುವ ಇಂತಹ ಸುದ್ದಿಗಳನ್ನು ನಂಬಿ ನಿಮ್ಮ ಸಮಯವನ್ನು ಕೂಡ ಹಾಳು ಮಾಡಿಕೊಳ್ಳದಿರಿ. ನೀವೇ ನನ್ನ ಶಕ್ತಿ. ನನ್ನ ಕೇಳುಗರು ಹಾಗೂ ಅಭಿಮಾನಿಗಳೇ ನನ್ನ ಸಾಮರ್ಥ್ಯ. ಲವ್‌ ಯು ಆಲ್”‌ ಎಂದು ಪಾಕ್‌ ಗಾಯಕ ಹೇಳಿದ್ದಾರೆ.

ಇದನ್ನೂ ಓದಿ: Khalistani Terrorist: ಖಲಿಸ್ತಾನಿ ಭಯೋತ್ಪಾದಕ ಲಾಂಡಾನ ಪ್ರಮುಖ ಸಹಾಯಕ ಬಲ್ಜೀತ್ ಸಿಂಗ್ ಬಂಧನ

Continue Reading

ವೈರಲ್ ನ್ಯೂಸ್

Viral News: ಮಕ್ಕಳ ಹಸಿವು ನೀಗಿಸಲು ಸೈನಿಕರೆದುರು ಬೆತ್ತಲಾಗುತ್ತಿರುವ ಮಹಿಳೆಯರು!

Viral News: ಯುದ್ಧ ಪೀಡಿತ ಸುಡಾನ್‌ನಲ್ಲಿ ಮಹಿಳೆಯರು ತಮ್ಮ ಕುಟುಂಬದವರಿಗಾಗಿ ಆಹಾರವನ್ನು ಪಡೆಯಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಸುದ್ದಿ ಈಗ ಸಂಚಲನ ಮೂಡಿಸಿದೆ. ಸುಡಾನ್ ನಗರದ ಒಮ್ದುರ್ಮನ್‌ನಿಂದ ಪಲಾಯನ ಮಾಡಿದ ಅನೇಕ ಮಹಿಳೆಯರು ತಮ್ಮ ಕುಟುಂಬದವರ ಊಟಕ್ಕಾಗಿ ಆಹಾರವನ್ನು ಪಡೆಯಲು ಮತ್ತು ಹಣವನ್ನು ಸಂಗ್ರಹಿಸಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ದುಃಖ ತೋಡಿಕೊಂಡಿದ್ದಾರೆ.

VISTARANEWS.COM


on

Viral News
Koo

ಸುಡಾನ್: ಸೈನಿಕರನ್ನು ಜನರು ತಮ್ಮ ರಕ್ಷಕರೆಂದು (Viral News) ಭಾವಿಸುತ್ತಾರೆ. ಯಾಕೆಂದರೆ ಅವರು ಹಗಲಿರುಳೆನ್ನದೇ ದೇಶದ ಗಡಿಯಲ್ಲಿ ಕಾವಲು ಕಾಯುತ್ತಾ ಶತ್ರು ದೇಶದವರಿಂದ ಜನರ ಪ್ರಾಣವನ್ನು ಕಾಪಾಡುತ್ತಾರೆ. ಹಾಗಾಗಿ ಜನರು ಅವರಿಗೆ ಗೌರವವನ್ನು ನೀಡುತ್ತಾರೆ. ಆದರೆ ಅಂತಹ ಗೌರವದ ಸ್ಥಾನದಲ್ಲಿರುವ ಸೈನಿಕರು ತಮ್ಮ ಲೈಂಗಿಕ ದಾಹವನ್ನು ತೀರಿಸಿಕೊಳ್ಳಲು ದೇಶದ ಮಹಿಳೆಯರನ್ನು ಬಳಸಿಕೊಂಡರೆ? ಈ ಸುದ್ದಿ ಎಲ್ಲೆಡೆ ವೈರಲ್‌ ಆಗಿದೆ.

