Site icon Vistara News

Gaalipata-2 | ಟ್ರೈಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್; ಯಾವಾಗ ಗೊತ್ತಾ?

ಗಾಳಿಪಟ-2

ಬೆಂಗಳೂರು: ‘ಗೋಲ್ಡನ್‌ ಸ್ಟಾರ್’ ಖ್ಯಾತಿಯ ನಟ ‌ಗಣೇಶ್‌ ಹಾಗೂ ಯೋಗರಾಜ್‌ ಭಟ್‌ ಕಾಂಬಿನೇಷನ್‌ನ ಮತ್ತೊಂದು ಚಿತ್ರ ಸದ್ಯ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹಿಂದೆ ದಾಖಲೆ ಬರೆದಿದ್ದ ʼಗಾಳಿಪಟʼ ಸಿನಿಮಾದಂತೆಯೇ ‘ಗಾಳಿಪಟ-2’ (Gaalipata-2) ಕೂಡ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈಗಾಗಲೇ ಹಾಡುಗಳು ಮತ್ತು ಟೀಸರ್‌ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಚಿತ್ರದ ಟ್ರೈಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್‌ ಆಗಿದೆ.

ಜುಲೈ 31ಕ್ಕೆ ‘ಗೋಲ್ಡನ್‌ ಸ್ಟಾರ್’ ‌ಗಣೇಶ್‌ ಹಾಗೂ ಯೋಗರಾಜ್‌ ಭಟ್‌ ಕಾಂಬಿನೇಷನ್‌ನ ‘ಗಾಳಿಪಟ-2’ ಟ್ರೈಲರ್‌ ರಿಲೀಸ್‌ ಆಗಲಿದೆ. ಸಿನಿಮಾ ಆಗಸ್ಟ್‌ 12ರಂದು ತೆರೆಗೆ ಬರಲಿದ್ದು, ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಕೂಡ ನಿರೀಕ್ಷೆಗೆ ತಕ್ಕಂತೆ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಹಾಡುಗಳು ಮತ್ತು ಟೀಸರ್‌ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳ ಎದೆಬಡಿತ ಹೆಚ್ಚಿಸಿರುವ ‘ಗಾಳಿಪಟ-2’ ಮತ್ತೊಂದು ರೆಕಾರ್ಡ್‌ ಸೃಷ್ಟಿಸಲು ಸಕಲ ರೀತಿಯಲ್ಲೂ ಸಜ್ಜಾಗಿದೆ.

ಇದನ್ನೂ ಓದಿ | Lucky Man Movie | ನಟ ಪುನೀತ್ ರಾಜಕುಮಾರ್ ಅಭಿನಯದ ಲಕ್ಕಿ ಮ್ಯಾನ್ ಸಿನಿಮಾದ ಟೀಸರ್ ಔಟ್‌

ನಿರೀಕ್ಷೆಗಳ ಭಾರ!
ಸ್ಯಾಂಡಲ್‌ವುಡ್‌ ಇದೀಗ ಹಾಲಿವುಡ್‌ ಲೆವೆಲ್‌ಗೆ ಬೆಳೆದು ನಿಂತಿದೆ. ಕೊರೊನಾ ಕಂಟಕ ಕಳೆದ ಬಳಿಕ ಸಾಲು ಸಾಲು ಹಿಟ್‌ ಸಿನಿಮಾಗಳು ಕನ್ನಡದಲ್ಲಿ ರಿಲೀಸ್‌ ಆಗಿ ಹೊಸ ನಿರೀಕ್ಷೆ ಮೂಡಿಸುತ್ತಿವೆ. ಇದರ ಜತೆ ಸ್ಯಾಂಡಲ್‌ವುಡ್‌ ಚಿತ್ರಗಳ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಕೂಡ ನೂರಾರು ಕೋಟಿ ಮುಟ್ಟುತ್ತಿದೆ. ಹೀಗೆ ಕನ್ನಡ ಸಿನಿ ರಂಗದ ಬಹುನಿರೀಕ್ಷಿತ ಸಿನಿಮಾಗಳ ಸಾಲಿಗೆ ‘ಗೋಲ್ಡನ್‌ ಸ್ಟಾರ್’ ‌ಗಣೇಶ್‌ ಅಭಿನಯದ ‘ಗಾಳಿಪಟ-2’ ಕೂಡ ಸೇರಿದೆ. ಹೀಗಾಗಿ ಕೋಟ್ಯಂತರ ಫ್ಯಾನ್ಸ್‌ ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.

ಈ ಹಿಂದೆ ‘ಗೋಲ್ಡನ್‌ ಸ್ಟಾರ್’ ‌ಗಣೇಶ್‌ ಅವರ ಹುಟ್ಟುಹಬ್ಬಕ್ಕೆ ‘ಗಾಳಿಪಟ-2’ ಚಿತ್ರತಂಡ 2ನೇ ಹಾಡು ರಿಲೀಸ್‌ ಮಾಡಿತ್ತು. ‘ನಾನಾಡದ ಮಾತೆಲ್ಲವ’ ಎಂಬ ರೊಮ್ಯಾಂಟಿಕ್‌ ಹಾಡು ಈಗಾಗಲೇ 3 ಮಿಲಿಯನ್‌ ವೀಕ್ಷಣೆಯ ಗಡಿ ತಲುಪಿದೆ. ಅದಕ್ಕೂ ಮೊದಲು ರಿಲೀಸ್‌ ಆಗಿದ್ದ ‘ಎಕ್ಸಾಮ್’ ಸಾಂಗ್‌ ಕೂಡ ಮೋಡಿ ಮಾಡಿ ಬರೋಬ್ಬರಿ 7 ಮಿಲಿಯನ್‌ಗೂ ಹೆಚ್ಚು ಜನರು ಯುಟ್ಯೂಬ್‌ನಲ್ಲಿ ಇದನ್ನು ವೀಕ್ಷಿಸಿದ್ದರು. ಇದೀಗ ಟ್ರೈಲರ್‌ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದ್ದು, ಸದ್ಯ ‘ಗೋಲ್ಡನ್‌ ಸ್ಟಾರ್’ ‌ಗಣೇಶ್‌ ಅಭಿಮಾನಿಗಳು ಬಹಳ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ | Liger | ಲೈಗರ್ ಸಿನಿಮಾದ ಥೀಮ್ ಸಾಂಗ್ ರಿಲೀಸ್‌: ಸಖತ್‌ ಮಾಸ್‌ ಸಾಂಗ್‌ ಎಂದ ಫ್ಯಾನ್ಸ್‌

Exit mobile version