Site icon Vistara News

ಶಾಪಿಂಗ್‌ ಕರೆದುಕೊಂಡು ಹೋಗದಿದ್ದಕ್ಕೆ ಮುನಿಸಿಕೊಂಡ ಬಾಲಕಿ ಆತ್ಮಹತ್ಯೆ

suicide

ಬೆಂಗಳೂರು: ಮನೆಯವರು ಶಾಪಿಂಗ್‌ ಕರೆದುಕೊಂಡು ಹೋಗದೇ ಇದ್ದುದಕ್ಕೆ ಬೇಸರಿಸಿದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.

5ನೇ ತರಗತಿ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಬ್ಬದ ಹಿನ್ನೆಲೆಯಲ್ಲಿ ಪೋಷಕರು ಬಟ್ಟೆ ಖರೀದಿಗೆ ಮುಂದಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಬಾಲಕಿಗೆ ಬಟ್ಟೆ ಕೊಡಿಸಿದ್ದರು ಹೀಗಾಗಿ ಆಕೆಯನ್ನು ಬಿಟ್ಟು ಉಳಿದವರಿಗೆ ಬಟ್ಟೆ ಕೊಡಿಸಲು ಮುಂದಾಗಿದ್ದರು. ಅದರಂತೆ ಶನಿವಾರ ಸಂಜೆ ಆಕೆಯನ್ನು ಬಿಟ್ಟು ಇನ್ನಿಬ್ಬರು ಮಕ್ಕಳ ಜತೆ ಬಟ್ಟೆ ಖರೀದಿಗೆ ತೆರಳಿದ್ದರು. ಇದೇ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದಾಗ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version