Site icon Vistara News

Future Leaders | ವಿಶ್ವಸಂಸ್ಥೆಯಲ್ಲಿ ಇಂಪ್ಯಾಕ್ಟ್ ಪ್ರಾಜೆಕ್ಟ್ ಮಂಡಿಸಲಿದ್ದಾರೆ ಬೆಂಗಳೂರಿನ 14 ವಿದ್ಯಾರ್ಥಿಗಳು

Future Leaders

ನವದೆಹಲಿ: ಭವಿಷ್ಯದ ನಾಯಕರು ಪರಿಕಲ್ಪನೆಯ ಆಧಾರದ ಮೇಲೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಒನ್ ಮಿಲಿಯನ್ ಫಾರ್ ಒನ್ ಬಿಲಿಯನ್(1M1B) ಫ್ಲ್ಯಾಗ್‌ಶಿಪ್ ಪ್ರೋಗ್ರಾಮ್‌ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ 14 ವಿದ್ಯಾರ್ಥಿಗಳನ್ನು ಆಯ್ಕೆಯಾಗಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿರುವ ವಾರ್ಷಿಕ 1M1B ಆಕ್ಟಿವೇಟ್ ಇಂಪ್ಯಾಕ್ಟ್ ಶೃಂಗದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪ್ರಭಾವವನ್ನು ಪ್ರದರ್ಶಿಸಲು ಅವಕಾಶವು ದೊರೆಯಲಿದೆ. 1M1B ಬೆಂಗಳೂರು ಮೂಲದ ಸಾಮಾಜಿಕ ನಾವೀನ್ಯತೆಯಾಗಿದ್ದು, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ(SDGs)ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ(Future Leaders).

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅನುಗುಣವಾಗಿ ಸಾಮಾಜಿಕ ಸಮಸ್ಯೆಗಳನ್ನು ಸಮರ್ಥನೀಯ ರೀತಿಯಲ್ಲಿ ನಿಭಾಯಿಸುವ ಹೊಸ ಪೀಳಿಗೆಯ ಸಾಮಾಜಿಕ ಪ್ರಜ್ಞೆಯ ನಾಯಕರನ್ನು ಸೃಷ್ಟಿಸುವ ಗುರಿಯನ್ನು ಈ ಪ್ರೋಗ್ರಾಮ್ ಹೊಂದಿದೆ. ಬಡತನದಿಂದ ನಿರುದ್ಯೋಗದವರೆಗೆ ಮತ್ತು ಮಾನಸಿಕ ಆರೋಗ್ಯದವರೆಗೆ ವೇತನದ ಅಂತರ ಮತ್ತು ಜಾಗತಿಕ ಮಟ್ಟದಲ್ಲಿ ಅವುಗಳ ಪ್ರಭಾವದವರೆಗೆ ತಮ್ಮ ಯೋಜನೆಗಳನ್ನು ಪ್ರದರ್ಶಿಸಲು ಯುವ ಬದಲಾವಣೆ ಮಾಡುವವರಿಗೆ ಶೃಂಗಸಭೆಯು ವೇದಿಕೆಯಾಗಿದೆ.

ಬೆಂಗಳೂರಿನ 14 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಇಂಪ್ಯಾಕ್ಟ್ ಪ್ರಾಜೆಕ್ಟ್ ಅನ್ನು ವಿಶ್ವಸಂಸ್ಥೆಯಲ್ಲಿ ಡಿಸೆಂಬರ್ 14ರಂದು ಮಂಡಿಸಲಿದ್ದಾರೆ. ಮಾನಸಿಕ ಆರೋಗ್ಯ ಜಾಗೃತಿ, ಆರೋಗ್ಯ ವಿಮೆ ಪಡೆಯಲು ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರಿಗೆ ನೆರವು ಒದಗಿಸುವುದು, ಮುಟ್ಟಿನ ನೈರ್ಮಲ್ಯ, ನೀರಿನ ಬಿಕ್ಕಟ್ಟು ಮತ್ತು ಇತರ ಶಿಕ್ಷಣದ ಪರಿಹಾರದ ವಿಷಯಗಳನ್ನು ಈ ಇಂಪ್ಯಾಕ್ಟ್ ಪ್ರಾಜೆಕ್ಟ್ ಹೊಂದಿದೆ.

ಇದನ್ನೂ ಓದಿ | Historical Change | ಭಾರತದಲ್ಲಿ 15 ವರ್ಷಗಳಲ್ಲಿ 41.5 ಕೋಟಿ ಮಂದಿ ಬಡತನದಿಂದ ಪಾರು: ವಿಶ್ವಸಂಸ್ಥೆ

Exit mobile version