ಯುದ್ಧ ಪೀಡಿತ ಸುಡಾನ್‍ನಲ್ಲಿ ಜನ ಆಹಾರ ಇಲ್ಲದೆ ಬಳಲುತ್ತಿದ್ದಾರೆ. ಮಹಿಳೆಯರು ತಮ್ಮ ಕುಟುಂಬದವರಿಗಾಗಿ ಆಹಾರವನ್ನು ಪಡೆಯಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಆಘಾತಕರ ಸುದ್ದಿ ಬೆಳಕಿಗೆ ಬಂದಿದೆ. ಸುಡಾನ್ ನಗರದ ಒಮ್ದುರ್ಮನ್‍ನಿಂದ ಪಲಾಯನ ಮಾಡಿದ ಅನೇಕ ಮಹಿಳೆಯರು ತಮ್ಮ ಕುಟುಂಬದವರ ಊಟಕ್ಕಾಗಿ ಆಹಾರವನ್ನು ಪಡೆಯಲು ಮತ್ತು ಹಣವನ್ನು ಸಂಗ್ರಹಿಸಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆಗೆ ಒಳಗಾಗುವುದೊಂದೇ ಮಾರ್ಗವಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಮಹಿಳೆಯೊಬ್ಬರು, ತನ್ನ ಹೆತ್ತವರು ತುಂಬಾ ವಯಸ್ಸಾದವರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ತನಗೆ ಹೊರಗೆ ಹೋಗಿ ದುಡಿಯಲು ಆಗುತ್ತಿಲ್ಲ. ಹಾಗಾಗಿ ತಾನು ಸೈನಿಕರ ಬಳಿಗೆ ಹೋದಾಗ ಅವರ ಬಳಿ ಆಹಾರವನ್ನು ಪಡೆಯಲು ಅವರ ಜೊತೆ ಲೈಂಗಿಕ ಕ್ರಿಯೆ ನಡೆಸುವುದೊಂದೇ ಮಾರ್ಗವಾಗಿತ್ತು. ಅವರು ಕಾರ್ಖಾನೆಗಳ ಪ್ರದೇಶದಲ್ಲಿ ಎಲ್ಲೆಡೆ ಇದ್ದರು. ಹಾಗಾಗಿ ಕಳೆದ ವರ್ಷ ಮೇ ತಿಂಗಳಲ್ಲಿ ಮಾಂಸ ನೀಡುವ ಕಾರ್ಖಾನೆಯಲ್ಲಿ ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದರು ಎಂಬುದಾಗಿ ತಿಳಿಸಿದ್ದಾಳೆ.

ದೇಶದಲ್ಲಿ ಅಂತರ್ಯುದ್ಧ ಪ್ರಾರಂಭವಾದ ಕೂಡಲೇ ಈ ದೌರ್ಜನ್ಯ ಪ್ರಾರಂಭವಾದವು ಎಂದು ವರದಿಯಾಗಿದೆ. ಕಳೆದ ವರ್ಷ ಏಪ್ರಿಲ್ 15ರಂದು ಸಂಘರ್ಷ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಸಶಸ್ತ್ರ ಪುರುಷರಿಂದ ಅತ್ಯಾಚಾರದ ವರದಿಗಳು ಹೊರಬಂದವು. ಸುಡಾನ್‍ನಲ್ಲಿನ ಯುದ್ಧದಲ್ಲಿ ಹತ್ತಾರು ಜನರು ಸಾವನಪ್ಪಿದ್ದರು. ಕೆಲವು ಅಂದಾಜಿನ ಪ್ರಕಾರ ಸಾವಿನ ಸಂಖ್ಯೆ 150,000ದಷ್ಟಿದೆ ಎನ್ನಲಾಗಿತ್ತು. ಈ ಯುದ್ಧದಿಂದ ಇಲ್ಲಿನ ಜನರು ಸ್ಥಳಾಂತರಗೊಳ್ಳಬೇಕಾಯಿತು. ಇದು ದೇಶವನ್ನು ಕ್ಷಾಮದ ಅಂಚಿಗೆ ತಂದಿತ್ತು.

