ಬೆಂಗಳೂರು: ನಗರದಲ್ಲಿ ನಡೆದ ಅಪ್ರತಿಮ ಕ್ರೀಡಾಪಟುಗಳ ನಡುವಿನ ಬಿರುಸಿನ ಬಾಕ್ಸಿಂಗ್ ಪಂದ್ಯಗಳು (Grassroot Boxing) ಕ್ರೀಡಾಭಿಮಾನಿಗಳಲ್ಲಿ ರೋಚಕತೆ ಮೂಡಿಸಿದವು. ಭಾರತದ ಮೂಲೆಮೂಲೆಯ ಶ್ರೇಷ್ಠ ಬಾಕ್ಸರ್‌ಗಳು ನಗರದಲ್ಲಿ ಮುಖಾಮುಖಿಯಾಗಿದ್ದು, ಕ್ರೀಡಾ ಉತ್ಸಾಹಿಗಳಲ್ಲಿ ಸಂಚಲನ ಮೂಡಿಸಿತು.
ಗ್ರಾಸ್ರೂಟ್ ಬಾಕ್ಸಿಂಗ್ ಈ ಜಟ್ಟಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಅವರ ಬಾಕ್ಸಿಂಗ್ ದಾಖಲೆಗಳನ್ನು ಹೆಚ್ಚಿಸಲು ಅತ್ಯುತ್ತಮ ವೇದಿಕೆಯನ್ನು ರೂಪಿಸಿತ್ತು. ಈ ವೇದಿಕೆಯು ಕ್ರೀಡಾಪಟುಗಳನ್ನು ವೃತ್ತಿಪರ ಪಂದ್ಯಗಳಿಗೆ ಸಜ್ಜುಗೊಳಿಸುವುದರ ಜತೆಗೆ ಬಾಕ್ಸಿಂಗ್ ಪಂದ್ಯವನ್ನು ಭಾರತದಲ್ಲಿ ಪ್ರೋತ್ಸಾಹಿಸುವ ಆಶಯವನ್ನು ಹೊಂದಿದೆ.
44 ಬಾಕ್ಸರ್‌ಗಳು ಸ್ಪರ್ಧೆಯಲ್ಲಿ ಕಣಕ್ಕೆ
ಒಟ್ಟು 44 ಬಾಕ್ಸರ್‌ಗಳು ಈ ಅತ್ಯುನ್ನತ ಸ್ಪರ್ಧೆಯಲ್ಲಿ ಕಣಕ್ಕೆ ಇಳಿದಿದ್ದು, ಸ್ಪರ್ಧಿಗಳ ಪೈಕಿ 94 ಕೆಜಿ ವಿಭಾಗದಲ್ಲಿ ತಹೇರ್ ಖುರಾಮ್, 53.523 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಮಜರ್ ಹುಸೇನ್ ಮತ್ತು ವಿಕ್ರಂ ಸಿಂಗ್ ಜೇಷ್ಠ, 50.802 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಪ್ರದೀಶ್ ಎ, 52.163 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಮೊಹಮ್ಮದ್ ಶಮಿನ್ ಸೇರಿದಂತೆ ಹಲವಾರು ಸ್ಪರ್ಧಿಗಳು ಗೆಲುವಿನ ಕಿರಿಟವನ್ನು ಮುಡಿಗೇರಿಸಿಕೊಂಡರು.
ಇದನ್ನೂ ಓದಿ: Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್ ಯಾವಾಗ ಆರಂಭ? ಬೃಹತ್ ಕ್ರೀಡಾಕೂಟಕ್ಕೆ ನಡೆಸಿರುವ ಸಿದ್ಧತೆಗಳೇನು?
ಈ ಕುರಿತು ಗ್ರಾಸ್ರೂಟ್ ವ್ಯವಸ್ಥಾಪಕ ಮುಜ್ತಬ ಕಮಲ್ ಮಾತನಾಡಿ, ಪ್ರತಿಭೆಗಳನ್ನು ಪ್ರೋತ್ಸಾಹಿಸುವುದೇ ನಮ್ಮ ಗುರಿ. ಅದಕ್ಕಾಗಿ ನಾವು ವೇದಿಕೆಯನ್ನು ಒದಗಿಸಲು ಸದಾ ಸಿದ್ಧ ಎಂದು ತಿಳಿಸಿದರು.
ಗ್ರಾಸ್ರೂಟ್ ಬಾಕ್ಸಿಂಗ್, ತಳಮಟ್ಟದಿಂದ ಪ್ರತಿಭೆಯನ್ನು ಪೋಷಿಸುವುದರೆಡೆಗೆ ಗಮನಹರಿಸುತ್ತಿದೆ. ಇದು ಯುವ ಮತ್ತು ಹವ್ಯಾಸಿ ಬಾಕ್ಸರ್‌ಗಳ ಕೌಶಲ್ಯಗಳನ್ನು ಗೌರವಿಸಲು ರೂಪಿಸಲಾಗಿದೆ. ಅಗತ್ಯ ಸಂಪನ್ಮೂಲಗಳು, ತರಬೇತಿ ಮತ್ತು ವೃತ್ತಿ ನಿರ್ಮಾಣ ಅವಕಾಶಗಳನ್ನು ಒದಗಿಸುವ ಮೂಲಕ, ತಳಮಟ್ಟದ ಉಪಕ್ರಮಗಳು ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸಬಹುದಾದ ನುರಿತ ಕ್ರೀಡಾಪಟುಗಳ ತಂಡವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಈ ಸ್ಪರ್ಧೆಯಲ್ಲಿನ ಗೆಲುವು ವಿಜೇತರಿಗೆ ಅಂತಾರಾಷ್ಟ್ರೀಯ ಮನ್ನಣೆಗೆ ಅವಕಾಶದ ಬಾಗಿಲು ತೆರೆಯುವಂತೆ ಮಾಡುತ್ತದೆ. ಈ ಮಾನ್ಯತೆ ಅವರ ಬಾಕ್ಸಿಂಗ್ ದಾಖಲೆಗಳನ್ನು ಹೆಚ್ಚಿಸುವುದು ಮಾತ್ರವಲ್ಲದೆ ಭವಿಷ್ಯದ ಅವಕಾಶಗಳು ಮತ್ತು ಜಾಗತಿಕ ಬಾಕ್ಸಿಂಗ್ ಸಮುದಾಯದಲ್ಲಿ ಗುರುತಿಸುವಿಕೆಗಾಗಿ ವೇದಿಕೆಯಾಗಲಿದೆ ಎಂದರು.
ಭಾರತೀಯ ವೃತ್ತಿಪರ ಬಾಕ್ಸಿಂಗ್ ಅನ್ನು ವಿಶ್ವ ವೇದಿಕೆಗೆಯೆಡೆಗೆ ಕೊಂಡೊಯ್ಯುವುದು ಇದರ ಉದ್ದೇಶವಾಗಿದೆ. ಭಾರತ ಮತ್ತು ಏಷ್ಯಾದಲ್ಲಿ ಕ್ರೀಡಾಪಟುಗಳ ನಿರ್ವಹಣೆ, ಪ್ರಚಾರಗಳು ಮತ್ತು ಒಟ್ಟಾರೆ ವೃತ್ತಿಪರ ಬಾಕ್ಸಿಂಗ್ ನಿರ್ವಹಣೆಯಲ್ಲಿ ಟ್ರಯಲ್ ಬ್ಲೇಜರ್ ಆಗಿರುವ ಗ್ರಾಸ್ರೂಟ್ ಬಾಕ್ಸಿಂಗ್, ದೇಶದ ಹಲವು ಅಸಾಧಾರಣ ಬಾಕ್ಸರ್‌ಗಳ ವೃತ್ತಿಜೀವನವನ್ನು ಯಶಸ್ವಿಯಾಗಿ ರೂಪಿಸಿದೆ.
ಇದನ್ನೂ ಓದಿ: Teachers Recruitment: 10 ಸಾವಿರ ಶಿಕ್ಷಕರ ನೇಮಕಕ್ಕೆ ಶೀಘ್ರದಲ್ಲೇ ಅಧಿಸೂಚನೆ: ಸಚಿವ ಮಧು ಬಂಗಾರಪ್ಪ
ಇಲ್ಲಿಯವರೆಗೆ ಗ್ರಾಸ್ರೂಟ್ ಬಾಕ್ಸಿಂಗ್ ಭಾರತ, ಯುಎಇ, ಥೈಲ್ಯಾಂಡ್ ಮತ್ತು ಉಗಾಂಡಾದಾದ್ಯಂತ 41 ವೃತ್ತಿಪರ ಬಾಕ್ಸಿಂಗ್ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ವೃತ್ತಿಪರ ಬಾಕ್ಸರ್‌ಗಳ ಅಪಾರ ಸಾಮರ್ಥ್ಯದ ಬಗ್ಗೆ ದೃಢವಾದ ನಂಬಿಕೆಯೊಂದಿಗೆ, ಗ್ರಾಸ್ರೂಟ್ ಬಾಕ್ಸಿಂಗ್ ಅಥ್ಲೀಟ್ ನಿರ್ವಹಣೆಯಲ್ಲಿ ಮ್ಯಾಚ್ರೂಮ್, ಟಾಪ್ರಾಂಕ್, ಗೋಲ್ಡನ್ ಬಾಯ್ ಮತ್ತು ಕ್ರೀಡೆಯಲ್ಲಿನ ಇತರ ಪ್ರಮುಖ ಘಟಕಗಳನ್ನು ಒಳಗೊಂಡಂತೆ ವಿಶ್ವಾದ್ಯಂತ ಪ್ರಸಿದ್ಧ ಬಾಕ್ಸಿಂಗ್ ಪ್ರಚಾರ ಸಹಯೋಗವನ್ನು ಪ್ರಾರಂಭಿಸಿದೆ.