ಇದೀಗ ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಆರ್‌ಎಸ್‌ಎಫ್ ಹೋರಾಟಗಾರರು ವ್ಯವಸ್ಥಿತ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಭಯಾನಕ ಕಥೆಗಳನ್ನು ಹಂಚಿಕೊಳ್ಳಲು ಹಲವಾರು ಮಹಿಳೆಯರು ಮುಂದೆ ಬಂದಿದ್ದಾರೆ. ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಅವರಿಗೆ ಆಹಾರ, ಅಡುಗೆ ಉಪಕರಣಗಳು ಮತ್ತು ಸುಗಂಧ ದ್ರವ್ಯಗಳನ್ನು ನೀಡಲಾಗಿದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಅಲ್ಲದೇ ಸೈನಿಕರು ಮಹಿಳೆಯರನ್ನು ಪಾಳುಬಿದ್ದ ಮನೆಗಳಿಗೆ ಕರೆತಂದು ಅಲ್ಲಿ ಅವರನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ತಿಳಿಸುತ್ತಾರೆ. ಬಳಿಕ ತಮಗೆ ಇಷ್ಟ ಆದವರನ್ನು ಆಯ್ಕೆ ಮಾಡುತ್ತಾರೆ. ಲೈಂಗಿಕ ಕ್ರಿಯೆ ನಡೆಸಿ ಕಳುಹಿಸುತ್ತಾರೆ.

ಇದನ್ನೂ ಓದಿ: ವೃದ್ಧನ ಮೊಬೈಲ್‌ ಕಸಿದು ಓಡಿದ ಯುವಕನಿಗೆ ಯಾವ ಗತಿಯಾಯಿತು ನೋಡಿ!

ಇನ್ನೊಬ್ಬ ಮಹಿಳೆ ತಾನು ಸೈನಿಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ನಂತರ ಅವರು ತನಗೆ ಚಿತ್ರಹಿಂಸೆ ನೀಡಿದರು ಮತ್ತು ತನ್ನ ಕಾಲುಗಳನ್ನು ಸುಟ್ಟು ಹಾಕಿದರು ಎಂದು ಹೇಳಿದ್ದಾಳೆ.

Continue Reading

Latest

Viral Video: ಭವ್ಯ ರಥೋತ್ಸವ; ಪ್ಯಾರಿಸ್‌ ಬೀದಿಯಲ್ಲಿ ಸಾವಿರಾರು ತೆಂಗಿನ ಕಾಯಿ ಒಡೆದ ಹಿಂದೂಗಳು!

Viral Video: ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನ ಬೀದಿಯಲ್ಲಿ ಹಿಂದೂಗಳ ಗುಂಪೊಂದು ಭವ್ಯ ಮೆರವಣಿಗೆ ನಡೆಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಅವರು ದೇವರ ವಿಗ್ರಹವನ್ನು ರಥದಲ್ಲಿ ಇರಿಸಿ ಮೆರವಣಿಗೆಯಲ್ಲಿ ಸಾಗುತ್ತಿರುವುದು ಕಂಡುಬಂದಿದೆ. ದೇವರಿಗೆ ಸಾವಿರಾರು ತೆಂಗಿನ ಕಾಯಿಗಳನ್ನು ಬೀದಿಗಳಲ್ಲಿ ಒಡೆಯುತ್ತಿರುವ ದೃಶ್ಯ ಗಮನ ಸೆಳೆದಿದೆ.

VISTARANEWS.COM


on

Viral Video
Koo


ಪ್ಯಾರಿಸ್: ಭಾರತದ ಯಾವುದೇ ಸ್ಥಳಗಳಲ್ಲಿ ದೇವರ ಪೂಜೆ, ಮೆರವಣಿಗೆ ಸಹಜ. ಹಬ್ಬಗಳನ್ನು ಮೆರವಣಿಗೆ ಮೂಲಕ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ, ವಿಶೇಷವಾಗಿ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲೂ ಇಂಥ ಆಚರಣೆ ನಡೆಯುತ್ತಿರುವುದು ವಿಶೇಷ. ಇತ್ತೀಚಿಗೆ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನ ಬೀದಿಯಲ್ಲಿ ಹಿಂದೂಗಳ ಗುಂಪೊಂದು ಭವ್ಯ ಮೆರವಣಿಗೆ ನಡೆಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ.

ಈ ವಿಡಿಯೊದಲ್ಲಿ ಅವರು ದೇವರ ವಿಗ್ರಹವನ್ನು ರಥದಲ್ಲಿ ಇರಿಸಿ ಮೆರವಣಿಗೆಯಲ್ಲಿ ಸಾಗುತ್ತಿರುವುದು ಕಂಡುಬಂದಿದೆ. ಇದರಲ್ಲಿ ದೇವರಿಗೆ ಹಲವಾರು ಜನರು ಸಾವಿರಾರು ತೆಂಗಿನ ಕಾಯಿಗಳನ್ನು ಬೀದಿಗಳಲ್ಲಿ ಒಡೆಯುತ್ತಿರುವುದು ಕಾಣಿಸುತ್ತದೆ. ಈ ವಿಡಿಯೊಗೆ ಹಲವರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೊಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಈ ಮೆರವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೊಗೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, “ಫ್ರಾನ್ಸ್ ಹಿಜಾಬ್ ಅನ್ನು ನಿಷೇಧಿಸಲು ಬಯಸುತ್ತದೆ” ಎಂದು ಸೂಕ್ಷ್ಮವಾಗಿ ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರೊಬ್ಬರು, ” ಮೂರನೇ ವಿಶ್ವ ಹಿಂದೂ ಅಥವಾ ಮುಸ್ಲಿಂ ಎಂಬುದು ಮುಖ್ಯವಲ್ಲ” ಎಂದು ಬರೆದಿದ್ದಾರೆ. “ಈ ಚಟುವಟಿಕೆಗಳನ್ನು ನಡೆಸುತ್ತಿರುವ ಈ ಪುರುಷರು ಭಾರತೀಯರಲ್ಲ ಮತ್ತು ಅವರು ವಾಸ್ತವವಾಗಿ ಶ್ರೀಲಂಕಾದ ತಮಿಳು ಹಿಂದೂಗಳು”ಎಂದು ಕೆಲವು ಬಳಕೆದಾರರು ಗಮನ ಸೆಳೆದಿದ್ದಾರೆ. ಧಾರ್ಮಿಕ ಮೆರವಣಿಗೆಯಲ್ಲಿ ತೆಂಗಿನಕಾಯಿ ಒಡೆಯುವ ವೀಡಿಯೊವನ್ನು ಹಂಚಿಕೊಂಡ ಬಳಕೆದಾರೊಬ್ಬರು ಕೋಪದಿಂದ “ಆ ತೆಂಗಿನಕಾಯಿಯನ್ನು ಬೀದಿಯಲ್ಲಿ ವ್ಯರ್ಥ ಮಾಡುವುದರಿಂದ ಏನು ಪ್ರಯೋಜನ?” ಎಂದು ಪ್ರಶ್ನಿಸಿದ್ದಾರೆ.

ಒಬ್ಬ ಎಕ್ಸ್ ಬಳಕೆದಾರರು ಈ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಿ, ಅದಕ್ಕೆ ವಿವರಣೆಯನ್ನು ನೀಡಿದ್ದಾರೆ. ಇದು ಪ್ಯಾರಿಸ್‌ನ ಪ್ರವಾಸೋದ್ಯಮ ಅಭಿಯಾನದ ಭಾಗವಾಗಿದೆ ಮತ್ತು ಇದು ಪ್ಯಾರಿಸ್ ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಅಧಿಕೃತ ಕಾರ್ಯಕ್ರಮವಾಗಿದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ರೀಲ್ಸ್‌ ಮಾಡುವಾಗ ಕುತ್ತಿಗೆಗೆ ದಾರ ಬಿಗಿದು ಬಾಲಕ ಸಾವು; ವಿಡಿಯೊ ಇದೆ

ಫ್ರಾನ್ಸ್‌ ನಗರದ ಅಧಿಕೃತ ಪ್ರವಾಸೋದ್ಯಮ ವೆಬ್‌ಸೈಟ್ ಇಂತಹ ಬಹುಸಂಸ್ಕೃತಿಯ ಆಚರಣೆಗಳನ್ನು ಉಲ್ಲೇಖಿಸುತ್ತದೆ. ಇದರಲ್ಲಿ ಹಿಂದೂ ಸಮುದಾಯವು ಅನುಸರಿಸುವ ಸಂಪ್ರದಾಯಗಳೂ ಸೇರಿವೆ. ಇದು 2023ರ ಆಗಸ್ಟ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಸುಮಾರು ಎರಡು ದಶಕಗಳಿಂದ ನಡೆಸಲಾಗುತ್ತಿದೆ. ಇದನ್ನು ಮೊದಲು 2007ರಲ್ಲಿ ಪ್ರಾರಂಭಿಸಲಾಯಿತು ಎಂಬ ಮಾಹಿತಿಯನ್ನು ಕೆಲವರು ನೀಡಿದ್ದಾರೆ.

Continue Reading

ಪ್ರಮುಖ ಸುದ್ದಿ

Viral Video: ವೃದ್ಧನ ಮೊಬೈಲ್‌ ಕಸಿದು ಓಡಿದ ಯುವಕನಿಗೆ ಯಾವ ಗತಿಯಾಯಿತು ನೋಡಿ!

Viral Video: ಹಾಡಹಗಲಿನಲ್ಲಿಯೇ ವೃದ್ಧರೊಬ್ಬರ ಫೋನ್‌ ಅನ್ನು ಯುವಕ ಕಸಿದು ಓಡಿದ. 71 ವರ್ಷದ ವ್ಯಕ್ತಿಯೊಬ್ಬರು ತಮ್ಮ ಫೋನಿನಲ್ಲಿ ಮಾತನಾಡುತ್ತಾ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವಕ ಅವರ ಹತ್ತಿರ ಬಂದು ಈ ಕೃತ್ಯ ಎಸಗಿದ್ದ. ಪರಾರಿಯಾಗುತ್ತಿದ್ದಾಗ ಬಸ್ ಡಿಢೀರ್‌ ಎದುರಾಯಿತು, ಕಳ್ಳನಿಗೆ ಡಿಕ್ಕಿ ಹೊಡೆಯಿತು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

VISTARANEWS.COM


on

Viral Video
Koo


ಹಾಡಹಗಲೇ ಕಳ್ಳತನ ಮಾಡುವಂತಹ ಪ್ರಕರಣಗಳು ಹೆಚ್ಚಾಗಿವೆ. ಕಳ್ಳರು ಹೆಚ್ಚಾಗಿ ರಾತ್ರಿಯ ವೇಳೆ ಕಳ್ಳತನ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹಗಲಿನಲ್ಲಿಯೇ ತಮ್ಮ ಕಳ್ಳತನದ ಕೆಲಸ ಶುರು ಮಾಡಿಕೊಂಡಿದ್ದಾರೆ. ಅದರಲ್ಲೂ ಜನಸಂದಣಿ ಇರುವಂತಹ ಸ್ಥಳಗಳಲ್ಲಿಯೇ ಯಾವುದೇ ಭಯವಿಲ್ಲದೇ ಇಂತಹ ಘೋರ ಕೃತ್ಯ ಎಸಗುತ್ತಿದ್ದಾರೆ. ಮೊದಲೆಲ್ಲಾ ತಪ್ಪು ಮಾಡಿದವರಿಗೆ ಮುಂದಿನ ಜನ್ಮದಲ್ಲಿ ಶಿಕ್ಷೆ ಸಿಗುತ್ತದೆ ಎಂದು ಹೇಳುತ್ತಾರೆ. ಆದರೆ ಈಗ ತಪ್ಪು ಮಾಡಿದವರಿಗೆ ಅಂದೇ ದೇವರು ಶಿಕ್ಷೆ ವಿಧಿಸುತ್ತಾನೆ ಎಂಬುದಕ್ಕೆ ಬ್ರೆಜಿಲ್‍ನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಈ ದೃಶ್ಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್(Viral Video) ಆಗಿದೆ.

ಇತ್ತೀಚೆಗೆ ಬ್ರೆಜಿಲ್‍ನ ಸಾವೊ ಪಾಲೊದಲ್ಲಿ ಹಾಡುಹಗಲಿನಲ್ಲಿಯೇ ವೃದ್ಧರೊಬ್ಬರ ಸೆಲ್‍ಫೋನ್ ಅನ್ನು ಯುವಕ ಕಳ್ಳತನ ಮಾಡಿದ್ದಾನೆ. ಆದರೆ ಆತನ ತಪ್ಪಿಗೆ ದೇವರು ತಕ್ಕ ಶಿಕ್ಷಿ ವಿಧಿಸಿದ್ದಾನೆ. ಕದ್ದು ಓಡುತ್ತಿದ್ದ ಯುವಕನಿಗೆ ಬಸ್ ಡಿಕ್ಕಿ ಹೊಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ 71 ವರ್ಷದ ವ್ಯಕ್ತಿಯೊಬ್ಬರು ತಮ್ಮ ಫೋನಿನಲ್ಲಿ ಮಾತನಾಡುತ್ತಾ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವಕ ಅವರ ಹತ್ತಿರ ಬಂದು ವೃದ್ಧನ ಕೈಯಿಂದ ಫೋನ್ ಅನ್ನು ಕಸಿದುಕೊಂಡನು. ನಂತರ ಓಡುತಾ ರಸ್ತೆ ದಾಟಲು ಪ್ರಯತ್ನಿಸಿದಾಗ ಮುಂದೆ ಬರುತ್ತಿದ್ದ ಬಸ್‍ ಆತನಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಆದರೆ ಅವನಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಈ ಘಟನೆ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಾಗೇ ಇದಕ್ಕೆ ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಕೆಲವು ಬಳಕೆದಾರರು ಕಳ್ಳತನದ ಅಪರಾಧಿಗಳಿಗೆ ಇದು ತಕ್ಕ ಶಿಕ್ಷೆ ಎಂದು ಹೇಳಿದ್ದಾರೆ. ಹಾಗೇ ಕೆಲವರು ಕಳ್ಳತನ ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಉತ್ತಮ ಎಂದು ತಿಳಿಸಿದ್ದಾರೆ. ಇತರರು ಈ ಪರಿಸ್ಥಿತಿಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ, ಪಲಾಯನ ಮಾಡುವಾಗ ಕಳ್ಳನು ಮೂಲಭೂತ ಸುರಕ್ಷತಾ ನಿಯಮಗಳನ್ನು ಪಾಲಿಸಲು ವಿಫಲನಾಗಿರುವುದು ಅವನ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅತೀ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ; ಮೇಲೆ ಹಾರಿ ನೆಲಕ್ಕೆ ಅಪ್ಪಳಿಸಿದ ದಂಪತಿ

ಈ ಹಿಂದೆ ಕಳ್ಳನೊಬ್ಬ ಮಹಿಳೆಯ ಕೈಯಲ್ಲಿದ್ದ ಮೊಬೈಲ್ ಫೋನ್ ಕಿತ್ತುಕೊಂಡು ವೇಗವಾಗಿ ಓಡುತ್ತಾ ರಸ್ತೆ ದಾಟಲು ಮುಂದಾಗಿದ್ದು, ಈ ವೇಳೆ ವೇಗವಾಗಿ ಬಂದ ಕಾರೊಂದು ಆತನಿಗೆ ಡಿಕ್ಕಿಹೊಡೆದ ಪರಿಣಾಮ ಮೊಬೈಲ್ ಕಳ್ಳ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ಯಾವಾಗ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾರು ಡಿಕ್ಕಿಯಾದ ರಭಸಕ್ಕೆ ಆತ ಗಾಳಿಯಲ್ಲಿ ಎತ್ತರಕ್ಕೆ ಹಾರಿ ರಸ್ತೆ ಮೇಲೆ ಬೀಳುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.

Continue Reading
Advertisement
Chaluvadi Narayanaswamy
ಕರ್ನಾಟಕ31 mins ago

Chaluvadi Narayanaswamy : ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್​​ನ ಪ್ರತಿಪಕ್ಷದ ನಾಯಕ

NEET
ಕರ್ನಾಟಕ45 mins ago

NEET: ನೀಟ್‌ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

DK Shivakumar
ಕರ್ನಾಟಕ1 hour ago

DK Shivakumar: ರೈತನಿಗೆ ಪ್ರವೇಶ ನಿರ್ಬಂಧ ಖಂಡನೀಯ; ಮಾಲ್ ಸೇರಿ ಇತರೆಡೆ ಶೀಘ್ರ ವಸ್ತ್ರ ಸಂಹಿತೆ ಜಾರಿ ಎಂದ ಡಿಕೆಶಿ

Veerabaswanthreddy Mudnal
ಶ್ರದ್ಧಾಂಜಲಿ1 hour ago

Veerabaswanthreddy Mudnal: ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಅನಾರೋಗ್ಯದಿಂದ ನಿಧನ

Rahat Fateh Ali Khan
ವಿದೇಶ2 hours ago

Rahat Fateh Ali Khan: ದುಬೈನಲ್ಲಿ ಪಾಕಿಸ್ತಾನದ ಗಾಯಕನ ಬಂಧನ; ಎಸಗಿದ ಕೃತ್ಯವೇನು?

Valmiki Corporation Scam
ಕರ್ನಾಟಕ2 hours ago

Valmiki Corporation Scam: ಬಿ. ನಾಗೇಂದ್ರ ಹೆಸರೇಳುವಂತೆ ಒತ್ತಡ; ಇಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Tata Curvv
ಆಟೋಮೊಬೈಲ್2 hours ago

Tata Curvv : ಎಸ್​ಯುವಿ ವಿಭಾಗದಲ್ಲಿ ವಿಭಿನ್ನ ವಿನ್ಯಾಸದ ಕಾರನ್ನು ಪರಿಚಯಿಸಿದ ಮಾಡಿದ ಟಾಟಾ

Kempambudi lake encroachment cleared soon says DCM DK Shivakumar
ಕರ್ನಾಟಕ2 hours ago

Assembly Session 2024: ಕೆಂಪಾಂಬುದಿ ಕೆರೆ ಒತ್ತುವರಿ ಶೀಘ್ರ ತೆರವು; ಡಿ.ಕೆ.ಶಿವಕುಮಾರ್

Viral Video
ವೈರಲ್ ನ್ಯೂಸ್2 hours ago

Viral Video: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 10 ಅಡಿ ಮೇಲಕ್ಕೆ ಹಾರಿ ಬಿದ್ದ ತಾಯಿ, ಮಗ

TA Sharavana questioned about the continuous variation in the service of 108 Ambulance even after 7 years there is no new tender
ಬೆಂಗಳೂರು2 hours ago

TA Sharavana: 108 ಆಂಬ್ಯುಲೆನ್ಸ್‌ಗೆ 7 ವರ್ಷ ಕಳೆದರೂ ಹೊಸ ಟೆಂಡರ್‌ ಇಲ್ಲ ಯಾಕೆ? ಟಿ. ಎ. ಶರವಣ ಪ್ರಶ್ನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ2 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ3 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ3 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ6 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